ಇಎಂಐ ಪಾವತಿ ವಿಸ್ತರಣೆ ಬಯಸುತ್ತೀರಾ? ಯೋಚಿಸಿ, ನೀವು ಹೆಚ್ಚು ಹಣ ಕಟ್ಟಬೇಕಾಗುತ್ತದೆ, ಹೇಗೆ?

ಅವಧಿ ಸಾಲಗಳ ಮೇಲಿನ ಮೂಲಕಂತು ಪಾವತಿ(ಇಎಂಐ)ಯನ್ನು ಭಾರತದ ಎಲ್ಲಾ ಬ್ಯಾಂಕುಗಳು ವಿಸ್ತರಿಸಿವೆ.
ಇಎಂಐ ಪಾವತಿ ವಿಸ್ತರಣೆ ಬಯಸುತ್ತೀರಾ? ಯೋಚಿಸಿ, ನೀವು ಹೆಚ್ಚು ಹಣ ಕಟ್ಟಬೇಕಾಗುತ್ತದೆ, ಹೇಗೆ?

ನವದೆಹಲಿ: ಅವಧಿ ಸಾಲಗಳ ಮೇಲಿನ ಮೂಲಕಂತು ಪಾವತಿ(ಇಎಂಐ)ಯನ್ನು ಭಾರತದ ಎಲ್ಲಾ ಬ್ಯಾಂಕುಗಳು ವಿಸ್ತರಿಸಿವೆ.

ಮೇಲ್ನೋಟಕ್ಕೆ ನೀವು ಈ ಮೂರು ತಿಂಗಳು ಪಾವತಿ ಮಾಡಬೇಕಾದ ಇಎಂಐಯನ್ನು ಜೂನ್ ವರೆಗೆ ವಿಸ್ತರಿಸಿ ಗ್ರಾಹಕರ ಹಣಕಾಸು ಹೊರೆಯನ್ನು ತಗ್ಗಿಸಿದೆ ಎಂದು ನಿಮಗೆ ಅನಿಸಬಹುದು.

ವಾಸ್ತವವಾಗಿ ನೀವು ಬ್ಯಾಂಕಿಗೆ ಪಾವತಿಸಬೇಕಾದ ಇಎಂಐಯನ್ನು ಮುಂದೂಡಿದರೆ ಒಟ್ಟು ಪಾವತಿಸಬೇಕಾದ ಸಾಲದ ಮೇಲೆ ಹೆಚ್ಚು ಬಡ್ಡಿಯನ್ನು ಈ ಮೂರು ತಿಂಗಳು ಹಾಕಲಿದ್ದು ಅದು ಗ್ರಾಹಕರಿಗೆ ದುಬಾರಿಯಾಗುತ್ತದೆ, ಗೃಹ ಸಾಲಗಳಂತವುಗಳಲ್ಲಿ ಅವಧಿಯು 3 ತಿಂಗಳುಗಳಿಗಿಂತ ಹೆಚ್ಚು ಸಮಯದವರೆಗೆ ವಿಸ್ತರಣೆಯಾಗುತ್ತದೆ. ಪಾವತಿ ದಿನಾಂಕ ಮುಗಿದ ನಂತರ ದಿನನಿತ್ಯದ ಲೆಕ್ಕಾಚಾರದಲ್ಲಿ ಬಡ್ಡಿ ಹಾಕುವುದರಿಂದ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಇನ್ನಷ್ಟು ಹೊರೆಯಾಗುತ್ತದೆ.

ಈ ವಾಸ್ತವ ಸಂಗತಿಯನ್ನು ಎಸ್ ಬಿಐಯೇ ಹೇಳಿದೆ. ಉದಾಹರಣೆಗೆ ನೀವು 30 ಲಕ್ಷ ಗೃಹ ಸಾಲ ಪಡೆದುಕೊಂಡಿದ್ದೀರಿ, ಇನ್ನು 15 ವರ್ಷಗಳ ಕಾಲ ಕಟ್ಟಬೇಕಿದೆ ಎಂದಿಟ್ಟುಕೊಳ್ಳಿ. ಇದಕ್ಕೆ ಹೆಚ್ಚುವರಿ ಸುಮಾರು 2.34 ಲಕ್ಷ ರೂಪಾಯಿ ಬಡ್ಡಿ ಬೀಳುತ್ತದೆ, ಏಕೆಂದರೆ ನೀವು ಈಗ 3 ತಿಂಗಳು ಇಎಂಐ ಪಾವತಿಯನ್ನು ಮುಂದೂಡಿದರೆ ಒಟ್ಟಾರೆ 15 ವರ್ಷಗಳಲ್ಲಿ ಪಾವತಿಸಬೇಕಾದ ಸಾಲದ ಮೊತ್ತ ಮತ್ತೆ 8 ತಿಂಗಳು ಮುಂದೂಡಲ್ಪಡುತ್ತದೆ. 15 ವರ್ಷದೊಳಗೆ ನೀವು ಹೆಚ್ಚು ಹಣ ಕಟ್ಟಿ ಸಾಲವನ್ನು ತೀರಿಸಿದರೆ ಮಾತ್ರ ಸುಲಭವಾಗಬಹುದು, ಇಲ್ಲದಿದ್ದರೆ ಈಗ ಇಎಂಐ ಮುಂದೂಡಲ್ಪಡುವುದು ಸಾಲ ತೆಗೆದುಕೊಂಡವರಿಗೆ ಒಟ್ಟಾರೆ ವರ್ಷದಲ್ಲಿ ಆರ್ಥಿಕ ಹೊರೆ.

ಹೀಗಾಗಿ ನಿಮಗೆ ಸಾಧ್ಯವಾದರೆ, ನಿಮ್ಮಲ್ಲಿ ಹಣವಿದ್ದರೆ ಇಎಂಐ ಪಾವತಿಸಿ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಎಲ್ಲಾ ಬ್ಯಾಂಕುಗಳು ಗ್ರಾಹಕರಿಗೆ ಹೇಳುತ್ತಿರುತ್ತದೆ. ಅದಾಗ್ಯೂ ಕೆಲ ಬ್ಯಾಂಕುಗಳು ಸಾಲದ ಅವಧಿ ವಿಸ್ತರಣೆ ಇಎಂಐ ಪಾವತಿ ಮುಂದೂಡಿಕೆಯ ತಿಂಗಳುಗಳಿಗೆ ಸಮನಾಗುತ್ತದೆ ಎಂದು ಹೇಳುತ್ತಿವೆ.

ಇಲ್ಲಿ ಗ್ರಾಹಕರು ಗಮನಿಸಬೇಕಾದ ಬಹಳ ಮುಖ್ಯ ಅಂಶವೆಂದರೆ ಇಎಂಐ ಪಾವತಿ ವಿಸ್ತರಣೆಯೆಂದರೆ ಬಡ್ಡಿ ಮನ್ನಾ ಅಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com