ಆರ್ ಐಎಲ್ ಸಿಬ್ಬಂದಿಯನ್ನು‘ಫ್ರೆಂಟ್‌ ಲೈನ್ ಯೋಧರು’ಎಂದು ಬಣ್ಣಿಸಿದ ಮುಖೇಶ್ ಅಂಬಾನಿ

ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ದೇಶದಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಸಾವಿರಾರು ನೌಕರರು ಲೈಫ್‌ಲೈನ್‌ಗಳನ್ನು ನಡೆಸಲು ಸಹಾಯ ಮಾಡುತ್ತಿದ್ದಾರೆ.
ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ

ನವದೆಹಲಿ: ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ದೇಶದಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಸಾವಿರಾರು ನೌಕರರು ಲೈಫ್‌ಲೈನ್‌ಗಳನ್ನು ನಡೆಸಲು ಸಹಾಯ ಮಾಡುತ್ತಿದ್ದಾರೆ. ಫೋನ್ ಲೈನ್‌ನಿಂದ ಹಿಡಿದು ಅಂಗಡಿಗಳ ಬಾಗಿಲು ತೆರೆದು ಜನರಿಗೆ ಸೇವೆಯನ್ನು ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಕೋವಿಡ್‌-19 ವಿರುದ್ಧ ಯುದ್ಧದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಪಾತ್ರವನ್ನು ಎತ್ತಿಹಿಡಿದ ಬಿಲಿಯನೇರ್ ಮುಖೇಶ್ ಅಂಬಾನಿ, ಆರ್‌ ಐ ಎಲ್ ಸಿಬ್ಬಂದಿಯನ್ನು ‘ಫ್ರೆಂಟ್‌ ಲೈನ್ ಯೋಧರು’ ಎಂದು ಬಣ್ಣಿಸಿದ್ದಾರೆ.

ಆಯಿಲ್ ನಿಂದ ಹಿಡಿದು ಟೆಲಿಕಾಂ ಕ್ಷೇತ್ರದವರೆಗೂ ಕಾರ್ಯನಿರ್ವಹಿಸುತ್ತಿರುವ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕಳುಹಿಸಿದ ಇಮೇಲ್‌ನಲ್ಲಿ, ಬಿಲಿಯನೇರ್ ಮುಖೇಶ್ ಅಂಬಾನಿ ಆಧುನಿಕ ಇತಿಹಾಸದಲ್ಲಿ ಅತ್ಯಂತ ಭೀಕರವಾದ ಪ್ರತಿಕೂಲತೆಯನ್ನು ಎದುರಿಸುವಲ್ಲಿ ಕಂಪನಿಯ ಪ್ರತಿಯೊಬ್ಬರೂ ಅಸಾಧಾರಣ ಮಟ್ಟದ ಬದ್ಧತೆಯನ್ನು ಪ್ರದರ್ಶಿಸುತ್ತಿರುವುದಕ್ಕೆ ಅವರು ವಿನಮ್ರರಾಗಿದ್ದಾರೆ ಎಂದು ಹೇಳಿದ್ದಾರೆ.

ಮೂರು ವಾರಗಳ ಲಾಕ್‌ಡೌನ್ ಸಲುವಾಗಿ 130 ಕೋಟಿ ಭಾರತೀಯರು ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ, ಇವರಿಗಾಗಿ ರಿಲಯನ್ಸ್‌ನ ಟೆಲಿಕಾಂ ಜಿಯೋ ಮೊಬೈಲ್‌ನಲ್ಲಿ ನಿರಂತರ ಧ್ವನಿ ಕರೆ ಮತ್ತು ಇಂಟರ್‌ ನೆಟ್ ಸೇವೆಗಳ ಮೂಲಕ ಸುಮಾರು 40 ಕೋಟಿ ಜನರಿಗೆ ಜೀವಸೆಲೆ ಒದಗಿಸುತ್ತಿದೆ, ರಿಲಯನ್ಸ್ ರಿಟೇಲ್ ಲಕ್ಷಾಂತರ ಜನರಿಗೆ ಅಗತ್ಯ ಆಹಾರ ಮತ್ತು ಇತರ ವಸ್ತುಗಳನ್ನು ಪೂರೈಸುತ್ತಿದೆ, ರಿಲಯನ್ಸ್ ಲೈಫ್ ಸೈನ್ಸಸ್ ಭಾರತದ ಕೋವಿಡ್‌-19 ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ ಮತ್ತು ಸರ್ ಹೆಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಕೇವಲ 10 ದಿನಗಳಲ್ಲಿ ಮುಂಬೈನಲ್ಲಿ 100 ಹಾಸಿಗೆಗಳ ಕೊರೋನಾವೈರಸ್ ಚಿಕಿತ್ಸಾ ಸೌಲಭ್ಯವನ್ನು ಸ್ಥಾಪಿಸಿದೆ ಎಂದು ತಿಳಿಸಿದ್ದಾರೆ

ಇದಲ್ಲದೆ, ಕಂಪನಿಯ ಇಂಧನ ಸಂಸ್ಕರಣಾಗಾರಗಳು ಪೆಟ್ರೋಲಿಯಂ ಉತ್ಪನ್ನಗಳನ್ನು ಉತ್ಪಾದಿಸುವುದನ್ನು ಮುಂದುವರೆಸುತ್ತವೆ ಮತ್ತು ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳ ಪ್ಯಾಕೇಜಿಂಗ್‌ನಲ್ಲಿ ಬಳಸುವ ಉತ್ಪನ್ನಗಳ ತಯಾರಿಕೆಯೂ ಮುಂದುವರೆದಿದೆ.

ಇದೇ ಸಂದರ್ಭದಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಸಿಬ್ಬಂದಿಗೆ 'ಮೈ ವಾಯ್ಸ್' ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸುವುದಾಗಿ ಅವರು ಘೋಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com