ವಿಲೀನಕ್ಕೆ ಆಕ್ರೋಶ; ಅಕ್ಟೋಬರ್ 22 ರಂದು ಬ್ಯಾಂಕ್ ಮುಷ್ಕರ

ಬ್ಯಾಂಕ್ ಗಳ ವಿಲೀನಕ್ಕೆ ಆಕ್ರೋಶ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರ ಒಕ್ಕೂಟ ಅಕ್ಟೋಬರ್ 22ರಂದು ಮುಷ್ಕರ ನಡೆಸುವುದಾಗಿ ಘೋಷಣೆ ಮಾಡಿದೆ. ಆ ಮೂಲಕ ಅಂದು ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೈದರಾಬಾದ್: ಬ್ಯಾಂಕ್ ಗಳ ವಿಲೀನಕ್ಕೆ ಆಕ್ರೋಶ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರ ಒಕ್ಕೂಟ ಅಕ್ಟೋಬರ್ 22ರಂದು ಮುಷ್ಕರ ನಡೆಸುವುದಾಗಿ ಘೋಷಣೆ ಮಾಡಿದೆ. ಆ ಮೂಲಕ ಅಂದು ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ 22 ರಂದು ಮುಷ್ಕರ ನಡೆಸುವುದಾಗಿ ಭಾರತೀಯ ಬ್ಯಾಂಕ್ ಸಂಘ (ಐಬಿಎ) ಅಧ್ಯಕ್ಷ ಸುನಿಲ್ ಮೆಹ್ತಾ ಮತ್ತು ಕೇಂದ್ರ ಮುಖ್ಯ ಕಾರ್ಮಿಕ ಆಯುಕ್ತ ರಾಜನ್ ವರ್ಮಾ ಅವರುಗಳಿಗೆ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ (ಎಐಬಿಇಎ) ಮತ್ತು ಭಾರತದ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ (ಬಿಇಎಫ್ಐ) ತಿಳಿಸಿದೆ.

ಆರು ಪ್ರಮುಖ ಬೇಡಿಕೆಗಾಳಾದ – ಬ್ಯಾಂಕಿಂಗ್ ಸುಧಾರಣಾ ಕ್ರಮದ ನೆಪದಲ್ಲಿ ಬ್ಯಾಂಕ್ ಗಳ ವಿಲೀನ ತಡೆ, ಕೆಟ್ಟ ಸಾಲಗಳ ವಾಪಸಾತಿ ಖಾತರಿ, ಸುಸ್ತಿದಾರರ ವಿರುದ್ಧ ಕಠಿಣ ಕ್ರಮ - ಗ್ರಾಹಕರಿಗೆ ದಂಡದಂತಹ ಕಿರುಕುಳ ತಡೆ, ಸೇವಾ ಶುಲ್ಕ ಹೆಚ್ಚಳ ನಿಯಂತ್ರಣ, ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಳ, ಉದ್ಯೋಗ ಭದ್ರತೆಗೆ ಆಗ್ರಹಿಸಿ ಅ 22 ರ ಬೆಳಗ್ಗೆ 6 ರಿಂದ ಅ 23 ರ ಬೆಳಗ್ಗೆ 6 ಗಂಟೆವರೆಗೆ ಮುಷ್ಕರ ನಡೆಸಲಾಗುವುದು ಎಂದು ಎಐಬಿಎ ಪ್ರಧಾನ ಕಾರ್ಯದರ್ಶಿ ವೆಂಕಟಾಚಲಂ ಮತ್ತು ಬಿಇಎಫ್ಐ ಪ್ರಧಾನ ಕಾರ್ಯದರ್ಶಿ ದೆಬಾಶಿಶ್ ಬಸು ಚೌಧರಿ ಹೇಳಿದ್ದಾರೆ.

ಸೆ.30 ರಂದು ಸಿಬ್ಬಂದಿ ಕಪ್ಪು ಪಟ್ಟಿ ಧರಿಸಲಿದ್ದಾರೆ, ಅ 4 ರಂದು ಎಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ, ಅ 14 ರಂದು ಮುಂಬೈ, ದೆಹಲಿ, ಕೋಲ್ಕತಾ, ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ಮಂಗಳೂರಿನಲ್ಲಿ ಧರಣಿ ಮತ್ತು ಅ 21 ರಂದು ಎಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ವೆಂಕಟಾಚಲಂ ಯುಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com