ಈ 4 ವರ್ಷದ ಮಗುವಿಗೆ ಬ್ಲಡ್ ಕ್ಯಾನ್ಸರ್ ಮರುಕಳಿಸಿದೆ. ದಯವಿಟ್ಟು ಅದರ ಚಿಕಿತ್ಸೆಗೆ ನೆರವು ನೀಡಿ

ಪ್ರತಿದಿನ, ನನ್ನ 4 ವರ್ಷದ ಮಗ, ಚರ್ವಿಕ್ ತನ್ನ ಅಕ್ಕನನ್ನು ಭೇಟಿಯಾಗಲು, ಮನೆಗೆ ಕರೆದುಕೊಂಡು ಹೋಗಬೇಕೆಂದು ನನ್ನನ್ನು ಕೇಳಿಕೊಳ್ಳುತ್ತಾನೆ. “ಅಮ್ಮಾ, ಅವರು ಯಾಕೆ ನನ್ನನ್ನು ಶಿಕ್ಷಿಸುತ್ತಿದ್ದಾರೆ? ನಾನು ಒಳ್ಳೆಯ ಹುಡುಗ,” ಎಂದು ಅವನು ಮುಗ್ಧವಾಗಿ ಹೇಳುತ್ತಾನೆ.

Published: 20th April 2020 01:11 PM  |   Last Updated: 20th April 2020 04:36 PM   |  A+A-


This 4-year-old’s blood cancer has relapsed. Please support his treatment

ಈ 4 ವರ್ಷದ ಮಗುವಿಗೆ ಬ್ಲಡ್ ಕ್ಯಾನ್ಸರ್ ಮರುಕಳಿಸಿದೆ. ದಯವಿಟ್ಟು ಅದರ ಚಿಕಿತ್ಸೆಗೆ ನೆರವು ನೀಡಿ.

Posted By : Prasad SN
Source : Online MI

“ನನಗೆ ಇಲ್ಲಿರಲು ಇಷ್ಟವಿಲ್ಲ. ನಾನು ಮನೆಗೆ ಹೋಗಿ ಅಕ್ಕನೊಂದಿಗೆ ಆಟವಾಡಬೇಕು. ”

ಪ್ರತಿದಿನ, ನನ್ನ 4 ವರ್ಷದ ಮಗ, ಚರ್ವಿಕ್ ತನ್ನ ಅಕ್ಕನನ್ನು ಭೇಟಿಯಾಗಲು, ಮನೆಗೆ ಕರೆದುಕೊಂಡು ಹೋಗಬೇಕೆಂದು ನನ್ನನ್ನು ಕೇಳಿಕೊಳ್ಳುತ್ತಾನೆ. “ಅಮ್ಮಾ, ಅವರು ಯಾಕೆ ನನ್ನನ್ನು ಶಿಕ್ಷಿಸುತ್ತಿದ್ದಾರೆ? ನಾನು ಒಳ್ಳೆಯ ಹುಡುಗ,” ಎಂದು ಅವನು ಮುಗ್ಧವಾಗಿ ಹೇಳುತ್ತಾನೆ. ಅವನ ‘ಜ್ವರ’ ಹೋದ ಕೂಡಲೇ ನಾವು ಮನೆಗೆ ಹಿಂದಿರುಗುತ್ತೇವೆ ಎಂದು ನಾನು ಅವನಿಗೆ ಹೇಳುತ್ತಲೇ ಇರುತ್ತೇನೆ.

ಆದರೂ, ಕ್ರೂರ ಸತ್ಯವೆಂದರೆ ನ್ನ ಪುಟ್ಟ ಮಗ ಬ್ಲಡ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾನೆ ಮತ್ತು ಈ ಮಾರಣಾಂತಿಕ ಕಾಯಿಲೆಯಿಂದ ಅವನನ್ನು ರಕ್ಷಿಸಲು ನಮಗೆ ಸಾಧ್ಯವಾಗದ ಕಾರಣ ನಾವು ಅಸಹಾಯಕರಾಗಿದ್ದೇವೆ.

ಚರ್ವಿಕ್ ಒಬ್ಬ ಆರೋಗ್ಯವಂತ ಬಲಶಾಲಿ ಮಗು. ಆದಾಗ್ಯೂ, ಒಂದು ದಿನ, ಡಿಸೆಂಬರ್ 2018 ರಲ್ಲಿ, ಅವನಿಗೆ ತೀವ್ರ ಜ್ವರ ಬಂತು. ನಮ್ಮ ಕುಟುಂಬ ವೈದ್ಯರಿಂದ ನಾವು ಅವನಿಗೆ ಔಷಧಿಗಳನ್ನು ಕೊಡಿಸಿದೆವು. ಆದರೆ ಅವನ ಜ್ವರ ಕಡಿಮೆಯಾಗಲಿಲ್ಲ ಮತ್ತು ಅವನು ಹೊಟ್ಟೆನೋವು ಎಂದು ಹೇಳಲಾರಂಭಿಸಿದ. ಅವನು ಏನನ್ನೂ ತಿನ್ನಲು ನಿರಾಕರಿಸುತ್ತಿದ್ದನು.

ಮುಂದಿನ ಕೆಲವು ವಾರ, ಅವನ ಆರೋಗ್ಯವು ಕ್ಷೀಣಿಸುತ್ತಿದ್ದರಿಂದ ನಾವು ಅವನನ್ನು ಒಂದು ಕ್ಲಿನಿಕ್ ನಿಂದ ಮತ್ತೊಂದಕ್ಕೆ ಕರೆದೊಯ್ದೆವು. ಅವನ ಇಡೀ ದೇಹದ ಮೇಲೆ ಕೆಂಪು ಕಲೆಗಳು ಕಾಣಲಾರಂಬಿಸಿದವು. ಆಗ ವೈದ್ಯರು ಕೆಲವು ಪರೀಕ್ಷೆಗಳನ್ನು ಮಾಡಿಸಲು ಸೂಚಿಸಿದರು. ಒಂದು ವಾರದ ನಂತರ, ನಮ್ಮ ಜೀವನದ ಅತ್ಯಂತ ಕೆಟ್ಟ ಸುದ್ದಿ ನಮಗೆ ಸಿಕ್ಕಿತು- ಚರ್ವಿಕ್‌ಗೆ ತೀವ್ರವಾದ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ ಎಂಬ ಬ್ಲಡ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.

ನಾವು ಅತೀವ ದುಃಖಿತರಾದೆವು. ಚರ್ವಿಕ್‌ಗೆ ತಕ್ಷಣವೇ ಅನೇಕ ಬಾರಿ ಕೀಮೋಥೆರಪಿ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ನಮಗೆ ತಿಳಿಸಿದರು. ನಾವು ನಮ್ಮ ಅಲ್ಪ ಉಳಿತಾಯದ ಹಣವನ್ನು ಬಳಸಿಕೊಂಡು, ನಮ್ಮ ಗೆಳೆಯರಿಂದ ಹಣವನ್ನು ಸಾಲ ಪಡೆದುಕೊಂಡು ನಮ್ಮ ಮಗನ ಚಿಕಿತ್ಸೆಯನ್ನು ಪ್ರಾರಂಭಿಸಿದೆವು. ಅಂತಿಮವಾಗಿ, ತಿಂಗಳುಗಳ ನಂತರ, ನಮ್ಮ ಧೈರ್ಯಶಾಲಿ ಮಗ ಮಾರಣಾಂತಿಕ ಕಾಯಿಲೆಯ ಹಿಡಿತದಿಂದ ಹೊರಬಂದನು.

ಆದರೆ ದುರಂತ ಮತ್ತೆ ನಮಗೆ ಅಪ್ಪಳಿಸಿತು. ಕೆಲವು ತಿಂಗಳುಗಳ ಹಿಂದೆ, ಚರ್ವಿಕ್ ಗೆ ಕ್ಯಾನ್ಸರ್ ಮರುಕಳಿಸಿತು.

ನಾವು ಘಾಸಿಗೊಂಡಿದ್ದೇವೆ, ಆದರೆ ನಾವು ನಮ್ಮ ಮಗನಿಗಾಗಿ ಧೈರ್ಯ ತಂದುಕೊಳ್ಳಬೇಕು. ಅವನ ಚಿಕಿತ್ಸೆಯನ್ನು ತಕ್ಷಣ ಪ್ರಾರಂಭಿಸುವಂತೆ ನಾವು ವೈದ್ಯರಿಗೆ ಮನವಿ ಮಾಡಿದ್ದೇವೆ. ಆದಾಗ್ಯೂ, ಅಂದಿನಿಂದ ಈಗಾಗಲೆ ಮೂರು ತಿಂಗಳು ಕಳೆದಿವೆ ಮತ್ತು ನಮ್ಮ ಮಗನ ಚಿಕಿತ್ಸೆಯನ್ನು ಮುಂದುವರಿಸಲು ನಮಗೆ ಸಾಧ್ಯವಾಗುತ್ತಿಲ್ಲ.

ಅವನಿಗೆ ಸಾಲ್ವೇಜ್ ಕೀಮೋಥೆರಪಿ ಅಗತ್ಯವಿದೆಯೆಂದು ಮತ್ತು ನಂತರ ಅಲೋಜೆನಿಕ್ ಹೆಮಟೊಪಯಟಿಕ್ ಟ್ರ್ಯಾನ್ಸ್ ಪ್ಲ್ಯಾಂಟ್ ಮಾಡಬೇಕಾಗುತ್ತದೆ ಎಂದು ವೈದ್ಯರು ನಮಗೆ ತಿಳಿಸಿದ್ದಾರೆ. ಇದಕ್ಕೆ 25 ಲಕ್ಷ ರೂ. (34,031 ಡಾಲರ್) ವೆಚ್ಚವಾಗಲಿದೆ. ಇಷ್ಟು ದೊಡ್ಡ ಮೊತ್ತವನ್ನು ಹೊಂದಿಸಲು ನಮಗೆ ಯಾವುದೇ ಮಾರ್ಗವಿಲ್ಲ.

ನನ್ನ ಮಗನ ಆರೋಗ್ಯ ಕ್ಷೀಣಿಸುತ್ತಿದೆ. ಅವನ ನಗುಮುಖವನ್ನು ಇನ್ಮುಂದೆ ನೋಡಲಾಗುವುದಿಲ್ಲವೇನೋ ಎನಿಸುತ್ತಿದೆ. ಅವನು ಇಂಜೆಕ್ಷನ್ ಸೂಜಿಗಳನ್ನು ನೋಡಿ ತುಂಬಾ ಹೆದರುತ್ತಾನೆ ಮತ್ತು ನೋವಿನಿಂದ ಅಳುತ್ತಾನೆ. ನಾವು ಏನು ಮಾಡಬಹುದೆಂದರೆ ಎಲ್ಲವೂ ಸರಿಯಾಗಲಿದೆ ಎಂದು ಅವನಿಗೆ ಧೈರ್ಯ ಹೇಳುವುದು. ಆದರೆ ಅವನಿಗೆ ಸಹಾಯ ಮಾಡಲು ನಮಗೆ ಸಾಧ್ಯವಾಗುತ್ತದೆಯೇ ಎಂಬುದು ನಮಗೆ ತಿಳಿದಿಲ್ಲ.

ನನ್ನ ಪತಿ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಾರೆ ಮತ್ತು ಬಹಳ ಕಡಿಮೆ ಸಂಪಾದಿಸುತ್ತಾನೆ. ನಮ್ಮ ಕುಟುಂಬ ಮತ್ತು ಸ್ನೇಹಿತರು ಸಹ ನಮ್ಮಿಂದ ದೂರವಾಗಿದ್ದಾರೆ ಮತ್ತು ನಮಗೆ ಸಹಾಯ ಮಾಡಲು ಸಿದ್ಧರಿಲ್ಲ.

ನೀವೇ ನಮ್ಮ ಕೊನೆಯ ಭರವಸೆ. ನಿಮ್ಮ ಸಹಾಯವಿಲ್ಲದೆ, ನಾವು ನಮ್ಮ ಮಗನನ್ನು ಕಳೆದುಕೊಳ್ಳುತ್ತೇವೆ. ಆತನಿಲ್ಲದ ಜೀವನವನ್ನು ನಾವು ಊಹಿಸಲೂ ಸಾಧ್ಯವಿಲ್ಲ. ದಯವಿಟ್ಟು ನಮಗೆ ಸಹಾಯ ಮಾಡಿ.

ಕ್ಯಾನ್ಸರ್ ಗೆ ಹಣ ಸಂಗ್ರಹಿಸುವುದು ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಬೆಂಬಲಿಸುವ ಒಂದು ಮಾರ್ಗವಾಗಿದೆ. ಕೆಟ್ಟೊ, ಕ್ಯಾನ್ಸರ್, ಹೃದಯ ಮತ್ತು ಇತರ ಅನೇಕ ಚಿಕಿತ್ಸೆಗಳಿಗೆ ಕ್ರೌಡ್‌ಫಂಡಿಂಗ್ ಅನ್ನು ಬೆಂಬಲಿಸುವ ಅತಿದೊಡ್ಡ ಕ್ರೌಡ್‌ಫಂಡಿಂಗ್ ವೆಬ್‌ಸೈಟ್ ಆಗಿದೆ.


ಡಿಸ್ಕ್ಲೇಮರ್: "ಈ ಲೇಖನಕ್ಕೆ ವಿಷಯವನ್ನು ಕೆಟ್ಟೊ ಕ್ರೌಡ್‌ಫಂಡಿಂಗ್ ವೆಬ್‌ಸೈಟ್ ಕೊಟ್ಟಿರುತ್ತದೆ. ಟಿಎನ್‌ಐಇ ಗ್ರೂಪ್ ನ ಯಾವುದೇ ಪತ್ರಕರ್ತ ಈ ಲೇಖನದ ವಿಷಯದ ಬರಹದಲ್ಲಿ/ರಚನೆಯಲ್ಲಿ ಭಾಗಿಯಾಗಿಲ್ಲ."

Stay up to date on all the latest ವಾಣಿಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp