ಅಮೇಜಾನ್ ಗೆ 4 ದಶಲಕ್ಷ ಯೂರೋ ದಂಡ ವಿಧಿಸಿದ ಫ್ರಾನ್ಸ್ ನ್ಯಾಯಾಲಯ

ಪಾಲುದಾರ ಸಂಸ್ಥೆಯೊಂದಿಗಿನ ಒಪ್ಪಂದದಲ್ಲಿ ನಿಂದನೀಯ ಷರತ್ತುಗಳನ್ನು ವಿಧಿಸಿದ ಆರೋಪಕ್ಕೆ ಸಂಬಂಧಿಸಿದಂತೆ  ದೈತ್ಯ ಆನ್ ಲೈನ್ ಮಾರಾಟ ಸಂಸ್ಥೆ ಅಮೇಜಾನ್ ಗೆ ಫ್ರಾನ್ಸ್ ನ ವಾಣಿಜ್ಯ ನ್ಯಾಯಾಲಯ 4 ದಶಲಕ್ಷ ಯುರೋ ದಂಡ ವಿಧಿಸಿದೆ.
ಅಮೇಜಾನ್
ಅಮೇಜಾನ್

ಪ್ಯಾರಿಸ್:  ಪಾಲುದಾರ ಸಂಸ್ಥೆಯೊಂದಿಗಿನ ಒಪ್ಪಂದದಲ್ಲಿ ನಿಂದನೀಯ ಷರತ್ತುಗಳನ್ನು ವಿಧಿಸಿದ ಆರೋಪಕ್ಕೆ ಸಂಬಂಧಿಸಿದಂತೆ  ದೈತ್ಯ ಆನ್ ಲೈನ್ ಮಾರಾಟ ಸಂಸ್ಥೆ ಅಮೇಜಾನ್ ಗೆ ಫ್ರಾನ್ಸ್ ನ ವಾಣಿಜ್ಯ ನ್ಯಾಯಾಲಯ 4 ದಶಲಕ್ಷ ಯುರೋ ದಂಡ ವಿಧಿಸಿದೆ.

ಗ್ರಾಹಕರ ವಿಚಾರಣಾ ಸಮಿತಿಯಾದ ಡಿಜಿಸಿಸಿಆರ್ ಎಫ್ ಎರಡು ವರ್ಷಗಳ ಕಾಲ ತನಿಖೆ ನಡೆಸಿ ನೀಡಿದ ವರದಿ ಆಧರಿಸಿ ನ್ಯಾಯಾಲಯ, ಈ ಭಾರಿ ಮೊತ್ತದ ದಂಡ ವಿಧಿಸಿದೆ.

ಪಾಲುದಾರ ಸಂಸ್ಥೆಗೆ 12 ಕ್ಕೂ ಹೆಚ್ಚು ಅನವಶ್ಯಕ ಹಾಗೂ ಅಸಮಾತೋಲಿತ ಷರತ್ತುಗಳನ್ನು ವಿಧಿಸಿದ್ದರಿಂದ ಆ ಸಂಸ್ಥೆ ಅದನ್ನು ಫಾಲಿಸಿಲ್ಲ.  ಈ ಷರತ್ತುಗಳು ಯಾವುದೇ ವಾಣಿಜ್ಯ ಷರತ್ತುಗಳಿಗೆ ಬದ್ಧವಾಗಿರಲಿಲ್ಲ. ಯಾವುದೇ ವಿವರಣೆಗೂ ಕೂಡಾ ಯೋಗ್ಯವಾಗಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇದು ಇಂತಹ ಪ್ರಕರಣದಲ್ಲಿ ವಿಧಿಸಿದ ಅತಿ ದೊಡ್ಡ ಮೊತ್ತದ ದಂಡವಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com