ಎಲ್ ಪಿಜಿ ದರ ಪ್ರತಿ ಸಿಲಿಂಡರ್ ಗೆ 65 ರೂಪಾಯಿ ಇಳಿಕೆ: 2 ತಿಂಗಳಲ್ಲಿ ಎರಡನೇ ಬಾರಿ ಕಡಿತ! 

ಕೊರೋನಾ ವೈರಸ್ ನಿಂದ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವ ನಡುವೆ, ಎಲ್ ಪಿಜಿ ಸಿಲಿಂಡರ್ ಗಳ ದರ ಇಳಿಕೆಯಾಗಿದೆ. 
ಎಲ್ ಪಿಜಿ ದರ ಪ್ರತಿ ಸಿಲಿಂಡರ್ ಗೆ 65 ರೂಪಾಯಿ ಇಳಿಕೆ: 2 ತಿಂಗಳಲ್ಲಿ ಎರಡನೇ ಬಾರಿ ಕಡಿತ!
ಎಲ್ ಪಿಜಿ ದರ ಪ್ರತಿ ಸಿಲಿಂಡರ್ ಗೆ 65 ರೂಪಾಯಿ ಇಳಿಕೆ: 2 ತಿಂಗಳಲ್ಲಿ ಎರಡನೇ ಬಾರಿ ಕಡಿತ!

ನವದೆಹಲಿ: ಕೊರೋನಾ ವೈರಸ್ ನಿಂದ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವ ನಡುವೆ, ಎಲ್ ಪಿಜಿ ಸಿಲಿಂಡರ್ ಗಳ ದರ ಇಳಿಕೆಯಾಗಿದೆ. 

ಸಬ್ಸಿಡಿ ರಹಿತ ಪ್ರತಿ ಸಿಲಿಂಡರ್ ಗೆ 65 ರೂಪಾಯಿ ಕಡಿತಗೊಳಿಸಲಾಗಿದ್ದು, 2 ತಿಂಗಳಲ್ಲಿ 2 ನೇ ಬಾರಿಗೆ ಬೆಲೆ ಇಳಿಕೆ ಕಂಡಿದೆ. ಕೆಲವು ವಾರಗಳಿಂದ ಕಚ್ಚಾ ತೈಲ ದರ ಇಳಿಕೆಯಾಗಿರುವ ಪರಿಣಾಮ ಈ ಬೆಳವಣಿಗೆ ಕಾಣುತ್ತಿದ್ದೇವೆ.  

ಈ ನಡುವೆ ಏ.1 ರಂದು ಭಾರತೀಯ ತೈಲ ಕಾರ್ಪೊರೇಷನ್ ಮಹತ್ವದ ಘೋಷಣೆ ಮಾಡಿದ್ದು, ಸಿಲಿಂಡರ್ ಪೂರೈಕೆದಾರರು ಕೋವಿಡ್-19 ಗೆ ತುತ್ತಾದ ಮೃತರ ಕುಟುಂಬದವರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಹೇಳಿದೆ. 

ಪ್ರಮುಖ ಸಿಲಿಂಡರ್ ಪೂರೈಕೆದಾರರಿಗೆ ಕೋವಿಡ್-19 ಸೋಂಕಿನ ಅಪಾಯ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಕ್ರಮಗಳನ್ನು ಕೈಗೊಂಡಿದ್ದು, ದುರಾದೃಷ್ಟವಶಾತ್ ಪೂರೈಕೆದಾರರು ಕೋವಿಡ್-19 ಗೆ ತುತ್ತಾಗಿ ಪ್ರಾಣಾಪಾಯ ಸಂಭವಿಸಿದರೆ, ಅವರ ಕುಟುಂಬ ಸದಸ್ಯರಿಗೆ ಅಥವಾ ಪತ್ನಿಗೆ 5 ಲಕ್ಷ ರೂಪಾಯಿ ನೀಡಲಾಗುವುದು ಎಂದು ಎಲ್ ಪಿಜಿಯ ಪೂರೈಕೆ ಮತ್ತು ಮಾರುಕಟ್ಟೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಸುನಿಲ್ ಮಾಥುರ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com