ಸೆನ್ಸೆಕ್ಸ್ 1203.18 ಅಂಕ, ನಿಫ್ಟಿ 343 ಅಂಕ ಪತನ

ಏಷ್ಯಾ ಮಾರುಕಟ್ಟೆಗಳು ಕ್ಷೀಣಿಸಿದ್ದರಿಂದ ಹಾಗೂ ಪ್ರಮುಖ ವಲಯಗಳ ಷೇರುಗಳು ಭಾರೀ ಮಾರಾಟ ಒತ್ತಡಕ್ಕೆ ಸಿಲುಕಿದ್ದರಿಂದ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸೂಚ್ಯಂಕ, ಸೆನ್ಸೆಕ್ಸ್ ಬುಧವಾರ 1,203.18 ಅಂಕ ಇಳಿಕೆ ಕಂಡು 28,265.31 ಕ್ಕೆ ತಲುಪಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಏಷ್ಯಾ ಮಾರುಕಟ್ಟೆಗಳು ಕ್ಷೀಣಿಸಿದ್ದರಿಂದ ಹಾಗೂ ಪ್ರಮುಖ ವಲಯಗಳ ಷೇರುಗಳು ಭಾರೀ ಮಾರಾಟ ಒತ್ತಡಕ್ಕೆ ಸಿಲುಕಿದ್ದರಿಂದ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸೂಚ್ಯಂಕ, ಸೆನ್ಸೆಕ್ಸ್ ಬುಧವಾರ 1,203.18 ಅಂಕ ಇಳಿಕೆ ಕಂಡು 28,265.31 ಕ್ಕೆ ತಲುಪಿದೆ.

ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ ಷೇರುಗಳು ಭಾರೀ ನಷ್ಟಕ್ಕೆ ಒಳಗಾಗಿವೆ. ಕಳೆದ ಕೆಲ ದಿನಗಳ ವಹಿವಾಟಿನಲ್ಲಿ ಭಾರೀ ಏರಿಕೆ ದಾಖಲಿಸಿದ್ದ ದೇಶೀಯ ಮಾರುಕಟ್ಟೆಗಳು ದಿಢೀರ್ ಕುಸಿತ ಕಂಡಿರುವುದು ಹೂಡಿಕೆದಾರರಲ್ಲಿ ಆತಂಕ ಹೆಚ್ಚಿಸಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ  ಸೂಚ್ಯಂಕ ನಿಫ್ಟಿ ಸಹ 343 ಅಂಕ ಕುಸಿದು 8,253.80 ಕ್ಕೆ ಇಳಿದಿದೆ.

ಸೆನ್ಸೆಕ್ಸ್ ದಿನದ ವಹಿವಾಟಿನಲ್ಲಿ ಕ್ರಮವಾಗಿ ಗರಿಷ್ಠ ಹಾಗೂ ಕನಿಷ್ಠ 29,505.98 ಮತ್ತು 28,073.43ರ ಮಟ್ಟದಲ್ಲಿತ್ತು. ನಿಫ್ಟಿ, ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 8,588.10 ಮತ್ತು 8,198.35ರ ಮಟ್ಟದಲ್ಲಿತ್ತು. ಬಿಎಸ್‍ಇನಲ್ಲಿ ಟೆಕ್ ಮಹೀಂದ್ರಾ ಭಾರೀ ನಷ್ಟವನ್ನು ಕಂಡಿದೆ. ಇದರ  ಷೇರುಗಳು ಶೇ .9.21 ರಷ್ಟು ಕುಸಿದು 512.90 ರೂ.ಗೆ ನಿಂತಿವೆ. 

ಹಾಗೆಯೇ ಕೋಟಕ್ ಬ್ಯಾಂಕ್ ಶೇ .8.81 ರಷ್ಟು ಕುಸಿದು 1182.10 ರೂ.ನಲ್ಲಿ, ಟಿಸಿಎಸ್ ಶೇ 6.23 ರಷ್ಟು ಕುಸಿದು 1709.55 ರೂ.ನಲ್ಲಿ, ಇನ್ಫೋಸಿಸ್ ಶೇ 5.65 ರಷ್ಟು ಕುಸಿದು 604.10 ರೂ.ನಲ್ಲಿ ಹಾಗೂ ಆಕ್ಸಿಸ್ ಬ್ಯಾಂಕ್ ಶೇ 5.50 ರಷ್ಟು ಕುಸಿದು 358.45 ರೂ.ನಲ್ಲಿದ್ದವು. ಲಾಭ ಗಳಿಸಿದ  ಷೇರುಗಳ ಪೈಕಿ ಟೈಟಾನ್ ಶೇ 0.35 ರಷ್ಟು ಏರಿಎಕೆ ಕಂಡು ರೂ. 936ನಲ್ಲಿ, ಬಜಾಜ್ ಫೈನಾನ್ಸ್ ಶೇ 0.40 ರಷ್ಟು ಏರಿಕೆ ಕಂಡು 2,225 ರೂ.ಗೆ ನಿಂತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com