ಭಾರತದ ಜಿಡಿಪಿ ಮುನ್ನೋಟ ಶೇ.1.9ಕ್ಕೆ, 29 ವರ್ಷಗಳಲ್ಲೇ ಅತ್ಯಧಿಕ ಕುಸಿತ!

ಕೊರೋನಾ ವೈರಸ್, ಲಾಕ್ ಡೌನ್ ನ ಪರಿಣಾಮ ಭಾರತದ 2021 ನೇ ಸಾಲಿನ ಜಿಡಿಪಿ ಬೆಳವಣಿಗೆ ದರವನ್ನು ಇಂಡಿಯಾ ರೇಟಿಂಗ್ಸ್ ಆಂಡ್ ರಿಸರ್ಚ್ (ಇಂಡ್-ರಾ) ಶೇ.1.9 ಕ್ಕೆ ಅಂದಾಜಿಸಿದೆ. 

ಈ ಜಿಡಿಪಿ ಬೆಳವಣಿಗೆ ದರ 29 ವರ್ಷಗಳಲ್ಲೇ ಅತ್ಯಧಿಕ ಕುಸಿತವಾಗಿದೆ. 1992 ರಲ್ಲಿ ಜಿಡಿಪಿ ದರ ಶೇ.1.1 ರಷ್ಟಿತ್ತು. ಇದಕ್ಕೂ ಮುನ್ನ ಇಂಡಿಯಾ ರೇಟಿಂಗ್ಸ್ ಹಾಗೂ ರಿಸರ್ಚ್ ಸಂಸ್ಥೆ ಮಾ.30 ರಂದು ಜಿಡಿಪಿ ಬೆಳವಣಿಗೆ ದರ ಶೇ.3.6 ರಷ್ಟಿರಲಿದೆ ಎಂದು ಹೇಳಿತ್ತು. 

2021 ರ ಆರ್ಥಿಕ ವರ್ಷದ 3 ನೇ ತ್ರೈಮಾಸಿಕದಲ್ಲಿ ಆರ್ಥಿಕ ವರ್ಷ 2020 ರ ನಾಲ್ಕನೇ ತ್ರೈಮಾಸಿಕದ ಬೆಳವಣಿಗೆಯ ಮಟ್ಟಕ್ಕೆ ಜಿಡಿಪಿ ಮರಳಲಿದೆ ಎಂದು ಇಂಡ್-ರಾ ಅಂದಾಜಿಸಿದೆ.      

ಒಂದು ವೇಳೆ ಲಾಕ್ ಡೌನ್ ಮೇ ತಿಂಗಳ ಮಧ್ಯದವರೆಗೂ ಮುಂದುವರೆದರೆ ಆರ್ಥಿಕ ಬೆಳವಣಿಗೆ ಜೂನ್ 2020 ರ ನಂತರವೇ ಸಾಧ್ಯ ಎಂದು ಇಂಡಿಯಾ ರೇಟಿಂಗ್ಸ್ ಹಾಗೂ ರಿಸರ್ಚ್ ಸಂಸ್ಥೆ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com