ವಿಶ್ವ ಆರ್ಥಿಕತೆಗೆ ಕೋವಿಡ್ ಹೊಡೆತ! ಭಾರತದ ಬೆಳವಣಿಗೆ ದರ ಶೇ.1.9-ಐಎಂಎಫ್ ಅಂದಾಜು

ಜಾಗತಿಕ ಆರ್ಥಿಕತೆಯು 1930 ರ ದಶಕದ ಬಳಿಕ ಭೀಕರ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವ ಕಾರಣ, 2020 ರಲ್ಲಿ ಭಾರತ  ಜಿಡಿಪಿ ಬೆಳವಣಿಗೆ ಶೇ. 1.9 ಎಂದು ಐಎಂಎಫ್ ಅಂದಾಜಿಸಿದೆ.

Published: 14th April 2020 07:34 PM  |   Last Updated: 14th April 2020 07:34 PM   |  A+A-


ಗೀತಾ ಗೋಪಿನಾಥ್

Posted By : Raghavendra Adiga
Source : PTI

ವಾಷಿಂಗ್ಟನ್: ಜಾಗತಿಕ ಆರ್ಥಿಕತೆಯು 1930 ರ ದಶಕದ ಬಳಿಕ ಭೀಕರ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವ ಕಾರಣ, 2020 ರಲ್ಲಿ ಭಾರತ  ಜಿಡಿಪಿ ಬೆಳವಣಿಗೆ ಶೇ. 1.9 ಎಂದು ಐಎಂಎಫ್ ಅಂದಾಜಿಸಿದೆ.

ಈ ಮುನ್ಸೂಚನೆಯೊಂದಿಗೆ, ಭಾರತವು 1991 ರ ಉದಾರೀಕರಣದ ನಂತರ ಅತಿ ಕೆಟ್ಟ ಸನ್ನಿವೇಶದಲ್ಲಿ ಬೆಳವಣಿಗೆಯ ಕಾರ್ಯಕ್ಷಮತೆಯನ್ನು ದಾಖಲಿಸುವ ಸಾಧ್ಯತೆಯಿದೆ. ಆದರೆ ಅಂತರರಾಷ್ಟ್ರೀಯ ಹಣಕಾಸು ನಿಧಿ ತನ್ನ ಇತ್ತೀಚಿನ ವಿಶ್ವ ಆರ್ಥಿಕ ವರದಿಯಲ್ಲಿ ಭಾರತವನ್ನು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಹೇಳಿದೆ.

ವಿಶ್ವದಲ್ಲಿ ಇದೀಗ ಕೇವಲ ಎರಡು ರಾಷ್ಟ್ರಗಳು ಮಾತ್ರವೇ ಸಕಾರಾತ್ಮಕ ಆರ್ಥಿಕ ಬೆಳವಣಿಗೆ ದಾಖಲಿಸಿದೆ. ಅದರಲ್ಲಿ ಒಂದು ಭಾರತವಾಗಿದ್ದರೆ ಇನ್ನೊಂದು ಚೀನಾ. ಚೀನಾ ಆರ್ಥಿಕ ಬೆಳವಣಿಗೆ  ಶೇಕಡಾ 1.2 ರಷ್ಟು ಇರಲಿದೆ ಎಂದು ಐಎಂಎಫ್ ಊಹಿಸಿದೆ.

"ನಾವು 2020 ರಲ್ಲಿ ಜಾಗತಿಕ ಬೆಳವಣಿಗೆಯನ್ನು ಶೇಕಡಾ -3 ಎಂದು ಅಂದಾಜಿಸಿದ್ದೇವೆ.ಇದು ಜನವರಿ 2020 ರಿಂದ 6.3 ಶೇಕಡಾದಷ್ಟು ಕೆಳಗಿಳಿದಿದೆ. ಬಹಳ ಕಡಿಮೆ ಅವಧಿಯಲ್ಲಿ ಪ್ರಮುಖ ಪರಿಷ್ಕರಣೆಯಾಗಿ ಇದನ್ನು ಪರಿಗಣಿಸಬೇಕು" ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರ ಸಂಶೋಧಕಿ ಗೀತಾ ಗೋಪಿನಾಥ್ ಹೇಳಿದ್ದಾರೆ. ಕೊರೋನಾ ಸಾಂಕ್ರಾಮಿಕವು ಎಲ್ಲಾ ಕ್ಷೇತ್ರಗಳ ಬೆಳವಣಿಗೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.

ಮುಂದುವರಿದ ಆರ್ಥಿಕತೆ ರಾಷ್ಟ್ರಗಳಲ್ಲಿ  ಹೆಚ್ಚಿನ ದೇಶಗಳು ಈ ವರ್ಷಕಡಿಮೆ ಬೆಳವಣಿಗೆ ದಾಖಲಿಸಲಿದೆ.ಇದರಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ (5.9 ಶೇಕಡಾ), ಜಪಾನ್ (5.2 ಶೇಕಡಾ), ಯುನೈಟೆಡ್ ಕಿಂಗ್‌ಡಮ್ (6.5 ಶೇಕಡಾ), ಜರ್ಮನಿ (7.0 ಶೇಕಡಾ), ಫ್ರಾನ್ಸ್ (ಶೇ 7.2), ಇಟಲಿ (ಶೇ 9.1), ಮತ್ತು ಸ್ಪೇನ್ (ಶೇ .8)ಾಯಾ ಪ್ರಮಾಣದಲ್ಲಿ ಬೆಳವಣೊಗೆ ಕಾಣಲಿದೆ ಎಂದು ಐಎಂಎಫ್ ವರದಿ ತಿಳಿಸಿದೆ.
 

Stay up to date on all the latest ವಾಣಿಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp