ಹಬ್ಬದ ಸಂಭ್ರಮಕ್ಕೆ ಗ್ರಾಹಕರಿಗೆ ಶಾಕ್! ಈರುಳ್ಳಿ ಬಳಿಕ ಟೊಮ್ಯಾಟೋಗೂ ತಟ್ಟಿದ ಬೆಲೆ ಏರಿಕೆ ಬಿಸಿ

ಭಾರೀ ಬೆಲೆ ಏರಿಕೆಯಾಗಿ ಗ್ರಾಹಕರಿಗೆ ಈರುಳ್ಳಿ ಇದಾಗಲೇ ಕಣ್ಣೀರು ತರಿಸುತ್ತಿದ್ದು ಇದೀಗ ಈರುಳ್ಳಿ ಬಳಿಕ ಟೊಮ್ಯಾಟೊ ಕೂಡಾ ಪೂರೈಕೆ ಕೊರತೆಯ ಕಾರಣ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಾಣುತ್ತಿದೆ.ಕಳೆದ ಕೆಲವು ವಾರಗಳಿಂದ, ಟೊಮೆಟೊ ಬೆಲೆ ದೆಹಲಿಯಲ್ಲಿ ಶೇಕಡಾ 70 ರಷ್ಟು ಏರಿಕೆಯಾಗಿದೆ. ಬೆಲೆ ಏರಿಕೆಯಿಂದಾಗಿ ಹಬ್ಬದ ಋತುವಿನಲ್ಲಿ ಜನರು ಕಷ್ಟ ಎದುರಿಸುವಂತಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರೀ ಬೆಲೆ ಏರಿಕೆಯಾಗಿ ಗ್ರಾಹಕರಿಗೆ ಈರುಳ್ಳಿ ಇದಾಗಲೇ ಕಣ್ಣೀರು ತರಿಸುತ್ತಿದ್ದು ಇದೀಗ ಈರುಳ್ಳಿ ಬಳಿಕ ಟೊಮ್ಯಾಟೊ ಕೂಡಾ ಪೂರೈಕೆ ಕೊರತೆಯ ಕಾರಣ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಾಣುತ್ತಿದೆ.ಕಳೆದ ಕೆಲವು ವಾರಗಳಿಂದ, ಟೊಮೆಟೊ ಬೆಲೆ ದೆಹಲಿಯಲ್ಲಿ ಶೇಕಡಾ 70 ರಷ್ಟು ಏರಿಕೆಯಾಗಿದೆ. ಬೆಲೆ ಏರಿಕೆಯಿಂದಾಗಿ ಹಬ್ಬದ ಋತುವಿನಲ್ಲಿ ಜನರು ಕಷ್ಟ ಎದುರಿಸುವಂತಾಗಿದೆ.

ಭಾರೀ ಮಳೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ  ಮಹಾರಾಷ್ಟ್ರ, ಕರ್ನಾಟಕ ಮತ್ತು ಉತ್ತರ ಪ್ರದೇಶಗಳಲ್ಲಿ ತರಕಾರಿಗಳ ಬೆಲೆ ಏರಿಕೆಯಾಗಿದೆ. ಕಳೆದ ವರ್ಷ ಅದೇ ಸಮಯದಲ್ಲಿ ಈರುಳ್ಳಿಯ ಬೆಲೆಗಳು ದ್ವಿಗುಣವಾಗಿದ್ದರೂ ಟೊಮ್ಯಾಟೊ ಬೆಲೆಗಳಲ್ಲಿ ಅಂತಹಾ ಏರುಪೇರಾಗಿರಲಿಲ್ಲ.

ದೆಹಲಿ-ಎನ್‌ಸಿಆರ್‌ನಲ್ಲಿನ ಟೊಮ್ಯಾಟೋ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು ಕಳೆದ ಕೆಲವು ದಿನಗಳಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ  40-60 ರೂ ಗೆ ತಲುಪಿದೆ.ಭವಿಷ್ಯದಲ್ಲಿ ಬೆಲೆಗಳು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

ದೆಹಲಿಯಲ್ಲಿ ಮಾತ್ರವಲ್ಲ ದೇಶದ ವಿವಿಧೆಡೆ ಟೊಮ್ಯಾಟೋ ಬೆಲೆತೀವ್ರವಾಗಿ ಹೆಚ್ಚಾಗಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ವೆಬ್‌ಸೈಟ್ ಪ್ರಕಾರ, ಚಂಡೀಘರ್ ನಲ್ಲಿ ಈರುಳ್ಳಿ ಬೆಲೆ ಬುಧವಾರ ಕೆ.ಜಿ.ಗೆ 52 ರೂ.ಇದೆ.ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಟೊಮ್ಯಾಟೋ ಉತ್ಪಾದನೆ ಪ್ರಮಾಣ ಮೂರನೇ ಒಂದು ಭಾಗಕ್ಕಿಂತ ಕಡಿಮೆಯಾಗಿದೆ ಎಂದು ಎಪಿಎಂಸಿ ಅಧಿಕಾರಿಯೊಬ್ಬರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.ಎಪಿಎಂಸಿ ಅಧಿಕಾರಿಗಳು ಮತ್ತು ಟೊಮೆಟೊ ವ್ಯಾಪಾರಿಗಳ ಸಂಘಗಳ ಪ್ರಧಾನ ಕಾರ್ಯದರ್ಶಿ ಮಿಂಟೋ ಚೌಹಾನ್ ಮಾತನಾಡಿ ಟೊಮ್ಯಾಟೋ ಉತ್ಪಾದನೆ ಹಾಗೂ ಆವಕವು ಸುಧಾರಿಸುವ ನಿರೀಕ್ಷೆಯಿಲ್ಲ ಮತ್ತು ಭವಿಷ್ಯದಲ್ಲಿ ಇದರ ಬೆಲೆಗಳು ಹೆಚ್ಚಾಗಬಹುದು ಎಂದು ಹೇಳಿದರು.ಪ್ರವಾಹದಿಂದಾಗಿ ಟೊಮೆಟೊ ಬೆಳೆ ಹಾಳಾಗುತ್ತಿದೆ ಮತ್ತು ಪ್ರತಿದಿನ ಬರುವ ಟ್ರಕ್‌ಗಳ ಸಂಖ್ಯೆ ಹಿಂದಿನ 40 ರಿಂದ 20 ಕ್ಕೆ ಇಳಿದಿದೆ ಎಂದು ಅವರು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com