ಕೋವಿಡ್-19ನಿಂದ ಆರ್ಥಿಕ ಕುಸಿತ: ರಫ್ತಿಗೆ ಸಂಬಂಧಿಸಿ ನಿಯಮ ವಿಸ್ತರಿಸಿದ ಆರ್ ಬಿಐ

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಲಾಕ್ ಡೌನ್ ಆಗಿರುವುದರಿಂದ ಉಂಟಾಗಿರುವ ಆರ್ಥಿಕ ಕುಸಿತವನ್ನು ನಿಭಾಯಿಸಲು ರಿಸರ್ವ್ ಬ್ಯಾಂಕ್ ಮತ್ತಷ್ಟು ಕ್ರಮಗಳನ್ನು ಘೋಷಿಸಿದೆ. ಅದರಂತೆ ರಫ್ತು ವಸ್ತುಗಳ ಮೇಲಿನ ನೀತಿ, ನಿರ್ಬಂಧಗಳ ಅವಧಿಯನ್ನು ವಿಸ್ತರಿಸಲಾಗಿದೆ.

Published: 01st April 2020 03:17 PM  |   Last Updated: 01st April 2020 03:17 PM   |  A+A-


Posted By : Sumana Upadhyaya
Source : PTI

ನವದೆಹಲಿ:ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಲಾಕ್ ಡೌನ್ ಆಗಿರುವುದರಿಂದ ಉಂಟಾಗಿರುವ ಆರ್ಥಿಕ ಕುಸಿತವನ್ನು ನಿಭಾಯಿಸಲು ರಿಸರ್ವ್ ಬ್ಯಾಂಕ್ ಮತ್ತಷ್ಟು ಕ್ರಮಗಳನ್ನು ಘೋಷಿಸಿದೆ. ಅದರಂತೆ ರಫ್ತು ವಸ್ತುಗಳ ಮೇಲಿನ ನೀತಿ, ನಿರ್ಬಂಧಗಳ ಅವಧಿಯನ್ನು ವಿಸ್ತರಿಸಲಾಗಿದೆ.

ಅದರ ಜೊತೆಗೆ ಪ್ರಸ್ತುತ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಿರುವ ಪರಿಹಾರ ಮತ್ತು ವಿಧಾನ(ways and means advances)ಗಳ ಮಿತಿಯನ್ನು ಶೇಕಡಾ 30ರಷ್ಟು ಹೆಚ್ಚಿಸಿದೆ.

ಈ ಕುರಿತು ಹೇಳಿಕೆ ಹೊರಡಿಸಿರುವ ಆರ್ ಬಿಐ, ಪ್ರಸ್ತುತ ರಫ್ತುದಾರರು ಮಾಡಿರುವ ಸಾಫ್ಟ್ ವೇರ್ ರಫ್ತು ಅಥವಾ ವಸ್ತುಗಳ ಮೌಲ್ಯಗಳಿಗೆ ಸೂಕ್ತ ನಿಯಮ ರೂಪಿಸಿ ದೇಶಕ್ಕೆ 9 ತಿಂಗಳೊಳಗೆ ರಫ್ತು ಮಾಡಿದ ದಿನದಿಂದ ಕಳುಹಿಸಬೇಕು. ಆದರೆ ಕೊರೋನಾ ವೈರಸ್ ನಿಂದ ವಹಿವಾಟುಗಳೆಲ್ಲ ಸ್ಥಗಿತಗೊಂಡಿರುವುದರಿಂದ 15 ತಿಂಗಳವರೆಗೆ ಜುಲೈ 31ರವರೆಗೆ ವಿಸ್ತರಿಸಲಾಗಿದೆ ಎಂದಿದೆ.

Stay up to date on all the latest ವಾಣಿಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp