2020ರ ವೇಳೆಗೆ ಭಾರತದ ಜಿಡಿಪಿ ದರ ಶೇ.7ಕ್ಕೆ ಮರಳಲಿದೆ: ಐಎಂಎಫ್ ಆರ್ಥಿಕ ತಜ್ಞೆ

ಪ್ರಸ್ತುತ ಕುಸಿದಿರುವ ಭಾರತದ ಜಿಡಿಪಿ ದರ 2020ರ ವೇಳೆ ಮತ್ತೆ ಶೇ.7ಕ್ಕೆ ಮರಳಲಿದೆ ಎಂದು ವಿಶ್ವ ಹಣಕಾಸು ನಿಧಿ (ಐಎಂಎಫ್)ನ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪ್ರಸ್ತುತ ಕುಸಿದಿರುವ ಭಾರತದ ಜಿಡಿಪಿ ದರ 2020ರ ವೇಳೆ ಮತ್ತೆ ಶೇ.7ಕ್ಕೆ ಮರಳಲಿದೆ ಎಂದು ವಿಶ್ವ ಹಣಕಾಸು ನಿಧಿ (ಐಎಂಎಫ್)ನ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ.

ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಗೀತಾ ಅವರು, ಇತ್ತೀಚೆಗೆ ಐಎಂಎಫ್ ಭಾರತದ ಆರ್ಥಿಕತೆಯನ್ನು ಈ ವರ್ಷ ಶೇಕಡಾ 6.1 ಕ್ಕೆ ಇಳಿಸಿದ ನಂತರ ಈಗ ಅದು 2020 ರಲ್ಲಿ ಶೇಕಡಾ 7ಕ್ಕೆ ವೃದ್ದಿಯಾಗುವ ನಿರೀಕ್ಷೆಯಿದೆ. ಭಾರತ 2019 ರಲ್ಲಿ ಹಲವು ವಲಯಗಳಲ್ಲಿ ಕುಸಿತವನ್ನು ಕಂಡಿದೆ. ನಾವು ಈ ಬೆಳವಣಿಗೆಯನ್ನು ಚಕ್ರದ ಕುಸಿತ ಎಂದು ಭಾವಿಸಿದ್ದೇವೆ, ನಾವು ಭಾರತದ ಬೆಳವಣಿಗೆಯನ್ನು 2019 ರಲ್ಲಿ  ಶೇ 6.1 ಕ್ಕೆ ಇಳಿಸಿದ್ದೇವೆ. ಆದಾಗ್ಯೂ, ನಾವು ಅದನ್ನು 2020 ರಲ್ಲಿ ಶೇಕಡಾ 7 ಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ಮೂಲದ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಅವರು 2019 ರ ಜನವರಿಯಲ್ಲಿ ಐಎಂಎಫ್ ನ ಮೊದಲ ಮಹಿಳಾ ಮುಖ್ಯ ಆರ್ಥಿಕ ತಜ್ಞೆಯಾಗಿ ನೇಮಕವಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com