10 ಸಾರ್ವಜನಿಕ ಬ್ಯಾಂಕುಗಳ ವಿಲೀನದಿಂದ ಹೆಚ್ಚಿನ ಉದ್ಯೋಗವಕಾಶಗಳು ಸೃಷ್ಟಿ- ಹಣಕಾಸು ಕಾರ್ಯದರ್ಶಿ

10 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು  ವಿಲೀನಗೊಳಿಸುವುದರಿಂದ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತವೆ ಮತ್ತು ಕೆಲವು ಕಾರ್ಮಿಕ ಸಂಘಗಳು ಪ್ರತಿಪಾದಿಸುವಂತೆ ಯಾವುದೇ ಆರ್ಥಿಕ ಹಿಂಜರಿತ ಆಗುವುದಿಲ್ಲ ಎಂದು ಹಣಕಾಸು ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

Published: 01st September 2019 12:00 AM  |   Last Updated: 01st September 2019 12:00 AM   |  A+A-


Ravikumar

ರವಿಕುಮಾರ್

Posted By : Nagaraja AB
Source : The New Indian Express

ನವ ದೆಹಲಿ: 10 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು  ವಿಲೀನಗೊಳಿಸುವುದರಿಂದ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತವೆ ಮತ್ತು ಕೆಲವು ಕಾರ್ಮಿಕ ಸಂಘಗಳು ಪ್ರತಿಪಾದಿಸುವಂತೆ ಯಾವುದೇ ಆರ್ಥಿಕ ಹಿಂಜರಿತ ಆಗುವುದಿಲ್ಲ ಎಂದು ಹಣಕಾಸು ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

ಬ್ಯಾಂಕುಗಳ ಗಾತ್ರ ಹಿಗ್ಗಿದ್ದಾಗ ವ್ಯವಹಾರ ಕೂಡಾ ಬೆಳವಣಿಯಾಗುತ್ತದೆ. ಪರಿಣಾಮವಾಗಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಆದ್ದರಿಂದ ಆರ್ಥಿಕ ಹಿಂಜರಿತದ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ಹಲವು ಬ್ಯಾಂಕುಗಳ ವಿಲೀನ ಹಾಗೂ ಬ್ಯಾಂಕ್ ಆಫ್ ಬರೋಡಾ ಜೊತೆಗೆ ಮೂರು ಬ್ಯಾಂಕುಗಳ ವಿಲೀನದಿಂದಾಗಿ ಯಾವುದೇ ಹಿಂಜರಿತವಾಗಿಲ್ಲ. ಇದು ಬ್ಯಾಂಕುಗಳ ನೌಕರಿಗೆ ಉತ್ತಮ ಸೌಕರ್ಯ ಕಲ್ಪಿಸುವುದಕ್ಕೆ ಸಂಬಂಧಿತ ವಿಚಾರವಾಗಿದೆ ಎಂದಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಭಾರತದ ಆರ್ಥಿಕತೆ ಐದು ಟ್ರಿಲಿಯನ್ ನಷ್ಟಾಗಲು ಬ್ಯಾಂಕ್ ಗಳ ವಿಲೀನ ಸೂಕ್ತವಾಗಿದೆ. 2017ರಲ್ಲಿ 27 ಸಾರ್ವಜನಿಕ ಬ್ಯಾಂಕುಗಳಿದ್ದವು ಈಗ ಕೇವಲ 12 ಬ್ಯಾಂಕುಗಳಾಗಿವೆ ಎಂದರು.

ಭವಿಷ್ಯದಲ್ಲಿ ಮೂರು ವಿಧದ  ಸಾರ್ವಜಿಕ ಬ್ಯಾಂಕುಗಳು ಇರಲಿದ್ದು, ಬ್ಯಾಂಕುಗಳ ವಿಲೀನದಿಂದ ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿನ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp