ಉಳಿತಾಯ ಖಾತೆ ಮೇಲಿನ ಬಡ್ಡಿದರ 25, ಎಂಸಿಎಲ್ ಆರ್ 35 ಬೇಸಿಸ್ ಪಾಯಿಂಟ್ ಇಳಿಸಿದ ಎಸ್ ಬಿಐ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಧಿ ಆಧಾರಿತ ಸಾಲ ದರದ ಕನಿಷ್ಠ ವೆಚ್ಚ(ಎಂಸಿಎಲ್ ಆರ್)ವನ್ನು 35 ಬೇಸಿಸ್ ಪಾಯಿಂಟ್ ನಷ್ಟು ಕಡಿತ ಮಾಡಿದೆ. ಒಂದು ವರ್ಷದ ಎಂಸಿಎಲ್ಆರ್ ಈ ತಿಂಗಳ 10ರಿಂದ ಜಾರಿಗೆ ಬರಲಿದೆ.
ಉಳಿತಾಯ ಖಾತೆ ಮೇಲಿನ ಬಡ್ಡಿದರ 25, ಎಂಸಿಎಲ್ ಆರ್ 35 ಬೇಸಿಸ್ ಪಾಯಿಂಟ್ ಇಳಿಸಿದ ಎಸ್ ಬಿಐ

ಹೈದರಾಬಾದ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಧಿ ಆಧಾರಿತ ಸಾಲ ದರದ ಕನಿಷ್ಠ ವೆಚ್ಚ(ಎಂಸಿಎಲ್ ಆರ್)ವನ್ನು 35 ಬೇಸಿಸ್ ಪಾಯಿಂಟ್ ನಷ್ಟು ಕಡಿತ ಮಾಡಿದೆ. ಒಂದು ವರ್ಷದ ಎಂಸಿಎಲ್ಆರ್ ಈ ತಿಂಗಳ 10ರಿಂದ ಜಾರಿಗೆ ಬರಲಿದೆ.

ಕಳೆದೊಂದು ವರ್ಷದಲ್ಲಿ ಸ್ಟೇಟ್ ಬ್ಯಾಂಕ್ ಸತತ 11ನೇ ಬಾರಿಗೆ ಕಡಿತ ಮಾಡುತ್ತಿರುವ ಎಂಸಿಎಲ್ ಆರ್ ಇದಾಗಿದ್ದು ಈ ದರ ಸದ್ಯ ವರ್ಷಕ್ಕೆ ಶೇಕಡಾ 7.4ರಲ್ಲಿದೆ. ಕಳೆದ ವರ್ಷ ಈ ದರ ಶೇಕಡಾ 7.7 ಆಗಿತ್ತು. ಇದರಿಂದಾಗಿ ಎಂಸಿಎಲ್ಆರ್ ಗೆ ಜೋಡಣೆಯಾಗಿರುವ 30 ವರ್ಷಗಳ ಗೃಹ ಸಾಲದ ಖಾತೆಗಳ ಇಎಂಐ ದರ 1 ಲಕ್ಷಕ್ಕೆ ಸುಮಾರು 24 ರೂಪಾಯಿ ಕಡಿತವಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಇದೇ ರೀತಿ ಬ್ಯಾಂಕ್ ಉಳಿತಾಯ ಖಾತೆ ಮೇಲಿನ ಬಡ್ಡಿದರವನ್ನು ಏಪ್ರಿಲ್ 15ರಿಂದ ಜಾರಿಗೆ ಬರುವಂತೆ 25 ಬೇಸಿಸ್ ಪಾಯಿಂಟ್ ನಷ್ಟು ಕಡಿತ ಮಾಡಿದೆ. ಪರಿಷ್ಕೃತ ಉಳಿತಾಯ ಖಾತೆ ಮೇಲಿನ ಬಡ್ಡಿದರ ಪ್ರಸ್ತುತ 2.75ಕ್ಕೆ ಇಳಿಕೆಯಾಗಿದೆ. ಅದು ಈ ಹಿಂದೆ ಶೇಕಡಾ 3ರಷ್ಟಿತ್ತು. ಅಂದರೆ ಇದರರ್ಥ 1 ಲಕ್ಷದವರೆಗೆ ಮತ್ತು 1 ಲಕ್ಷಕ್ಕಿಂತ ಹೆಚ್ಚು ಹಣ ಉಳಿತಾಯ ಖಾತೆಯಲ್ಲಿ ಇದ್ದರೆ ಅದಕ್ಕೆ ಸಿಗುವ ಬಡ್ಡಿದರ ಶೇಕಡಾ 2.75 ಆಗಿರುತ್ತದೆ.

ಏನಿದು ಎಂಸಿಎಲ್ ಆರ್ ದರ: ಸಾಲಗಳಿಗೆ ಬಡ್ಡಿದರಗಳನ್ನು ನಿರ್ಧರಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, 2016ರ ಏಪ್ರಿಲ್ 1ರಂದು ಎಂಸಿಎಲ್‌ಆರ್ ಅನ್ನು ಜಾರಿಗೆ ತಂದಿತು. ಬ್ಯಾಂಕುಗಳು ಸಾಲದ ಮೇಲೆ ವಿಧಿಸಬಹುದಾದ ಬಡ್ಡಿಯನ್ನು ನಿರ್ಧರಿಸಲು ಇದು ಆಂತರಿಕ ಉಲ್ಲೇಖ ದರವಾಗಿದೆ. ಇದಕ್ಕಾಗಿ, ಅವರು ಖರೀದಿದಾರರಿಗೆ ಹೆಚ್ಚುವರಿ ರೂಪಾಯಿ ಅಥವಾ ಹೆಚ್ಚುತ್ತಿರುವ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com