ಕೊರೋನಾ ಲಾಕ್‌ಡೌನ್: ಜಾಗತಿಕ ಪೂರೈಕೆಯಲ್ಲಿನ ವ್ಯತ್ಯಯವೇ 'ಮೇಕ್ ಇನ್ ಇಂಡಿಯಾ'ಗೆ ವರದಾನ!

 ಭಾರತೀಯ ಉತ್ಪಾದನಾವಲಯವನ್ನು ಬಲಪಡಿಸಲು  ಜಾಗತಿಕ ಪೂರೈಕೆ ಸರಣಿಯಲ್ಲಿನ ತೊಡಕುಗಳನ್ನೇ ಆಧಾರವಾಗಿ ಬಳಸಿಕೊಳ್ಲಲು  ಸರ್ಕಾರಿ ಇಲಾಖೆಗಳು ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ  ಹೆಚ್ಚಿನ ಬಿಡಿಭಾಗಗಳು ಮತ್ತು ಸಿದ್ಧಪಡಿಸಿದ ಉತ್ಪನ್ನಗಳನ್ನು ಅವು ಉತ್ಪಾದಿಸುತ್ತವೆ. ಲಾಕ್‌ಡೌನ್ ನಂತರ ಉತ್ಪಾದನೆ ಮತ್ತು ರಫ್ತು ಹೆಚ್ಚಿಸಲು ಕ್ರಿಯಾಶೀಲ ಕ್ರಮಗಳನ್ನು ಸಿದ್ಧಪಡಿಸುವಂತೆ ಇತ್ತ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತೀಯ ಉತ್ಪಾದನಾವಲಯವನ್ನು ಬಲಪಡಿಸಲು  ಜಾಗತಿಕ ಪೂರೈಕೆ ಸರಣಿಯಲ್ಲಿನ ತೊಡಕುಗಳನ್ನೇ ಆಧಾರವಾಗಿ ಬಳಸಿಕೊಳ್ಲಲು  ಸರ್ಕಾರಿ ಇಲಾಖೆಗಳು ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ  ಹೆಚ್ಚಿನ ಬಿಡಿಭಾಗಗಳು ಮತ್ತು ಸಿದ್ಧಪಡಿಸಿದ ಉತ್ಪನ್ನಗಳನ್ನು ಅವು ಉತ್ಪಾದಿಸುತ್ತವೆ. ಲಾಕ್‌ಡೌನ್ ನಂತರ ಉತ್ಪಾದನೆ ಮತ್ತು ರಫ್ತು ಹೆಚ್ಚಿಸಲು ಕ್ರಿಯಾಶೀಲ ಕ್ರಮಗಳನ್ನು ಸಿದ್ಧಪಡಿಸುವಂತೆ ಇತ್ತೀಚೆಗೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಪ್ರಧಾನಮಂತ್ರಿಗಳು ಸುಚಿಸಿದ್ದು ಅದರಂತೆ ಯೋಜನೆಗಳನ್ನು ತ್ವರಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖವಾಗಿ ಗಮನ ಸೆಳೆಯುವ ಕ್ಷೇತ್ರಗಳಲ್ಲಿ ಔಷಧಿ  ವಸ್ತುಗಳು, ವೈದ್ಯಕೀಯ ಸಾಮಗ್ರಿಗಳು,  ಎಲೆಕ್ಟ್ರಾನಿಕ್ಸ್, ಜವಳಿ, ಆಹಾರ ಸಂಸ್ಕರಣೆ ಮತ್ತು ರಕ್ಷಣಾ ಉಪಕರಣಗಳು ಸೇರಿವೆ. ಈ  ವಲಯದಲ್ಲಿ ದಕ್ಷತೆ, ಭಾರತದಲ್ಲಿ ಸಾಕಷ್ಟು ದೊಡ್ಡ ಮಾರುಕಟ್ಟೆಗಳು ಮತ್ತು ರಫ್ತಿಗೆ ಅನುಕೂಲವಾಗುವಂತೆ ಅವಕಾಶಗಳ ಆಧಾರದ ಮೇಲೆ ಕೈಗಾರಿಕೆಗಳ ವಿಂಗಡಣೆ ಮಾಡಲಾಗಿದೆ.

ಉದಾಹರಣೆಗೆ, “ಚೀನೀ ಕಚ್ಚಾ ಸಾಮಗ್ರಿಗಳಿಲ್ಲದೆ ನಮ್ಮಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಔಷಧಿಯ ಉದ್ಯಮ ದುರ್ಬಲವಾಗಬಹುದು. ಈ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಸಹ ಜಗತ್ತಿನಾದ್ಯಂತದ ಬೇಡಿಕೆಗಳ ಕಾರಣಕ್ಕೆ ನಾವು ಅವರನ್ನು ಜಾಗತಿಕ ಪೂರೈಕೆದಾರರನ್ನಾಗಿ ಬದಲಾಯಿಸಬಹುದು ಇದಕ್ಕಾಗಿ ಎಪಿಐ(ಆಕ್ಟಿವ್ ಫಾರ್ಮಾ ಇಂಗ್ರೆಡಿಯೆಂಟ್ಸ್) ಗಳಲ್ಲಿ ಹಾಗೂ ಇತರೆ ಉತ್ಪನ್ನಗಳ ಉತ್ಪಾದನೆಗೆ ಮತ್ತೊಮ್ಮೆ ಹೂಡಿಕೆ ಮಾಡುವ ಯೋಜನೆಗಳಿಗೆ ಇದು ಸಕಾಲವಾಗಿದೆ"ಅಧಿಕಾರಿಯೊಬ್ಬರು ಹೇಳಿದರು.

ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ, ಸಂಸ್ಥೆಗಳು ಆರ್ & ಡಿ ಟೈ-ಅಪ್ ಮತ್ತು ರಿವರ್ಸ್ ಎಂಜಿನಿಯರಿಂಗ್ ಅನ್ನು ಬಳಸುವುದರ ಮೂಲಕ, ಪ್ರಸ್ತುತ ಬೃಹತ್ ಆಮದುಬಿಲ್ ಗಳನ್ನು ನಡೆಸುವ ಅನೇಕ ನಿರ್ಣಾಯಕ ಘಟಕಗಳನ್ನು  ಸಮರ್ಥವಾಗಿ ನಿರ್ವಹಿಸುತ್ತವೆ ಎಂದು ಅಧಿಕಾರಿಗಳು ಭಾವಿಸುತ್ತಾರೆ. ಅಲ್ಲದೆ, ಅವರು ಭಾರತವನ್ನು ಜಾಗತಿಕವಾಗಿ ವಾಹನಗಳ ರಫ್ತುದಾರರನ್ನಾಗಿ ಮಾಡಲು ಇದು ಅನುಕೂಲ ಮಾಡಿಕೊಡಲಿದೆ ಎನ್ನುತ್ತಾರ್ರೆ.

ಅದೇ ರೀತಿ, ಜವಳಿ ಸಚಿವಾಲಯದ ಅಧಿಕಾರಿಗಳು ಹೇಳುವಂತೆ, ಜವಳಿ ವ್ಯಾಪಾರದಲ್ಲಿನ ಅಡೆತಡೆಗಳು, ಆಮದು ಮಾಡಲಾದ ಬಹಳಷ್ಟು ಪರಿಕರಗಳ ಮೇಲೆ ಅವಲಂಬಿತವಾಗಿವೆ, ಈ ವಲಯಕ್ಕೆ ಅಗತ್ಯವಿರುವ ಹೆಚ್ಚಿನ ವಸ್ತುಗಳನ್ನು ತಯಾರಿಸುವ ಘಟಕಗಳನ್ನು ಹೊಂದಿರುವ ಕಾರಣ ಭಾರತಕ್ಕೆ ಇದೊಂದು ಮಹತ್ವದ ಬದಲಾವಣೆಗೆಯಾಗಿರಲಿದೆ ಎನ್ನುತ್ತಾರೆ.ಆದಾಗ್ಯೂ, ಜವಳಿ ಉದ್ಯಮವು ಬಾಂಗ್ಲಾದೇಶ ಮತ್ತು ವಿಯೆಟ್ನಾಂನಂತಹ ಕಡಿಮೆ-ವೆಚ್ಚದ ಉತ್ಪಾದಕರೊಂದಿಗೆ ಸ್ಪರ್ಧಿಸುವ ಬದಲು ಪೂರೈಕೆ ಸರಣಿ ವಿಸ್ತರಣೆಗೆ ಚ್ಚಿನ ಮೌಲ್ಯವರ್ಧಿತ ಜವಳಿ ಮತ್ತು ಉಡುಪುಗಳನ್ನು ಉತ್ಪಾದಿಸುವ ಪ್ರಯತ್ನಗಳನ್ನು ಹೆಚ್ಚು ಮಾಡಬೇಕೆಂದು ಅಧಿಕಾರಿಗಳು ಬಯಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com