ಅನಾಮಿಕ ಪತ್ರ; ಸ್ವತಂತ್ರ ತನಿಖೆಗೆ ನಂದನ್ ನಿಲೇಕಣಿ ತೀರ್ಮಾನ

ಭಾರತದ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್ ಲಿ. ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ಮುಖ್ಯ ಹಣಕಾಸು ಅಧಿಕಾರಿ (ಸಿಇಒ) ಕುರಿತು ಅನಾಮಿಕ ವ್ಯಕ್ತಿಯೋರ್ವರು ಮಾಡಿರುವ ಆರೋಪಗಳನ್ನು ಲೆಕ್ಕಪತ್ರ ಸಮಿತಿಗೆ ವರ್ಗಾಯಿಸಲಾಗಿದೆ. 

Published: 22nd October 2019 03:41 PM  |   Last Updated: 22nd October 2019 03:41 PM   |  A+A-


ನಂದನ್ ನೀಲೇಕಣಿ

Posted By : Raghavendra Adiga
Source : UNI

ಬೆಂಗಳೂರು: ಭಾರತದ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್ ಲಿ. ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ಮುಖ್ಯ ಹಣಕಾಸು ಅಧಿಕಾರಿ (ಸಿಇಒ) ಕುರಿತು ಅನಾಮಿಕ ವ್ಯಕ್ತಿಯೋರ್ವರು ಮಾಡಿರುವ ಆರೋಪಗಳನ್ನು ಲೆಕ್ಕಪತ್ರ ಸಮಿತಿಗೆ ವರ್ಗಾಯಿಸಲಾಗಿದೆ. 
  
ರಾಷ್ಟ್ರೀಯ ವಿನಿಮಯ ಮತ್ತು ನ್ಯೂಯಾರ್ಕ್ ಷೇರು ಕಂಪನಿ, ಬಿಎಸ್ ಇ ಲಿ.ಗೆ ಬರೆದಿರುವ ಪತ್ರದಲ್ಲಿ ಇನ್ಫೋಸಿಸ್, ಆಡಳಿತ ಮಂಡಳಿ ಸದಸ್ಯರೊಬ್ಬರಿಗೆ ಕಳೆದ ಸಪ್ಟೆಂಬರ್ ನಲ್ಲಿ ಅನಾಮಿಕ ವ್ಯಕ್ತಿಯೊಬ್ಬರು ಪತ್ರ ಬರೆದಿದ್ದು, ಕೆಲ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅದನ್ನು ವಸ್ತುನಿಷ್ಠವಾಗಿ ಪರಿಹರಿಸಲಾಗುವುದು ಎಂದು ತಿಳಿಸಿದೆ. 
  
ಅನಾಮಿಕ ಪತ್ರದಲ್ಲಿ ಕಂಪನಿಯ ಸಿಇಒ ಅಮೆರಿಕ ಮತ್ತು ಮುಂಬೈಗೆ ಕೈಗೊಂಡ ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಅವ್ಯವಹಾರ ನಡೆದಿರುವ ಕುರಿತು ದೂರುಗಳಿಗೆ. ಈ ಸಂಬಂಧ ಸಿಇಒ ಹಾಗೂ ಸಿಎಫ್ ಒ ವಿರುದ್ಧ ಸ್ವತಂತ್ರ ತನಿಖೆಗೆ ಆದೇಶಿಸಲಾಗುವುದು ಎಂದು ಕಂಪನಿ ಭರವಸೆ ನೀಡಿದೆ. 
 

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಫಲಿತಾಂಶವನ್ನು ಆಧರಿಸಿ ಲೆಕ್ಕಪತ್ರ ಸಮಿತಿಯೊಂದಿಗೆ ಸಮಾಲೋಚನೆ ನಡೆಸಿ, ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಕಂಪನಿ ತಿಳಿಸಿದೆ. 
 
ಬಿಎಸ್ ಇ, ರಾಷ್ಟ್ರೀಯ ವಿನಿಮಯ ಮತ್ತು ನ್ಯೂಯಾರ್ಕ್ ಷೇರು ವಿನಿಮಯ ಮಾರುಕಟ್ಟೆಗಳಿಗೆ ಕಂಪನಿಯ ಅಧ್ಯಕ್ಷ ನಂದನ್ ನೀಲೇಕಣಿ ಹೆಸರಿನಲ್ಲಿ ಪತ್ರ ಬರೆಯಲಾಗಿದೆ.
 

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp