ಭಾರತದ ಆರ್ಥಿಕ ಪರಿಸ್ಥಿತಿ ಕುರಿತು ವಿಶ್ವಬ್ಯಾಂಕ್ ಹೇಳಿದ್ದಿಷ್ಟು...
ಭಾರತದ ಆರ್ಥಿಕ ಪರಿಸ್ಥಿತಿ ಕುರಿತು ವಿಶ್ವಬ್ಯಾಂಕ್ ಹೇಳಿದ್ದಿಷ್ಟು...

ಭಾರತದ ಆರ್ಥಿಕ ಪರಿಸ್ಥಿತಿ ಕುರಿತು ವಿಶ್ವಬ್ಯಾಂಕ್ ಹೇಳಿದ್ದಿಷ್ಟು...

ಕೊರೋನಾ ವೈರಸ್ ನಿಂದ ಉಂಟಾದ ಪರಿಸ್ಥಿತಿ ಭಾರತದ ಆರ್ಥಿಕತೆ ಮೇಲೆ ಬೀರಿರುವ ಪರಿಣಾಮಗಳ ಬಗ್ಗೆ ವಿಶ್ವಬ್ಯಾಂಕ್ ಒಂದಷ್ಟು ಮುನ್ನೋಟ ತೆರೆದಿಟ್ಟಿದೆ. 

ನವದೆಹಲಿ: ಕೊರೋನಾ ವೈರಸ್ ನಿಂದ ಉಂಟಾದ ಪರಿಸ್ಥಿತಿ ಭಾರತದ ಆರ್ಥಿಕತೆ ಮೇಲೆ ಬೀರಿರುವ ಪರಿಣಾಮಗಳ ಬಗ್ಗೆ ವಿಶ್ವಬ್ಯಾಂಕ್ ಒಂದಷ್ಟು ಮುನ್ನೋಟ ತೆರೆದಿಟ್ಟಿದೆ. 

ಏ.12 ರಂದು ದಕ್ಷಿಣ ಏಷ್ಯಾ ಎಕಾನಾಮಿಕ್ ಅಪ್ಡೇಟ್: ಇಂಪ್ಯಾಕ್ಟ್ ಆಫ್ ಕೋವಿಡ್-19 ವರದಿ ನೀಡಿರುವ ವಿಶ್ವಬ್ಯಾಂಕ್, ಭಾರತದ ಆರ್ಥಿಕತೆಗೆ ಸದ್ಯದ ಮಟ್ಟಿಗೆ ಕೊರೋನಾ ವೈರಸ್ ಬಲವಾದ ಹೊಡೆತವನ್ನೇ ನೀಡಿದೆ ಎಂದು ವಿಶ್ಲೇಷಿಸಿದೆ. 

ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ಈಗಗಲೇ ಎದುರಾಗಿರುವ ಅಪಾಯ ಪರಿಸ್ಥಿತಿಯ ಬಗ್ಗೆ ಮಾತನಾಡಿರುವ ವಿಶ್ವಬ್ಯಾಂಕ್, 2020 ರಲ್ಲಿ ಭಾರತ ಆರ್ಥಿಕತೆ ಶೇ.5ಕ್ಕೆ ಕುಸಿಯಲಿದೆ, 2021 ರಲ್ಲಿ ಬೆಳವಣಿಗೆ ದರ ಶೇ.2.8 ರಷ್ಟು ಇರಲಿದೆ ಎಂದು ಹೇಳಿದೆ. 

ಭಾರತದ ಆರ್ಥಿಕತೆ ಈಗಾಗಲೇ ಕುಗ್ಗಿದ್ದ ಸಮಯದಲ್ಲೇ ಕೊರೋನಾ ಸಮಸ್ಯೆ ಕಾಣಿಸಿಕೊಂಡಿದೆ. ಕೊರೋನಾ ವೈರಸ್ ಸಮಸ್ಯೆಯನ್ನು ಎದುರಿಸುವುದಕ್ಕೆ ಭಾರತ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ್ದು, ಜನ ಸಂಚಾರ ಹಾಗೂ ಸರಕುಗಳ ಸಾಗಣೆಗೆ ನಿರ್ಬಂಧ ವಿಧಿಸಿದೆ. ಪರಿಣಾಮ ದೇಶೀಯ ಪೂರೈಕೆ ಹಾಗೂ ಬೇಡಿಕೆಗಳಲ್ಲಿನ ವ್ಯತ್ಯಯ, ಅಡೆತಡೆಗಳಿಂದಾಗಿ ಆರ್ಥಿಕ ಬೆಳವಣಿಗೆ 2021 ರಲ್ಲಿ ಶೇ.2.8 ರಷ್ಟು ಇರಲಿದೆ ಎಂದು ವಿಶ್ವ ಬ್ಯಾಂಕ್ ಹೇಳಿದ್ದು, ಸೇವಾ ವಲಯಕ್ಕೆ ಮುಖ್ಯವಾಗಿ ಪರಿಣಾಮ ಬೀರಲಿದೆ ಎಂದಿದೆ. 

ಹೂಡಿಕೆ ಎದುರಾಗುವ ಅಪಾಯಗಳನ್ನು ಜಾಗತಿಕ ಮಟ್ಟದಲ್ಲಿ ಪರಿಹರಿಸಿದರೂ ದೇಶಿಯ ಹೂಡಿಕೆ ಚೇತರಿಸಿಕೊಳ್ಳುವುದು ವಿಳಂಬವಾಗಲಿದೆ ಎಂದು ಹೇಳಿದೆ. 2022 ನೇ ಆರ್ಥಿಕ ವರ್ಷದಲ್ಲಿ ಬೆಳವಣಿಗೆ ದರ ಶೇ.5.0 ಕ್ಕೆ ಏರಿಕೆಯಾಗಲಿದೆ ಎಂದು ವಿಶ್ವ ಬ್ಯಾಂಕ್ ವರದಿ ಹೇಳಿದೆ. 

ಇಂದು ಎದುರಾಗಿರುವ ಸವಾಲುಗಳು ಭಾರತಕ್ಕೆ ತನ್ನ ಆರ್ಥಿಕತೆಯನ್ನು ದೀರ್ಘಾವಧಿಯಲ್ಲಿ ಹಣಕಾಸು ದೃಷ್ಟಿಯಿಂದ  ಅಲ್ಲದೇ ಸಾಮಾಜಿಕವಾಗಿಯೂ ಸುಸ್ಥಿರವಾಗಿಸಲು ಬಹುದೊಡ್ಡ ಅವಕಾಶ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ. 

Related Stories

No stories found.

Advertisement

X
Kannada Prabha
www.kannadaprabha.com