ಶೇಕಡ 5ರ ಜಿಡಿಪಿ ದರ ಅನಿರೀಕ್ಷಿತ, ಸದ್ಯಕ್ಕೆ ಪುನರುಶ್ಚೇತನದ ಊಹೆ ಮಾಡುವುದು ಕಷ್ಟ: ಆರ್​ಬಿಐ ಗವರ್ನರ್

ದೇಶದ ಜಿಡಿಪಿ ಅಭಿವೃದ್ಧಿ ದರ ಶೇಕಡ 5ಕ್ಕೆ ಕುಸಿದಿರುವುದು ಅನಿರೀಕ್ಷಿತ ಸದ್ಯದ ಮಟ್ಟಿಗೆ ಪುನರುಶ್ಚೇತನದ ಊಹೆ ಮಾಡುವುದು ಕಷ್ಟ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಆತಂಕ ವ್ಯಕ್ತಪಡಿಸಿದ್ದಾರೆ.
ಶಕ್ತಿಕಾಂತ್ ದಾಸ್
ಶಕ್ತಿಕಾಂತ್ ದಾಸ್

ನವದೆಹಲಿ: ದೇಶದ ಜಿಡಿಪಿ ಅಭಿವೃದ್ಧಿ ದರ ಶೇಕಡ 5ಕ್ಕೆ ಕುಸಿದಿರುವುದು ಅನಿರೀಕ್ಷಿತ ಸದ್ಯದ ಮಟ್ಟಿಗೆ ಪುನರುಶ್ಚೇತನದ ಊಹೆ ಮಾಡುವುದು ಕಷ್ಟ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಆತಂಕ ವ್ಯಕ್ತಪಡಿಸಿದ್ದಾರೆ.

ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಉತ್ಪನ್ನ ಕುಸಿತ, ಉದ್ಯೋಗ ಕಡಿತ ಹೆಚ್ಚಾಗಿದೆ. ಸದ್ಯ ದೇಶದಲ್ಲಿ ಆರ್ಥಿಕತೆವಾಗಿ ಹಿನ್ನಡೆಯಾಗುತ್ತಿದ್ದು ಇದರ ಮಧ್ಯೆ ಜಿಡಿಪಿ ಇಷ್ಟೊಂದು ಮಟಕ್ಕೆ ಕುಸಿಯುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಜಿಡಿಪಿ ದರ ಶೇ.5ಕ್ಕೆ ಇಳಿದಿರುವುದು ನಿಜಕ್ಕೂ ಅಚ್ಚರಿ ತಂದಿದೆ ಎಂದು ಶಕ್ತಿಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ಜಿಡಿಪಿ ಶೇಕಡ 5.8ರಷ್ಟು ಅಭಿವೃದ್ಧಿಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಶೇಕಡ 5.5ಕ್ಕೆ ಇಳಿಯಬಹುದು ಎಂದು ಭಾವಿಸಿದ್ದೇವು ಆದರೆ ಅಂತಿಮವಾಗಿ 5ರಷ್ಟು ಅಭಿವೃದ್ಧಿ ದರ ಬಂದಿರುವುದು ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ ಎಂದು ಹೇಳಿದ್ದಾರೆ. 

ಆರ್ಥಿಕ ಕುಸಿತದ ಸೂಚನೆಯನ್ನು ಆರ್ಬಿಐಗೆ ಮೊದಲೆ ಬಂದಿತ್ತು. ಹೀಗಾಗಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲು ಹಾಗೂ ಬೇಡಿಕೆ ಹೆಚ್ಚಿಸುವ ಸಲುವಾಗಿ ರಿಪೋ ದರದಲ್ಲಿ 25 ಮೂಲಾಂಕದಷ್ಟು ಕಡಿತ ಮಾಡಲು ನಿರ್ಧರಿಸಲಾಯಿತು ಎಂದು ಶಕ್ತಿಕಾಂತ್ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com