ರಿಲಯನ್ಸ್ ಡಿಜಿಟಲ್‌ನಲ್ಲಿ ಒನ್‌ಪ್ಲಸ್ ಟಿವಿ ಲೋಕಾರ್ಪಣೆ

ಭಾರತದ ನಂಬರ್ ಒನ್ ಇಲೆಕ್ಟ್ರಾನಿಕ್ಸ್ ರಿಟೇಲರ್ ಆದ ರಿಲಯನ್ಸ್ ಡಿಜಿಟಲ್, ತನ್ನ ರಿಟೇಲ್ ಮಳಿಗೆಗಳಲ್ಲಿ ಒನ್‌ಪ್ಲಸ್ ಟೀವಿ ಸರಣಿಯನ್ನು ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು.

Published: 21st October 2019 08:54 PM  |   Last Updated: 21st October 2019 08:54 PM   |  A+A-


oneplus

ಟಿವಿ ಲೋಕಾರ್ಪಣೆ

Posted By : Lingaraj Badiger
Source : UNI

ಮುಂಬೈ: ಭಾರತದ ನಂಬರ್ ಒನ್ ಇಲೆಕ್ಟ್ರಾನಿಕ್ಸ್ ರಿಟೇಲರ್ ಆದ ರಿಲಯನ್ಸ್ ಡಿಜಿಟಲ್, ತನ್ನ ರಿಟೇಲ್ ಮಳಿಗೆಗಳಲ್ಲಿ ಒನ್‌ಪ್ಲಸ್ ಟಿವಿ ಸರಣಿಯನ್ನು ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು. 

ಈ ಸಂಬಂಧ ಒನ್‌ಪ್ಲಸ್ ಜೊತೆಗೆ ಕೈಜೋಡಿಸಿರುವ ರಿಲಯನ್ಸ್ ಡಿಜಿಟಲ್, ಹೊಸ ಒನ್‌ಪ್ಲಸ್ ಟಿವಿ ಶ್ರೇಣಿ ತನ್ನ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಲಭ್ಯವಾಗಲಿದೆ ಎಂದು ಘೋಷಿಸಿದೆ.

ಪ್ರಭಾದೇವಿಯಲ್ಲಿರುವ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲಿ ಒನ್‌ಪ್ಲಸ್ ಟಿವಿ 55 ಕ್ಯೂ1 ಹಾಗೂ ಒನ್‌ಪ್ಲಸ್ ಟಿವಿ 55 ಕ್ಯೂ1 ಪ್ರೋಗಳೆರಡನ್ನೂ ಇಂದು ಲೋಕಾರ್ಪಣೆಗೊಳಿಸಲಾಯಿತು. 

ಈ ವೇಳೆ ರಿಲಯನ್ಸ್ ಡಿಜಿಟಲ್‌ನ ಸಿಇಓ ಬ್ರಿಯಾನ್ ಬೇಡ್, ರಿಲಯನ್ಸ್ ಡಿಜಿಟಲ್‌ನ ಇವಿಪಿ ಮತ್ತು ಸಿಎಂಓ ಕೌಶಲ್ ನೆವ್ರೇಕರ್, ಒನ್‌ಪ್ಲಸ್ ಇಂಡಿಯಾ ಜನರಲ್ ಮ್ಯಾನೇಜರ್ ವಿಕಾಸ್ ಅಗರ್‌ವಾಲ್ ಹಾಗೂ ಬಾಲಿವುಡ್ ನಟಿ ತಾರಾ ಸುತಾರಿಯಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಬ್ರಿಯಾನ್ ಬೇಡ್, “ಇತ್ತೀಚಿನ ತಂತ್ರಜ್ಞಾನವನ್ನು ಮೊದಲು ಪರಿಚಯಿಸುವ ನಮ್ಮ ದಾಖಲೆಯ ಮುಂದುವರಿಕೆಯಾಗಿ, ರಿಲಯನ್ಸ್ ಡಿಜಿಟಲ್ ಕುಟುಂಬಕ್ಕೆ ಒನ್‌ಪ್ಲಸ್ ಟಿವಿಯನ್ನು ಸ್ವಾಗತಿಸಲು ನಾವು ಹೆಮ್ಮೆಪಡುತ್ತೇವೆ. ಭಾರತೀಯ ಗ್ರಾಹಕರು ಮತ್ತು ಪ್ರಪಂಚದೆಲ್ಲೆಡೆಯ ಹೊಸ ತಂತ್ರಜ್ಞಾನ ಬ್ರಾಂಡ್‌ಗಳ ನಡುವಿನ ಸೇತುವೆಯಾಗಿ ನಾವು ಮುಂದುವರಿಯುತ್ತೇವೆ.” ಎಂದು ಹೇಳಿದರು.

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp