2019 ರ ಹಣಕಾಸು ವರ್ಷದಲ್ಲಿ ಪಾರ್ಲೇ ಬಿಸ್ಕೆಟ್ಸ್ ನಿವ್ವಳ ಲಾಭ ಶೇ.15 ರಷ್ಟು ಏರಿಕೆ!

ಖಾಸಗಿ ಒಡೆತನದ ಪಾರ್ಲೇ ಬಿಸ್ಕೆಟ್ಸ್ ಸಂಸ್ಥೆಯ ನಿವ್ವಳ ಲಾಭ ವರ್ಷದಿಂದ-ವರ್ಷದ ಆಧಾರದಲ್ಲಿ 2018-2019 ನೇ ಹಣಕಾಸು ವರ್ಷದಲ್ಲಿ ಶೇ.15 ರಷ್ಟು ಏರಿಕೆಯಾಗಿದೆ. 
2019 ರ ಹಣಕಾಸು ವರ್ಷದಲ್ಲಿ ಪಾರ್ಲೇ ಬಿಸ್ಕೆಟ್ಸ್ ನಿವ್ವಳ ಲಾಭ ಶೇ.15 ರಷ್ಟು ಏರಿಕೆ!
2019 ರ ಹಣಕಾಸು ವರ್ಷದಲ್ಲಿ ಪಾರ್ಲೇ ಬಿಸ್ಕೆಟ್ಸ್ ನಿವ್ವಳ ಲಾಭ ಶೇ.15 ರಷ್ಟು ಏರಿಕೆ!

ನವದೆಹಲಿ: ಖಾಸಗಿ ಒಡೆತನದ ಪಾರ್ಲೇ ಬಿಸ್ಕೆಟ್ಸ್ ಸಂಸ್ಥೆಯ ನಿವ್ವಳ ಲಾಭ ವರ್ಷದಿಂದ-ವರ್ಷದ ಆಧಾರದಲ್ಲಿ 2018-2019 ನೇ ಹಣಕಾಸು ವರ್ಷದಲ್ಲಿ ಶೇ.15 ರಷ್ಟು ಏರಿಕೆಯಾಗಿದೆ. 
 
ಪಾರ್ಲೇಜಿ ಸೇರಿದಂತೆ ಇತರ ಬಿಸ್ಕೆಟ್ ಉತ್ಪಾದನಾ ಸಂಸ್ಥೆಗಳು ಜಿಎಸ್ ಟಿ ಕಡಿತಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿವೆ. ಉದ್ಯಮ ವೇದಿಕೆ ಟೋಫ್ಲರ್ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಕಳೆದ ವರ್ಷ 355 ಕೋಟಿ ರೂಪಾಯಿಯಿದ್ದ ಸಂಸ್ಥೆಯ ನಿವ್ವಳ ಆದಾಯ, 
ಈ ವರ್ಷ 410 ಕೋಟಿಗೆ ಏರಿಕೆಯಾಗಿದೆ. ಒಟ್ಟಾರೆ ಆದಾಯ ಶೇ.6.4 ರಷ್ಟು ಏರಿಕೆಯಾಗಿದೆ. ಬೇರೆ ಆದಾಯ ಶೇ.26 ರಷ್ಟು ಏರಿಕೆಯಾಗಿದೆ. 

ಶೇ.18 ರಷ್ಟು ಜಿಎಸ್ ಟಿ ವಿಧಿಸಿದ ನಂತರ ಎಂಟ್ರಿ ಲೆವೆಲ್ ಬಿಸ್ಕೇಟ್ ಗಳಿಗೆ ಬೇಡಿಕೆ ಕುಸಿದು, ಬೆಳವಣಿಗೆ ನಿಧಾನವಾಗಿತ್ತು ಈ ಹಿನ್ನೆಲೆಯಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗುವ ಮುನ್ಸೂಚನೆಯನ್ನು ಪಾರ್ಲೇಜಿ ಆಗಸ್ಟ್ ತಿಂಗಳಲ್ಲಿ ನೀಡಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com