ಪ್ರಮುಖ ಕೈಗಾರಿಕೆ ವಲಯದ ಉತ್ಪಾದನೆ ತೀವ್ರ ಕುಸಿತ

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಎಂಟು ಪ್ರಮುಖ ಕೈಗಾರಿಕೆಗಳು ಜುಲೈನಲ್ಲಿನ ಶೇ .2.7ಕ್ಕೆ ಹೋಲಿಸಿದರೆ ಈ ವರ್ಷ ಆಗಸ್ಟ್‌ನಲ್ಲಿ ನಕಾರಾತ್ಮಕವಾಗಿದ್ದು ಶೇ .0.5 ಕ್ಕೆ ಕುಸಿದಿದೆ. 

Published: 30th September 2019 08:09 PM  |   Last Updated: 30th September 2019 08:09 PM   |  A+A-


industrial-production

ಪ್ರಮುಖ ಕೈಗಾರಿಕೆ ವಲಯದ ಉತ್ಪಾದನೆ ತೀವ್ರ ಕುಸಿತ

Posted By : Srinivas Rao BV
Source : UNI

ನವದೆಹಲಿ: ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಎಂಟು ಪ್ರಮುಖ ಕೈಗಾರಿಕೆಗಳು ಜುಲೈನಲ್ಲಿನ ಶೇ .2.7ಕ್ಕೆ ಹೋಲಿಸಿದರೆ ಈ ವರ್ಷ ಆಗಸ್ಟ್‌ನಲ್ಲಿ ನಕಾರಾತ್ಮಕವಾಗಿದ್ದು ಶೇ .0.5 ಕ್ಕೆ ಕುಸಿದಿದೆ. 

 2019-19ರ ಏಪ್ರಿಲ್‌ನಿಂದ ಆಗಸ್ಟ್‌ನಲ್ಲಿ ಇದರ ಸಂಚಿತ ಬೆಳವಣಿಗೆ 2018-19ರಲ್ಲಿ ಶೇ 5.7ಕ್ಕೆ ಹೋಲಿಸಿದರೆ ಶೇಕಡಾ 2.4 ರಷ್ಟಿತ್ತು.  ಉಕ್ಕಿನ ವಲಯವು 2019-20 ಏಪ್ರಿಲ್-ಆಗಸ್ಟ್ ತಿಂಗಳಲ್ಲಿ ಶೇಕಡಾ 3.5 ಕ್ಕೆ ಇಳಿದಿದೆ . ಏಪ್ರಿಲ್-ಆಗಸ್ಟ್ 2018-19ರಲ್ಲಿ ಶೇ.9.7ರಷ್ಟಿತ್ತು.  2019-20ರ ಏಪ್ರಿಲ್-ಆಗಸ್ಟ್ ತಿಂಗಳಲ್ಲಿ ವಿದ್ಯುತ್ ಕ್ಷೇತ್ರವು ಶೇಕಡಾ 4.6 ಕ್ಕೆ ಇಳಿದಿದೆ. ಕಳೆದ ವರ್ಷ ಇದೇ ಅವಧೀಯಲ್ಲಿ ಶೇಕಡಾ 5.8 ರಷ್ಟಿತ್ತು.  ಸಿಮೆಂಟ್ ವಲಯವು 2019-20 ಏಪ್ರಿಲ್-ಆಗಸ್ಟ್‌ನಲ್ಲಿ ಶೇ.15ರಿಂದ ಶೇ. 1.3 ಕ್ಕೆ ತೀವ್ರ ಕುಸಿತ ಅನುಭವಿಸಿದೆ.
  
2018ರ ಆಗಸ್ಟ್‌ಗೆ ಹೋಲಿಸಿದರೆ ಈ ವರ್ಷ ಕಲ್ಲಿದ್ದಲು ಉತ್ಪಾದನೆಯು ಶೇ.8.6 ಮತ್ತು ಕಚ್ಚಾ ತೈಲ ಉತ್ಪಾದನೆಯು ಶೇ.5.4 ರಷ್ಟು ಕುಸಿದಿದೆ.  ನೈಸರ್ಗಿಕ ಅನಿಲ ಉತ್ಪಾದನೆಯು ಶೇಕಡಾ 3.9 ರಷ್ಟು ಕುಸಿದಿದ್ದರೆ, ಪೆಟ್ರೋಲಿಯಂ ಸಂಸ್ಕರಣಾಗಾರ ಉತ್ಪಾದನೆಯು ಆಗಸ್ಟ್ 2018 ಕ್ಕೆ ಹೋಲಿಸಿದರೆ ಶೇಕಡಾ 2.6 ರಷ್ಟು ಹೆಚ್ಚಾಗಿದೆ.  ರಸಗೊಬ್ಬರಗಳ ಉತ್ಪಾದನೆಯು ಶೇಕಡಾ 2.9 ರಷ್ಟು ಮತ್ತು ಉಕ್ಕಿನ ಉತ್ಪಾದನೆಯು ಶೇ.5.0 ರಷ್ಟು ಹೆಚ್ಚಾಗಿದೆ.

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp