ಆಂಧ್ರ, ಕಾರ್ಫೊರೇಷನ್‌ ಬ್ಯಾಂಕ್ ಜತೆ ವಿಲೀನಕ್ಕೆ ಯೂನಿಯನ್ ಬ್ಯಾಂಕ್‌ ಒಪ್ಪಿಗೆ

ಯೂನಿಯನ್ ಬ್ಯಾಂಕ್‌ ಆಫ್ ಇಂಡಿಯಾದ ನಿರ್ದೇಶಕ ಮಂಡಳಿಯು ಆಂಧ್ರ ಬ್ಯಾಂಕ್‌ ಹಾಗೂ ಕಾರ್ಫೊರೇಷನ್‌ ಬ್ಯಾಂಕ್‌ಗಳ ಜೊತೆ ವಿಲೀನ ಮಾಡುವುದಕ್ಕೆ ಸೋಮವಾರ ಒಪ್ಪಿಗೆ ನೀಡಿದೆ.
ಯೂನಿಯನ್ ಬ್ಯಾಂಕ್
ಯೂನಿಯನ್ ಬ್ಯಾಂಕ್

ನವದೆಹಲಿ: ಯೂನಿಯನ್ ಬ್ಯಾಂಕ್‌ ಆಫ್ ಇಂಡಿಯಾದ ನಿರ್ದೇಶಕ ಮಂಡಳಿಯು ಆಂಧ್ರ ಬ್ಯಾಂಕ್‌ ಹಾಗೂ ಕಾರ್ಫೊರೇಷನ್‌ ಬ್ಯಾಂಕ್‌ಗಳ ಜೊತೆ ವಿಲೀನ ಮಾಡುವುದಕ್ಕೆ ಸೋಮವಾರ ಒಪ್ಪಿಗೆ ನೀಡಿದೆ. ಅಲ್ಲದೆ ಪ್ರಸಕ್ತ ಹಣಕಾಸು ವರ್ಷದಲ್ಲಿ 17,200 ಕೋಟಿ ರೂಪಾಯಿ ಮೂಲ ಬಂಡವಾಳಕ್ಕೂ ಅನುಮತಿ ನೀಡಿದೆ.

ಇಂದು ನಡೆದ ಯೂನಿಯನ್ ಬ್ಯಾಂಕ್ ನಿರ್ದೇಶಕರ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಆಂಧ್ರ ಬ್ಯಾಂಕ್‌ ಹಾಗೂ ಕಾರ್ಫೊರೇಷನ್‌ ಬ್ಯಾಂಕ್‌ಗಳ ಜೊತೆ ಯೂನಿಯನ್ ಬ್ಯಾಂಕ್ ವಿಲೀನವನ್ನು ಪರಿಗಣಿಸಿದ ನಿರ್ದೇಶಕ ಮಂಡಳಿ, ಈ ಸಂಬಂಧ ಪ್ರಾಥಮಿಕ ಒಪ್ಪಿಗೆ ಸೂಚಿಸಿದೆ.

ಮಂಡಳಿಯು 2019-20ರ ಪರಿಷ್ಕೃತ ಬಂಡವಾಳ ಯೋಜನೆಯನ್ನು 17,200 ಕೋಟಿ ರೂ.ಗೆ ಹೆಚ್ಚಿಸಲು ಅನುಮೋದನೆ ನೀಡಿದ್ದು, ಅದರಲ್ಲಿ ಈಕ್ವಿಟಿ ಕ್ಯಾಪಿಟಲ್ ಮೂಲಕ 13,000 ಕೋಟಿ ರೂ. ಮತ್ತು ಹೆಚ್ಚುವರಿ ಶ್ರೇಣಿ I/II ಬಾಂಡ್ ಗಳು ಮೂಲಕ 4,200 ಕೋಟಿ ರೂ. ಸೇರಿದೆ ಎಂದು ಯೂನಿಯನ್ ಬ್ಯಾಂಕ್ ತಿಳಿಸಿದೆ. 

ಈ ಮೂರು ಬ್ಯಾಂಕ್ ಗಳು ವಿಲೀನ ನಂತ ದೇಶದ ಐದನೇ ಅತಿ ದೊಡ್ಡ ಬ್ಯಾಂಕ್‌ ಆಗಿ ಹೊರಹೊಮ್ಮಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com