ಉದ್ಯೋಗಿಗಳಿಗೆ ಶುಭಸುದ್ದಿ! ಇಪಿಎಫ್ ಮೇಲಿನ ಶೇ.8.65 ಬಡ್ಡಿದರ ನಿಗದಿಗೆ ಸರ್ಕಾರ ಗ್ರೀನ್ ಸಿಗ್ನಲ್

ಕಾರ್ಮಿಕ ಸಚಿವಾಲಯವು 2018-19ನೇ ಸಾಲಿನ ನೌಕರರ ಭವಿಷ್ಯ ನಿಧಿಯ ಮೇಲೆ ಶೇ .8.65 ರಷ್ಟು ಬಡ್ಡಿದರ ನೀಡುವ ಶಿಫಾರಸು ಮಾಡಿದ್ದು ಇದೀಗ ದೇಶದ ಆರು ಕೋಟಿಗೆ ಹೆಚ್ಚು  ಇಪಿಎಫ್‌ಒ ಖಾತೆದಾರರ ಖಾತೆಗೆ ಹೆಚ್ಚುವರಿ ಬಡ್ಡಿ ಜಮವಾಗಲಿದೆ ಎಂದು ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಮಂಗಳವಾರ ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕಾರ್ಮಿಕ ಸಚಿವಾಲಯವು 2018-19ನೇ ಸಾಲಿನ ನೌಕರರ ಭವಿಷ್ಯ ನಿಧಿಯ ಮೇಲೆ ಶೇ .8.65 ರಷ್ಟು ಬಡ್ಡಿದರ ನೀಡುವ ಶಿಫಾರಸು ಮಾಡಿದ್ದು ಇದೀಗ ದೇಶದ ಆರು ಕೋಟಿಗೆ ಹೆಚ್ಚು  ಇಪಿಎಫ್‌ಒ ಖಾತೆದಾರರ ಖಾತೆಗೆ ಹೆಚ್ಚುವರಿ ಬಡ್ಡಿ ಜಮವಾಗಲಿದೆ ಎಂದು ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಮಂಗಳವಾರ ತಿಳಿಸಿದ್ದಾರೆ.

ಈ ಹಿಂದೆ ಇದು ಶೇ .8.55  ಆಗಿದ್ದು ಇದೀಗ ಬಡ್ಡಿದರ ಪ್ರಮಾಣವನ್ನು ಶೇ.0.10ರಷ್ಟು ಹೆಚ್ಚಳ ಮಾಡಲಾಗಿದೆ.

"2018-19ರ ಆರ್ಥಿಕ ವರ್ಷದಲ್ಲಿ ಕಾರ್ಮಿಕ ಸಚಿವಾಲಯವು ನೌಕರರ ಭವಿಷ್ಯ ನಿಧಿಯ ಮೇಲಿಶೇ..8.65 ರಷ್ಟು ಬಡ್ಡಿದರ ನಿಗದಿಗೆ ಶಿಫಾರಸು ಮಾಡಿದೆ ಎಂಬುದು ನಮಗೆ  ಅಪಾರ ಸಂತೋಷವನ್ನು ನೀಡುತ್ತದೆ. ಈ ಬಡ್ಡಿದರವು 2017-18ರಲ್ಲಿ ಒದಗಿಸಿದ ಶೇಕಡಾ 8.55 ಕ್ಕಿಂತ 10 ಬೇಸಿಸ್ ಪಾಯಿಂಟ್ ಹೆಚ್ಚಾಗಿದೆ" ಎಂದು ಗಂಗ್ವಾರ್ ಹೇಳಿದ್ದಾರೆ.

"ಈ ಪ್ರಸ್ತಾವನೆಯನ್ನು  ಇಪಿಎಫ್‌ಒನ ಸಂಬಂಧ ಉನ್ನತ ಮಟ್ಟದ ನಿರ್ಧಾರ ತೆಗೆದುಕೊಳ್ಳುವ  ಕೇಂದ್ರ ಟ್ರಸ್ಟಿಗಳು ಫೆಬ್ರವರಿ 22, 2019 ರಂದು ಅಂಗೀಕರಿಸಿದೆ. ನಾವು ಸೆಪ್ಟೆಂಬರ್ 19, 2019 ರಂದು ಹಣಕಾಸು ಸಚಿವಾಲಯದ ಸಮ್ಮತಿಯನ್ನು ಸ್ವೀಕರಿಸಿದ್ದೇವೆ. ನಂತರ, ಕಾರ್ಮಿಕ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ ಎಂದು ಅವರು ವಿವರಿಸಿದ್ದಾರೆ.

ಈ ನಿರ್ಧಾರವು 54 ಕೋಟಿ ರೂ ಮೊತ್ತವನ್ನು  6 ​​ಕೋಟಿಗೂ ಹೆಚ್ಚು ಇಪಿಎಫ್‌ಒ ಚಂದಾದಾರರ ಖಾತೆಗೆ ಜಮಾ ಮಾಡಲು ದಾರಿ ಮಾಡಿಕೊಡುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com