ಚಿನ್ನದ ಬೆಲೆ ಮತ್ತೆ ಏರಿಕೆ, 10 ಗ್ರಾಂಗೆ 39,020 ರೂ. ಬೆಳ್ಳಿ ಬೆಲೆಯೂ ಏರಿಕೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 330 ಏರಿಕೆಯಾಗುವ ಮೂಲಕ 10 ಗ್ರಾಂಗೆ 39,020 ರೂ.ಗೆ ತಲುಪಿದೆ. ಅಲ್ಲದೆ ಬೆಳ್ಳಿ ಸಹ 730 ರೂ ಏರಿಕೆ ಕಂಡಿದ್ದು, ಕಿಲೋ ಗ್ರಾಂಗೆ 48,720 ರೂ.ಗೆ ತಲುಪಿದೆ.
ಚಿನ್ನದ ದರ
ಚಿನ್ನದ ದರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 330 ಏರಿಕೆಯಾಗುವ ಮೂಲಕ 10 ಗ್ರಾಂಗೆ 39,020 ರೂ.ಗೆ ತಲುಪಿದೆ. ಅಲ್ಲದೆ ಬೆಳ್ಳಿ ಸಹ 730 ರೂ ಏರಿಕೆ ಕಂಡಿದ್ದು, ಕಿಲೋ ಗ್ರಾಂಗೆ 48,720 ರೂ.ಗೆ ತಲುಪಿದೆ.

ಸೋಮವಾರ, ಇಲ್ಲಿನ ಬುಲಿಯನ್ ಮಾರುಕಟ್ಟೆಯಲ್ಲಿ 24 ಕ್ಯಾರೆಟ್‌ನ ಚಿನ್ನ 10 ಗ್ರಾಂಗೆ 39,029 ರೂ. ಆಗಿತ್ತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಚಿನ್ನದ ಬೆಲೆ ನ್ಯೂಯಾರ್ಕ್ ನಲ್ಲಿ ಔನ್ಸ್ ಗೆ 1,522.60 ಡಾಲರ್‌ ಆಗಿದೆ. ಬೆಳ್ಳಿ ಔನ್ಸ್ ಗೆ 18.57 ಡಾಲರ್‌ ತಲುಪಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುಎಸ್ ಮತ್ತು ಇರಾನ್ ನಡುವಿನ ಮುಸುಕಿನ ಗುದ್ದಾಟ ಚಿನ್ನದ ಬೆಲೆಯಲ್ಲಿ ಏರುಪೇರಾಗಲು ಒಂದು ಕಾರಣವಾಗಿದೆ.

ಈ ಮಧ್ಯೆ, ರೂಪಾಯಿ ಮೌಲ್ಯ ಡಾಲರ್ ಎದುರು 9 ಪೈಸೆ ಇಳಿಕೆಯಾಗಿ 71.03 ಕ್ಕೆ ತಲುಪಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com