ವಿಶ್ವ ಜಿಡಿಪಿ 2024ರ ಹೊತ್ತಿಗೆ ಮತ್ತಷ್ಟು ಕುಸಿತ : ಐಎಂಎಫ್ ವರದಿ

ಆರ್ಥಿಕ  ಹಿಂಜರಿತ,  ಜಿಡಿಪಿ ಕುಸಿತ  ಕೇವಲ ಭಾರತಕ್ಕೆ  ಮಾತ್ರ ಸೀಮಿತವಾಗಿಲ್ಲ. ಪ್ರಸಕ್ತ ವರ್ಷ ಶೇ.3 ರಷ್ಟು  ಕುಸಿತ ಕಂಡಿರುವ ವಿಶ್ವದ ಆಂತರಿಕ  ಉತ್ಪನ್ನವು (ವಿಶ್ವ ಜಿಡಿಪಿ), 2024ರ ಹೊತ್ತಿಗೆ ಮತ್ತಷ್ಟು ಕುಸಿಯಲಿದೆ ಎಂಬ ಕಳವಳಕಾರಿ ಮಾಹಿತಿ ಹೊರಬಿದ್ದಿದೆ .
ಐಎಂಎಫ್
ಐಎಂಎಫ್

ನವದೆಹಲಿ:  ಆರ್ಥಿಕ  ಹಿಂಜರಿತ,  ಜಿಡಿಪಿ ಕುಸಿತ  ಕೇವಲ ಭಾರತಕ್ಕೆ  ಮಾತ್ರ ಸೀಮಿತವಾಗಿಲ್ಲ. ಪ್ರಸಕ್ತ ವರ್ಷ ಶೇ.3 ರಷ್ಟು  ಕುಸಿತ ಕಂಡಿರುವ ವಿಶ್ವದ ಆಂತರಿಕ  ಉತ್ಪನ್ನವು (ವಿಶ್ವ ಜಿಡಿಪಿ), 2024ರ ಹೊತ್ತಿಗೆ ಮತ್ತಷ್ಟು ಕುಸಿಯಲಿದೆ ಎಂಬ ಕಳವಳಕಾರಿ ಮಾಹಿತಿ ಹೊರಬಿದ್ದಿದೆ .

ವಿಶ್ವ ಜಿಡಿಪಿಯನ್ನು ಮೇಲೆತ್ತುವಲ್ಲಿ ಭಾರತ ಹೆಗಲು ಕೊಡಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ತಿಳಿಸಿದೆ. 2024ರಲ್ಲಿ ವಿಶ್ವ ಜಿಡಿಪಿ ಮೇಲೆತ್ತುವ ರಾಷ್ಟ್ರಗಳ ಪಟ್ಟಿ  ತಯಾರಿಸಲಾಗಿದ್ದು, ಅದರಲ್ಲಿ ಭಾರತಕ್ಕೆ ಎರಡನೇ   ಸ್ಥಾನ ನೀಡಲಾಗಿದೆ

ಈ  ನಡುವೆ ವಿಶ್ವ ಜಿಡಿಪಿಗೆ ತನ್ನದೆ  ಕಾಣಿಕೆ ನೀಡುತ್ತಿರುವ  ಚೀನಾ  2018-19ರಲ್ಲಿ ಶೇ.32.7ರಷ್ಟು ಕೊಡುಗೆ ನೀಡಿತ್ತು. 2024ರಲ್ಲಿ ಅದು ಶೇ.28.3ಕ್ಕೆ ಕುಸಿಯಲಿದೆ ಎಂದು ಅಂದಾಜು ಮಾಡಲಾಗಿದೆ .

 ಆದರೂ, ವಿಶ್ವ ಜಿಡಿಪಿಗೆ ಗಣನೀಯ ಕೊಡುಗೆ ನೀಡುವ ತನ್ನ ಅಗ್ರ ಸ್ಥಾನವನ್ನು ಕಾಪಾಡುಕೊಳ್ಳುವಲ್ಲಿ ಅದು ಸಫ‌ಲವಾಗಲಿದೆ ಎಂದೂ  ಹೇಳಲಾಗಿದೆ . ಭಾರತವು ಎರಡನೇ   ಸ್ಥಾನಕ್ಕೆ ಲಗ್ಗೆಯಿಡಲಿದೆ. ಅಮೆರಿಕ ಮೂರನೇ ಸ್ಥಾನಕ್ಕೆ ಹೋಗಲಿದೆ  ಎಂದೂ  ಐಎಂಎಫ್ ವರದಿ ಹೇಳಿದೆ. 

ಬ್ರೆಕ್ಸಿಟ್‌ ಕಾರಣದಿಂದಾಗಿ ಯುಕೆ ವಿಶ್ವ ಜಿಡಿಪಿ ಪಟ್ಟಿಯಲ್ಲಿನ 9ನೇ ಸ್ಥಾನದಿಂದ 13ನೇ ಸ್ಥಾನಕ್ಕೆ ಕುಸಿಯಲಿದೆ  ಎಂದು  ಅಂದಾಜು ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com