ಕಾರ್ಪೊರೇಟ್ ತೆರಿಗೆ ಇಳಿಕೆ; ಭಾರತದ ಆರ್ಥಿಕತೆಗೆ ವರವೇ, ಶಾಪವೇ? 

ಭಾರತದ ದೇಶೀಯ ಕಾರ್ಪೊರೇಟ್ ಉದ್ಯಮ ವಲಯ ಮತ್ತು ಆರ್ಥಿಕ ಮಾರುಕಟ್ಟೆಗೆ ವರವಾಗಿ ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆ ಇಳಿಕೆ ಮಾಡಿದ್ದರೆ, ಹಲವು ಉನ್ನತ ಆರ್ಥಿಕ ತಜ್ಞರು ಇವು ಆರ್ಥಿಕತೆಯ ಮಂದಗತಿಯನ್ನು ಹಿಮ್ಮೆಟ್ಟಿಸಬಹುದೇ ಎಂದು ಆಶ್ಚರ್ಯಪಟ್ಟರೆ, ಇನ್ನು ಕೆಲ ವಿಶ್ಲೇಷಕರು ಹಣಕಾಸಿನ ಕೊರತೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದಾರೆ. 
ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ/ಹೈದರಾಬಾದ್: ಭಾರತದ ದೇಶೀಯ ಕಾರ್ಪೊರೇಟ್ ಉದ್ಯಮ ವಲಯ ಮತ್ತು ಆರ್ಥಿಕ ಮಾರುಕಟ್ಟೆಗೆ ವರವಾಗಿ ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆ ಇಳಿಕೆ ಮಾಡಿದ್ದರೆ, ಹಲವು ಉನ್ನತ ಆರ್ಥಿಕ ತಜ್ಞರು ಇವು ಆರ್ಥಿಕತೆಯ ಮಂದಗತಿಯನ್ನು ಹಿಮ್ಮೆಟ್ಟಿಸಬಹುದೇ ಎಂದು ಆಶ್ಚರ್ಯಪಟ್ಟರೆ, ಇನ್ನು ಕೆಲ ವಿಶ್ಲೇಷಕರು ಹಣಕಾಸಿನ ಕೊರತೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದಾರೆ.


ಸರ್ಕಾರದ ನಿರ್ಧಾರ ಹೂಡಿಕೆಯಲ್ಲಿ ಉತ್ತೇಜನ ಸಿಕ್ಕಿ ಪೂರೈಕೆ ಹೆಚ್ಚಬಹುದಾದರೂ ಕೂಡ, ಇಂದು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಮಂದಗತಿಯ ಬೇಡಿಕೆಯ ನಿಜವಾದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಹಲವು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.


ಸರ್ಕಾರದ ನಿರ್ಧಾರ ತಡವಾಯಿತು ಎಂದು ಹೇಳುವುದಿಲ್ಲ, ಆದರೆ ಇದು ಅತ್ಯಂತ ಅಲ್ಪ, ಪೂರೈಕೆ ದೃಷ್ಟಿಯಿಂದ ನೋಡುವುದಾದರೆ ಇದೊಂದು ಉತ್ತಮ ಸುಧಾರಣೆಯಾದರೂ ಕೂಡ ಬೇಡಿಕೆ ದೃಷ್ಟಿಯಿಂದ ನೋಡುವುದಾದರೆ ನಮ್ಮಲ್ಲಿ ಇಂದು ಹಲವು ಸಮಸ್ಯೆಗಳಿರುವುದರಿಂದ ಕಾರ್ಪೊರೇಟ್ ತೆರಿಗೆ ಕಡಿತ ಸಹಾಯ ಮಾಡಿದರೆ ಅದು ಪವಾಡ ನಡೆದಂತೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಮಾಜಿ ಸದಸ್ಯ ಪ್ರೊ. ಗೋವಿಂದ ಎಂ ರಾವ್ ಹೇಳಿದ್ದಾರೆ.


ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಕೇವಲ ಶೇಕಡಾ 5ರಷ್ಟು ಪ್ರಗತಿಯಾಗಿದೆ. ಕಳೆದ ಏಳು ವರ್ಷಗಳಲ್ಲಿ ತ್ರೈಮಾಸಿಕ ಅವಧಿಯಲ್ಲಿ ಇಷ್ಟು ಕಡಿಮೆ ಜಿಡಿಪಿ ಪ್ರಗತಿಯಾಗಿರುವುದು ಇದೇ ಮೊದಲ ಸಲ. ಪ್ರಯಾಣಿಕರ ವಾಹನಗಳ ಮಾರಾಟ ಕಳೆದ ಆಗಸ್ಟ್ ವರೆಗೆ ತ್ರೈಮಾಸಿಕದಲ್ಲಿ ಶೇಕಡಾ 32ರಷ್ಟಾಗಿತ್ತಷ್ಟೆ.


ಗ್ರಾಹಕರ ವಸ್ತುಗಳ ಕಂಪೆನಿಗಳಲ್ಲಿ ಸಹ ಮಾರಾಟ ಮಂದಗತಿಯಾಗಿತ್ತು. ಬೇಡಿಕೆಯಲ್ಲಿ ಕುಸಿತ ಕಂಡುಬಂದರೆ ಸರ್ಕಾರದಿಂದ ವೆಚ್ಚದ ಕಡೆಯಿಂದ ಉತ್ತೇಜನ ನೀಡಲಾಗುತ್ತದೆ. ಇದರಿಂದ ಹೊಸ ಉದ್ಯೋಗ ಸೃಷ್ಟಿಯಾಗಿ ಹೊಸ ಬೇಡಿಕೆ ಕಂಡುಬರುತ್ತದೆ ಅಥವಾ ವೈಯಕ್ತಿಕ ಆದಾಯ ತೆರಿಗೆ ಕಡಿತ ಮಾಡುವ ಮೂಲಕ ಗ್ರಾಹಕರು, ಜನರ ಜೇಬಿನಲ್ಲಿ ಹೆಚ್ಚು ಹಣ ಓಡಾಡುವಂತೆ ಮಾಡಲಾಗುತ್ತದೆ.


ಇಂದಿನ ದೇಶದ ಆರ್ಥಿಕ ಪರಿಸ್ಥಿತಿಗೆ ಮೂಲಭೂತ ಸೌಕರ್ಯದಲ್ಲಿ ಹೆಚ್ಚು ಬಂಡವಾಳ ತೊಡಗಿಸಿ ಬೇಡಿಕೆಗಳನ್ನು ಹೆಚ್ಚುವಂತೆ ಮಾಡಬೇಕು ಎನ್ನುತ್ತಾರೆ ರಾಷ್ಟ್ರೀಯ ಸಾರ್ವಜನಿಕ ನೀತಿ ಮತ್ತು ಹಣಕಾಸು ಸಂಸ್ಥೆಯ ಎನ್ ಆರ್ ಭಾನುಮೂರ್ತಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com