ಎಚ್‌ಯುಎಲ್‌ -ಜಿಎಸ್‌ಕೆ ವಿಲೀನ: ಹಿಂದೂಸ್ಥಾನ್‌ ಯುನಿಲೆವರ್‌ ಪಾಲಾದ ಹಾರ್ಲಿಕ್ಸ್‌, ಬೂಸ್ಟ್ 

ಜನಪ್ರಿಯ ಹಾಲಿನ ಪೂರಕ ಬ್ರಾಂಡ್‌ಗಳಾದ ಹಾರ್ಲಿಕ್ಸ್, ಬೂಸ್ಟ್ ಅನ್ನು ಈಗ ಡವ್, ಪಿಯರ್ಸ್ ಮತ್ತು ಲಿಪ್ಟನ್ ಬ್ರಾಂಡ್‌ಗಳ ತಯಾರಕ ಸಂಸ್ಥೆ ಹಿಂದೂಸ್ಥಾನ್‌ ಯುನಿಲೆವರ್‌ ಲಿ. (ಎಚ್‌ಯುಎಲ್‌) ಖರೀದಿಸಿದೆ.  ಗ್ಲಾಕ್ಸೊ ಸ್ಮಿತ್‌ಕ್ಲೈನ್ ​​ಕನ್ಸ್ಯೂಮರ್ ಹೆಲ್ತ್‌ಕೇರ್ ಲಿಮಿಟೆಡ್‌ (ಜಿಎಸ್‌ಕೆ) ಒಡೆತನದ ಹಾರ್ಲಿಕ್ಸ್ ಹಾಗೂ ಬೂಸ್ಟ್ ಗಳನ್ನು ಎಚ್‌ಯುಎಲ್‌ 3,045 ಕೋಟಿ ರೂ.ಗೆ ಭಾ
ಹಾರ್ಲಿಕ್ಸ್
ಹಾರ್ಲಿಕ್ಸ್

ಜನಪ್ರಿಯ ಹಾಲಿನ ಪೂರಕ ಬ್ರಾಂಡ್‌ಗಳಾದ ಹಾರ್ಲಿಕ್ಸ್, ಬೂಸ್ಟ್ ಅನ್ನು ಈಗ ಡವ್, ಪಿಯರ್ಸ್ ಮತ್ತು ಲಿಪ್ಟನ್ ಬ್ರಾಂಡ್‌ಗಳ ತಯಾರಕ ಸಂಸ್ಥೆ ಹಿಂದೂಸ್ಥಾನ್‌ ಯುನಿಲೆವರ್‌ ಲಿ. (ಎಚ್‌ಯುಎಲ್‌) ಖರೀದಿಸಿದೆ.  ಗ್ಲಾಕ್ಸೊ ಸ್ಮಿತ್‌ಕ್ಲೈನ್ ​​ಕನ್ಸ್ಯೂಮರ್ ಹೆಲ್ತ್‌ಕೇರ್ ಲಿಮಿಟೆಡ್‌ (ಜಿಎಸ್‌ಕೆ) ಒಡೆತನದ ಹಾರ್ಲಿಕ್ಸ್ ಹಾಗೂ ಬೂಸ್ಟ್ ಗಳನ್ನು ಎಚ್‌ಯುಎಲ್‌ 3,045 ಕೋಟಿ ರೂ.ಗೆ ಭಾರತೀಯ ಮಾರುಕಟ್ಟೆಗಾಗಿ ಖರೀದಿಸಿದೆ. ಎಚ್‌ಯುಎಲ್‌ ಜತೆಗಿನ ಜಿಎಸ್‌ಕೆ ವಿಲೀನ ಪೂರ್ಣಗೊಂಡಿದೆ.  ಎಫ್‌ಎಂಸಿಜಿ ಪ್ರಮುಖ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಜಿಎಸ್‌ಕೆಸಿಎಚ್ ವಿಲೀನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಪ್ರಕಟಿಸಿದೆ. ವಿಲೀನವನ್ನು ಡಿಸೆಂಬರ್ 2018 ರಲ್ಲಿ ಘೋಷಿಸಲಾಗಿತ್ತು.

“ಇದು ಇತ್ತೀಚಿನ ದಿನಗಳಲ್ಲಿ ಎಫ್‌ಎಂಸಿಜಿ ವಲಯದ ಅತಿದೊಡ್ಡ ವ್ಯವಹಾರಗಳಲ್ಲಿ ಒಂದಾಗಿದೆ ಮತ್ತು ಇದು ಎಲ್ಲಾ ಮಧ್ಯಸ್ಥಗಾರರಿಗೆ ಗಮನಾರ್ಹವಾದ ಮೌಲ್ಯ ಸೃಷ್ಟಿಗೆ ಕಾರಣವಾಗುತ್ತದೆ” ಎಂದು ಎಚ್‌ಯುಎಲ್ ಹೇಳಿಕೆಯಲ್ಲಿ ತಿಳಿಸಿದೆ

ಜಿಎಸ್‌ಕೆಸಿಎಚ್ ತನ್ನ ಪೋರ್ಟ್ಫೋಲಿಯೊ ಅಡಿಯಲ್ಲಿ ಬೂಸ್ಟ್, ಮಾಲ್ಟೋವಾ ಮತ್ತು ವೀವಾವನ್ನು ಸಹ ಹೊಂದಿದ್ದು ಇವೆಲ್ಲವೂ ಇನ್ನು ಎಚ್‌ಯುಎಲ್ ಅಡಿಯಲ್ಲಿ ಬರುತ್ತದೆ."ವಿಲೀನ ಜೀವಿಸಲು ಅಗತ್ಯವಾಗಿರುವ  ಪೌಷ್ಠಿಕಾಂಶ ಸಂಬಂಧಿತ ಸವಾಲುಗಳು ರೋಗದ ಅತಿದೊಡ್ಡ ಕಾರಣಗಳಾದ ಅಪೌಷ್ಟಿಕತೆ ಮತ್ತು ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ರೂಪಿಸುವ ಭಾರತಕ್ಕೆ ಸೇವೆ ಸಲ್ಲಿಸಲು ಒಂದು ಅನನ್ಯ ಅವಕಾಶವನ್ನು ನೀಡುತ್ತದೆ ಮತ್ತು ಸರ್ಕಾರದ ಮಹತ್ವಾಕಾಂಕ್ಷೆಯ  ಸ್ವಾಸ್ಥ್ಯ ಭಾರತ್ ಮತ್ತು ಪೋಶಣ್ ಅಭಿಯಾನ್ ಕಾರ್ಯಕ್ರಮಗಳೊಂದಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ" ಎಂದುಹಿಂದೂಸ್ತಾನ್ ಯೂನಿಲಿವರ್ ವ್ಯವಸ್ಥಾಪಕ ನಿರ್ದೇಶಕ  ಅಧ್ಯಕ್ಷ ಸಂಜೀವ್ ಮೆಹ್ತಾ ಹೇಳಿದ್ದಾರೆ.

1930 ರ ದಶಕದಲ್ಲಿ ಭಾರತದಲ್ಲಿ  ಹಾರ್ಲಿಕ್ಸ್  ಅನ್ನು ಪರಿಚಯಿಸಲಾಯಿತು. ಭಾರತದಲ್ಲಿ ಜಿಎಸ್‌ಕೆ ಗೆ ಗ್ರಾಹಕ ಆರೋಗ್ಯ ಕುಟುಂಬದ ಬ್ರಾಂಡ್‌ಗಳನ್ನು ವಿತರಿಸಲು ಎಚ್‌ಯುಎಲ್ ಮತ್ತು ಜಿಎಸ್‌ಕೆ ರವಾನೆಯ ಮಾರಾಟ ವ್ಯವಸ್ಥೆ ಇತ್ತು.ಎಚ್‌ಯುಎಲ್ ತನ್ನ ವಿತರಣಾ ಜಾಲವನ್ನು ಜಿಎಸ್‌ಕೆ ಎನೋ, ಕ್ರೋಸಿನ್, ಸೆನ್ಸೊಡೈನ್‌ನಂತಹ ಮಾರುಕಟ್ಟೆ ಬ್ರಾಂಡ್‌ಗಳ ಹತೋಟಿಒಗೆ ತರಲಿದೆ. ಜಿಎಸ್‌ಕೆ ಕಳೆದ ಹಣಕಾಸು ವರ್ಷದಲ್ಲಿ 45 ಬಿಲಿಯನ್ ರೂ. ವಹಿವಾಟು ನಡೆಸಿತು ಮತ್ತು ಹಾರ್ಲಿಕ್ಸ್ ಮತ್ತು ಬೂಸ್ಟ್ ಬ್ರಾಂಡ್‌ಗಳ ಮೂಲಕ  ಇದರ ಬಹುಪಾಲು ಆದಾಯ ಬರುತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com