ಮುಂಬೈ : ದೇಶಿಯ ಕರೆನ್ಸಿಯಲ್ಲಿ ಹೆಚ್ಚಿನ ಮೌಲ್ಯಹೊಂದಿರುವ 2 ಸಾವಿರ ರೂಪಾಯಿ ನೋಟು ಮುದ್ರಿಸುವುದನ್ನು ದೇಶದ ಕೇಂದ್ರೀಯ ಬ್ಯಾಂಕ್ ಆಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಗಿತಗೊಳಿಸಿದೆ.
ಈ ಆರ್ಥಿಕ ವರ್ಷದಲ್ಲಿ ಈವರೆಗೆ ಒಂದೇ ಒಂದು 2000 ರೂ ನೋಟನ್ನು ಕೂಡ ಮುದ್ರಿಸಿಲ್ಲವಂತೆ. ಆರ್ ಟಿಐ (ಮಾಹಿತಿ ಹಕ್ಕು ಕಾಯ್ದೆ) ಅಡಿ ಕೋರಿದ್ದ ಅರ್ಜಿಗೆ, 2020ನೇ ಆರ್ಥಿಕ ವರ್ಷದಲ್ಲೂ 2 ಸಾವಿರ ರೂ ಮೌಲ್ಯದ ಹೊಸ ನೋಟುಗಳನ್ನು ಮುದ್ರಿಸುವುದಿಲ್ಲ ಎಂದು ಆರ್ ಬಿಐ ಹೇಳಿದೆ
ಪ್ರಮುಖವಾಗಿ ಈ ವರ್ಷದ ಆರಂಭದಲ್ಲಿ ಆಂಧ್ರ-ತಮಿಳುನಾಡು ಗಡಿಯಲ್ಲಿ 6 ಕೋಟಿ ರೂಪಾಯಿ ಅಕ್ರಮ ನಗದು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಕಪ್ಪುಹಣವನ್ನು ನಿಗ್ರಹಿಸಲು ಈ ಕ್ರಮ ಕೈಗೊಳ್ಳಲಾಗಿದೆಯಂತೆ.
ಈವರೆಗೆ ಎಷ್ಟು 2 ಸಾವಿರ ರೂ. ನೋಟುಗಳನ್ನು ಮುದ್ರಿಸಲಾಗಿದೆ ಎಂದು ದಿನ ಪತ್ರಿಕೆಯೊಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಆರ್ ಬಿ ಐ ಈ ಉತ್ತರ ನೀಡಿದೆ. ಕಪ್ಪು ಹಣವನ್ನು ನಿಗ್ರಹಿಸಲು 2000 ರೂ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದೆ.
ಆರ್ ಟಿಐ ಅರ್ಜಿಗೆ ನೀಡಿರುವ ಮಾಹಿತಿ ಪ್ರಕಾರ ಪ್ರಕಾರ, 2017 ರಲ್ಲಿ 3,542,991 ಮಿಲಿಯನ್ 2 ಸಾವಿರ ರೂ. ನೋಟುಗಳನ್ನು ಮುದ್ರಿಸಲಾಗಿದೆ ಎಂದು ಆರ್ ಬಿಐ ತಿಳಿಸಿದೆ
2018ರಲ್ಲಿ ಕೇವಲ 111.507 ಮಿಲಿಯನ್ ನೋಟುಗಳನ್ನು ಮಾತ್ರ ಮುದ್ರಿಸಲಾಗಿದೆ. ಆದಾಗ್ಯೂ, 2019 ರಲ್ಲಿ ಈ ಸಂಖ್ಯೆ ಅರ್ಧಕ್ಕಿಂತಲೂ ಹೆಚ್ಚು ಕುಸಿದಿದ್ದು, ಕೇವಲ 46.690 ಮಿಲಿಯನ್ ರೂಪಾಯಿಗಳನ್ನು ಮಾತ್ರ ಚಲಾವಣೆಗೆ ತಂದಿದೆ.
ನವೆಂಬರ್ 2016 ರಲ್ಲಿ ನರೇಂದ್ರ ಮೋದಿ ಸರ್ಕಾರ 500 ಮತ್ತು 1000 ರೂ ನೋಟುಗಳನ್ನು ಅಮಾನ್ಯೀಕರಣಗೊಳಿಸಿ ತರುವಾಯ ರೂ .2000 ನೋಟು ಚಲಾವಣೆ ತಂದಿತ್ತು.
Advertisement