ಭಾರತದಲ್ಲೇ ಮೊಬೈಲ್ ತಯಾರಿಕೆಗೆ ಕಂಪನಿಗಳ ದುಂಬಾಲು, 3 ಲಕ್ಷ ಉದ್ಯೋಗ ಸೃಷ್ಠಿ!

ಸ್ಯಾಮ್‌ಸಂಗ್, ಆ್ಯಪಲ್, ಫಾಕ್ಸ್‌ಕಾನ್ ಹೊನ್ ಹೈ, ರೈಸಿಂಗ್ ಸ್ಟಾರ್, ವಿಸ್ಟ್ರಾನ್ ಮತ್ತು ಪೆಗಾಟ್ರಾನ್ ಸೇರಿದಂತೆ 22 ಕಂಪನಿಗಳು ಮೇಕ್ ಇನ್ ಇಂಡಿಯಾ ಮೂಲಕ ಭಾರತದಲ್ಲೇ ಮೊಬೈಲ್ ಫೋನ್ ಗಳನ್ನು ಉತ್ಪಾದಿಸಲು ಮುಂದಾಗಿದ್ದು ಈ ಮೂಲಕ 3 ಲಕ್ಷ ಉದ್ಯೋಗ ಸೃಷ್ಠಿಯಾಗಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

Published: 01st August 2020 08:55 PM  |   Last Updated: 01st August 2020 08:55 PM   |  A+A-


Ravi Shankar Prasad

ರವಿಶಂಕರ್ ಪ್ರಸಾದ್

Posted By : Vishwanath S
Source : Online Desk

ನವದೆಹಲಿ: ಸ್ಯಾಮ್‌ಸಂಗ್, ಆ್ಯಪಲ್, ಫಾಕ್ಸ್‌ಕಾನ್ ಹೊನ್ ಹೈ, ರೈಸಿಂಗ್ ಸ್ಟಾರ್, ವಿಸ್ಟ್ರಾನ್ ಮತ್ತು ಪೆಗಾಟ್ರಾನ್ ಸೇರಿದಂತೆ 22 ಕಂಪನಿಗಳು ಮೇಕ್ ಇನ್ ಇಂಡಿಯಾ ಮೂಲಕ ಭಾರತದಲ್ಲೇ ಮೊಬೈಲ್ ಫೋನ್ ಗಳನ್ನು ಉತ್ಪಾದಿಸಲು ಮುಂದಾಗಿದ್ದು ಈ ಮೂಲಕ 3 ಲಕ್ಷ ಉದ್ಯೋಗ ಸೃಷ್ಠಿಯಾಗಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ (ಪಿಎಲ್ಐ) ಯೋಜನೆಯಡಿ ಭಾರತದಲ್ಲಿ 11.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ಹಾಗೂ ಬಿಡಿಭಾಗಗಳನ್ನು ಉತ್ಪಾದಿಸಲಾಗುವುದು. ಇದಕ್ಕಾಗಿ 22 ಕಂಪನಿಗಳು ಅರ್ಜಿ ಸಲ್ಲಿಸಿದ್ದು ಅದರಲ್ಲಿ 7 ಲಕ್ಷ ಕೋಟಿ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. 

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರವಿಶಂಕರ್ ಪ್ರಸಾದ್ ಈ ಕಂಪನಿಗಳು ಮೂರು ಲಕ್ಷ ನೇರ ಮತ್ತು ಸುಮಾರು ಒಂಬತ್ತು ಲಕ್ಷ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂದರು. ಆದರೆ ಇದೇ ವೇಳೆ ಈ ಯೋಜನೆ ಯಾವುದೇ ದೇಶದ ವಿರುದ್ಧವಾಗಿಲ್ಲ. ಇದು ಭಾರತ ಸಕಾರಾತ್ಮಕವಾಗಿದೆ ಎಂದು ಹೇಳುವ ಯೋಜನೆಯಾಗಿದೆ.  "ನಾನು ಯಾವುದೇ ದೇಶದ ಹೆಸರನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ನಮ್ಮ ಭದ್ರತೆ, ಗಡಿರೇಖೆಯ ದೇಶಗಳಿಗೆ ಸಂಬಂಧಿಸಿದಂತೆ ನಮಗೆ ನಮ್ಮದೇ ನಿಯಮಾವಳಿಗಳಿದೆ" 

"ನಾವು ಆಶಾವಾದಿಯಾಗಿದ್ದೇವೆ ಮತ್ತು ನಮ್ಮ ವ್ಯಾಲ್ಯೂ ಚೈನ್ ಮೂಲಕ  ಜಾಗತಿಕ ವ್ಯಾಲ್ಯೂ ಚೈನ್ ಜತೆಗೆ ಸಂಒಅರ್ಕ ಸಾಧಿಸಲು ಚಿಂತನ ನಡೆಸಿದ್ದೇವೆ. ಇದರಿಂದಾಗಿ ದೇಶದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಾತಾವರಣವನ್ನು ಬಲಪಡಿಸುತ್ತೇವೆ" ಎಂದು ಅವರು ಹೇಳಿದರು. ಜಾಗತಿಕ ಮತ್ತು ದೇಶೀಯ ಮೊಬೈಲ್ ಫೋನ್ ಉತ್ಪಾದನಾ ಕಂಪನಿಗಳು ಮತ್ತು ಎಲೆಕ್ಟ್ರಾನಿಕ್ ಘಟಕಗಳ ತಯಾರಕರಿಂದ ಪಡೆದ ಅರ್ಜಿಗಳ ವಿಷಯದಲ್ಲಿ ಪಿಎಲ್ಐ ಯೋಜನೆ ಭಾರಿ ಯಶಸ್ಸನ್ನು ಕಂಡಿದೆ ಎಂದು ಪ್ರಸಾದ್ ಹೇಳಿದರು. 

Stay up to date on all the latest ವಾಣಿಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp