ಪುಟಿದೆದ್ದ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್: ಮತ್ತೆ ನಂಬರ್ 1 ಶ್ರೀಮಂತ

ವಿಶ್ವದ ಅಗ್ರ ಶ್ರೀಮಂತ ಪಟ್ಟಿಯಲ್ಲಿ ನಂಬರ್ 1 ಸ್ಥಾನದಿಂದ ಜಾರಿದ್ದ ಅಮೆಜಾನ್ ಸ್ಥಾಪಕ ಮತ್ತು ಸಿಇಒ ಜೆಫ್ ಬೆಜೊಸ್ ಮತ್ತೆ ನಂಬರ್ ಒನ್ ಸ್ಥಾನಕ್ಕೆ ಬಂದಿದ್ದಾರೆ. 
ಅಮೆಜಾನ್ ಸಿಇಒ ಜೆಫ್ ಬೆಜೊಸ್
ಅಮೆಜಾನ್ ಸಿಇಒ ಜೆಫ್ ಬೆಜೊಸ್

ಸಾನ್ ಫ್ರಾನ್ಸಿಸ್ಕೊ; ವಿಶ್ವದ ಅಗ್ರ ಶ್ರೀಮಂತ ಪಟ್ಟಿಯಲ್ಲಿ ನಂಬರ್ 1 ಸ್ಥಾನದಿಂದ ಜಾರಿದ್ದ ಅಮೆಜಾನ್ ಸ್ಥಾಪಕ ಮತ್ತು ಸಿಇಒ ಜೆಫ್ ಬೆಜೊಸ್ ಮತ್ತೆ ನಂಬರ್ ಒನ್ ಸ್ಥಾನಕ್ಕೆ ಬಂದಿದ್ದಾರೆ.


ಕಳೆದ ತ್ರೈಮಾಸಿಕ ಹಣಕಾಸು ಅವಧಿಯ ಫಲಿತಾಂಶ ಹೊರಬಿದ್ದು ಷೇರುಮಾರುಕಟ್ಟೆ ಮೌಲ್ಯದಲ್ಲಿ 7 ಶತಕೋಟಿ ಡಾಲರ್ ಕಳೆದುಕೊಂಡ ನಂತರ ಅಮೆಜಾನ್ ಷೇರುಗಳ ಬೆಲೆ ಸಹ ಶೇಕಡಾ 7ರಷ್ಟು ಕಳೆದ ಗುರುವಾರ ಕುಸಿಯಿತು. ಇದರಿಂದ ಬೆಜೊಸ್ ಸುಮಾರು 103.9 ಶತಕೋಟಿ ಡಾಲರ್ ಇಳಿಕೆಯಾಯಿತು.


ನಂತರ ವಾರಾಂತ್ಯವಾದ ನಿನ್ನೆಯ ವಹಿವಾಟಿನ ಮುಕ್ತಾಯದ ಹೊತ್ತಿನಲ್ಲಿ ಅಮೆಜಾನ್ ಷೇರು ಮೌಲ್ಯ ಮೊನ್ನೆಯ ಷೇರು ಮೌಲ್ಯಕ್ಕೆ ಹೋಲಿಸಿದರೆ ಕಡಿಮೆಯಾದರೂ ಕೂಡ ಗಂಟೆಗಳ ಷೇರು ವಹಿವಾಟು ಮುಕ್ತಾಯಕ್ಕೆ ಕಂಪೆನಿಗೆ ಅಷ್ಟೇನು ನಷ್ಟವಾಗಲಿಲ್ಲ. ನಿನ್ನೆ ಅಮೆಜಾನ್ ಷೇರು ಮೌಲ್ಯ ಶೇಕಡಾ 1ರಷ್ಟು ಕುಸಿದು 1 ಸಾವಿರದ 760.78 ಡಾಲರ್ ನಷ್ಟಾಯಿತು. ಇದರಿಂದ ಅವರ ಸಂಪತ್ತಿನ ಮೌಲ್ಯ 109.9 ಶತಕೋಟಿ ಡಾಲರ್ ಏರಿಕೆಯಾಗಿ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಬೆಜೊಸ್ ಮತ್ತೆ ನಂಬರ್ 1 ಸ್ಥಾನ ಗಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com