ಪೆಟ್ರೋಲ್ ಪಂಪ್ ಸ್ಥಾಪನೆ ಇನ್ನಷ್ಟು ಸುಲಭಗೊಳಿಸಿದ ಸರ್ಕಾರ, ಖಾಸಗಿ ಕಂಪನಿಗಳ ನಿಯಮ ಸಡಿಲಿಕೆ!

ತೈಲೋತ್ಪನ್ನ ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಗಳು ಸುಲಭವಾಗಿ ವ್ಯವಹರಿಸಲು ಕೇಂದ್ರ ಸರ್ಕಾರ ಈ ಹಿಂದಿನ ಮಾನದಂಡಗಳನ್ನು ಸಿಡಿಲಿಸಿ ಇನ್ನಷ್ಟು ಸುಲಭಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ತೈಲೋತ್ಪನ್ನ ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಗಳು ಸುಲಭವಾಗಿ ವ್ಯವಹರಿಸಲು ಕೇಂದ್ರ ಸರ್ಕಾರ ಈ ಹಿಂದಿನ ಮಾನದಂಡಗಳನ್ನು ಸಿಡಿಲಿಸಿ ಇನ್ನಷ್ಟು ಸುಲಭಗೊಳಿಸಿದೆ. 

ಚಿಲ್ಲರೆ ಇಂಧನ ವ್ಯಾಪಾರ ಕ್ಷೇತ್ರದಲ್ಲಿ ಎರಡು ದಶಕಗಳ ನಂತರ ಸುಲಭ ವ್ಯವಹಾರ ಮಾಡಬಹುದಾಗಿದೆ. ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗೆ ಪ್ರವೇಶಿಸಲು ಖಾಸಗಿ ಮತ್ತು ವಿದೇಶಿ ಸಂಸ್ಥೆಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಕ್ರಮಗಳ ಸಹಾಯಕವಾಗಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.

ಪ್ರಸ್ತುತ, ಭಾರತದಲ್ಲಿ ಇಂಧನ ಚಿಲ್ಲರೆ ವ್ಯಾಪಾರ ಪರವಾನಗಿ ಪಡೆಯಲು ಕಂಪನಿಯು ಹೈಡ್ರೋಕಾರ್ಬನ್ ಪರಿಶೋಧನೆ ಮತ್ತು ಉತ್ಪಾದನೆ, ಸಂಸ್ಕರಣೆ, ಪೈಪ್‌ಲೈನ್‌ಗಳು ಅಥವಾ ದ್ರವೀಕೃತ ನೈಸರ್ಗಿಕ ಅನಿಲ(ಎಲ್‌ಎನ್‌ಜಿ) ಟರ್ಮಿನಲ್‌ಗಳಲ್ಲಿ 2,000 ಕೋಟಿ ರೂಪಾಯಿಯನ್ನು ಬಳಸಬೇಕಿತ್ತು. ಆದರೆ ಈಗ ಈ ಮೊತ್ತವನ್ನು 250 ಕೋಟಿ ರೂ. ನಿವ್ವಳ ಮೊತ್ತಕ್ಕೆ ಇಳಿಸಲಾಗಿದೆ. 

ಪರ್ಯಾಯ ಇಂಧನಗಳಾದ ಸಿಎನ್‌ಜಿ, ಎಲ್‌ಎನ್‌ಜಿ, ಜೈವಿಕ ಇಂಧನಗಳು ಅಥವಾ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಪಾಯಿಂಟ್ ಗಳನ್ನು ಸ್ಥಾಪಿಸಲು ಖಾಸಗಿ ಕಂಪನಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com