ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ದರ 5-6 ರೂಪಾಯಿ ಏರಿಕೆ ಸಾಧ್ಯತೆ

ಈಗಾಗಲೆ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯ, ಮತ್ತೊಂದು ಹಂತದ ಬೆಲೆ ಏರಿಕೆಗೆ ಸಜ್ಜಾಗಬೇಕಾದ ಪರಿಸ್ಥಿತಿ ಇದೆ. 

Published: 16th September 2019 05:43 PM  |   Last Updated: 16th September 2019 05:43 PM   |  A+A-


Petrol, diesel prices may surge Rs 5-6 per litre: Reports

ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ದರ 5-6 ರೂಪಾಯಿ ಏರಿಕೆ ಸಾಧ್ಯತೆ

Posted By : Srinivas Rao BV
Source : PTI

ನವದೆಹಲಿ: ಈಗಾಗಲೆ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯ, ಮತ್ತೊಂದು ಹಂತದ ಬೆಲೆ ಏರಿಕೆಗೆ ಸಜ್ಜಾಗಬೇಕಾದ ಪರಿಸ್ಥಿತಿ ಇದೆ. 

ಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ಡ್ರೋಣ್ ದಾಳಿ ನಡೆದಿರುವ ಪರಿಣಾಮ ಮುಂದಿನ 15 ದಿನಗಳಲ್ಲಿ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ 5-6 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದೆ. ಪೆಟ್ರೋಲ್, ಡೀಸೆಲ್ ದರ ಏರಿಕೆಯಾದರೆ ಒಂದಷ್ಟು ಸರಕುಗಳ ಬೆಲೆಯೂ ಏರಿಕೆಯಾಗಲಿದೆ.

ಸೌದಿ ಅರೇಬಿಯಾದಲ್ಲಿ ನಡೆದಿರುವ ಡ್ರೋಣ್ ದಾಳಿಯ ಪರಿಣಾಮ ಭಾರತದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪ್, ಹೆಚ್ ಪಿಸಿಎಲ್ ಹಾಗೂ ಬಿಪಿಸಿಎಲ್ ಗೆ ವಾರಾಂತ್ಯದಲ್ಲಿ ತೈಲ ಪೂರೈಕೆಗೆ ಹೊಡೆತ ನೀಡಲಿದೆ. 

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp