ಪಿಎಫ್ ಖಾತೆದಾರರಿಗೆ ಶುಭಸುದ್ದಿ! ಭವಿಷ್ಯ ನಿಧಿ ಬಡ್ಡಿದರ ಶೇ. 8.65ಕ್ಕೆ ಏರಿಸಲು ತೀರ್ಮಾನ

ಆರು ಕೋಟಿ ಪಿಎಫ್ ಖಾತೆದಾರರಿಗೆ ಇದು ಸಂತಸದ ಸುದ್ದಿ! ಎಲ್ಲಾ ಇಪಿಎಫ್‌ಒ ಖಾತೆದಾರರು 2018-19ನೇ ಸಾಲಿನ ಠೇವಣಿಗಳ ಮೇಲೆ ಶೇ .8.65 ರಷ್ಟು ಬಡ್ಡಿಯನ್ನು ಪಡೆಯಲಿದ್ದಾರೆ ಎಂದು ಕೇಂದ್ರ  ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ.
ಇಪಿಎಫ್‌ಒ
ಇಪಿಎಫ್‌ಒ

ನವದೆಹಲಿ: ಆರು ಕೋಟಿ ಪಿಎಫ್ ಖಾತೆದಾರರಿಗೆ ಇದು ಸಂತಸದ ಸುದ್ದಿ! ಎಲ್ಲಾ ಇಪಿಎಫ್‌ಒ ಖಾತೆದಾರರು 2018-19ನೇ ಸಾಲಿನ ಠೇವಣಿಗಳ ಮೇಲೆ ಶೇ .8.65 ರಷ್ಟು ಬಡ್ಡಿಯನ್ನು ಪಡೆಯಲಿದ್ದಾರೆ ಎಂದು ಕೇಂದ್ರ  ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ.

ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಕೇಂದ್ರ ಟ್ರಸ್ಟಿಗಳ ಮಂಡಳಿ  ಕಳೆದ ಫೆಬ್ರವರಿಯಲ್ಲಿ ಶೇ 8.65 ರಷ್ಟು ಬಡ್ಡಿ ಣೀಡುವುದಕ್ಕೆ ಒಪ್ಪಿಗೆ ಸೂಚಿಸಿತ್ತು.

ಇದೀಗ ಪ್ರಸ್ತಾಪವನ್ನು ಅನುಮೋದನೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳಿಸಲಾಗಿದೆ.

"ಈ ಹಬ್ಬದ ಋತುವಿನಲ್ಲಿ 6 ಕೋಟಿಗೂ ಹೆಚ್ಚು ಇಪಿಎಫ್‌ಒ ಖಾತೆದಾರರಿಗೆ 2018-19ನೇ ಸಾಲಿನ ಠೇವಣಿಗಳ ಮೇಲೆ ಶೇ .8.65 ರಷ್ಟು ಬಡ್ಡಿ ಸಿಗುತ್ತದೆ" ಎಂದು ಗಂಗ್ವಾರ್ ಸುದ್ದಿಗಾರರಿಗೆ ತಿಳಿಸಿದರು.

ಪ್ರಸ್ತುತ, ಇಪಿಎಫ್‌ಒ ಪಿಎಫ್ ವಾಪಸಾತಿ ವೇಳೆ ಶೇ .8.55 ರಷ್ಟು ಬಡ್ಡಿದರದಲ್ಲಿ ಇತ್ಯರ್ಥಪಡಿಸುತ್ತಿದೆ, ಇದು  2017-18ರಲ್ಲಿ ಅಂಗೀಕರಿಸಲಾದ ಬಡ್ಡಿ ದರದ ಪ್ರಮಾಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com