ಸೆಬಿ ತನಿಖೆಗೆ ಸಂಪೂರ್ಣ ಸಹಕರಿಸುತ್ತೇವೆ: ಇನ್ಫೋಸಿಸ್ 

ಭಾರತೀಯ ಷೇರುಪೇಟೆ ಮಂಡಳಿ(ಸೆಬಿ)ಯ ತನಿಖೆಗೆ ಸಂಪೂರ್ಣ ಸಹಕರಿಸುವುದಾಗಿ ಇನ್ಫೊಸಿಸ್ ಸಂಸ್ಥೆ ಹೇಳಿದೆ. 
ಇನ್ಫೊಸಿಸ್
ಇನ್ಫೊಸಿಸ್

ಬೆಂಗಳೂರು: ಭಾರತೀಯ ಷೇರುಪೇಟೆ ಮಂಡಳಿ(ಸೆಬಿ)ಯ ತನಿಖೆಗೆ ಸಂಪೂರ್ಣ ಸಹಕರಿಸುವುದಾಗಿ ಇನ್ಫೊಸಿಸ್ ಸಂಸ್ಥೆ ಹೇಳಿದೆ.


ಹೂಡಿಕೆದಾರರ ಮೇಲೆ ಪ್ರಭಾವ ಬೀರುವ ಬೆಲೆ ಸೂಕ್ಷ್ಮ ಮಾಹಿತಿಯನ್ನು ಇನ್ಫೊಸಿಸ್ ಆಡಳಿತ ಮಂಡಳಿಯು ಬಹಿರಂಗಪಡಿಸದ ಮತ್ತು ಕಾರ್ಪೊರೇಟ್ ಆಡಳಿತ ವೈಫಲ್ಯ ಕುರಿತು ಸೆಬಿ ನಿನ್ನೆ ತನಿಖೆಗೆ ಆದೇಶಿಸಿತ್ತು. ಕಂಪೆನಿಯ ಷೇರುಗಳಿಗೆ ಸಂಬಂಧಿಸಿದಂತೆ ಸಂಸ್ಥೆಯ ಒಳಗಿನವರೇ ವಹಿವಾಟು ನಡೆಸಿರುವ ಸಾಧ್ಯತೆ ಕುರಿತು ತನಿಖೆ ನಡೆಸಲಿದೆ.


ಇದಕ್ಕೆ ಇಂದು ಹೇಳಿಕೆ ಬಿಡುಗಡೆ ಮಾಡಿರುವ ಇನ್ಫೊಸಿಸ್, ಕಂಪೆನಿ ಮೇಲೆ ದಾಖಲಾಗಿರುವ ಅನಾಮಧೇಯ ದೂರಿಗೆ ಸಂಬಂಧಪಟ್ಟಂತೆ ಸೆಬಿ ಜೊತೆ ಸಂಪರ್ಕದಲ್ಲಿದ್ದು ಸೆಬಿ ಈ ಬಗ್ಗೆ ತನಿಖೆ ಆರಂಭಿಸಿದೆ ಎಂದು ಗೊತ್ತಾಗಿದೆ. ತನಿಖೆಗೆ ಕಂಪೆನಿ ಸಂಪೂರ್ಣವಾಗಿ ಸಹಕರಿಸಲಿದೆ. ಅನಾಮಧೇಯ ದೂರಿನ ಬಗ್ಗೆ ತಮ್ಮ ಬಳಿಯಿಂದ ಹೆಚ್ಚುವರಿ ಮಾಹಿತಿ ಕೇಳಿದ್ದಾರೆ. ಸೆಬಿಯ ಬೇಡಿಕೆಗೆ ತಕ್ಕಂತೆ ಕಂಪೆನಿ ಸಂಪೂರ್ಣ ಮಾಹಿತಿ ಒದಗಿಸಲಿದೆ ಎಂದಿದೆ.


ಅಮೆರಿಕಾದ ಫೆಡರಲ್ ಕೋರ್ಟ್ ನಲ್ಲಿ ಕಂಪೆನಿ ವಿರುದ್ಧ ಹೂಡಲಾಗಿರುವ ದಾವೆ ಬಗ್ಗೆ ಕೂಡ ತಿಳಿದುಬಂದಿದ್ದು, ಕಂಪೆನಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ನೋಡುತ್ತದೆ ಎಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com