ಫ್ಯೂಚರ್‌ಬ್ರಾಂಡ್ ಸೂಚ್ಯಂಕ: ನಂ.2 ಸ್ಥಾನ ಪಡೆದ ರಿಲಯನ್ಸ್, ಆಪಲ್ ನಂ.1

ಫ್ಯೂಚರ್‌ಬ್ರಾಂಡ್ ಇಂಡೆಕ್ಸ್ 2020 ಪಟ್ಟಿಯಲ್ಲಿ ಭಾರತದ ನಂ. 1 ಶ್ರೀಮಂತ ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಆಪಲ್ ನಂತರ ಎರಡನೇ ಅತಿದೊಡ್ಡ ಬ್ರಾಂಡ್ ಆಗಿ ಸ್ಥಾನ ಗಿಟ್ಟಿಸಿದೆ.
ಮುಖೇಶ್ ಅಂಬಾನಿ
ಮುಖೇಶ್ ಅಂಬಾನಿ

ನವದೆಹಲಿ: ಫ್ಯೂಚರ್‌ಬ್ರಾಂಡ್ ಇಂಡೆಕ್ಸ್ 2020 ಪಟ್ಟಿಯಲ್ಲಿ ಭಾರತದ ನಂ. 1 ಶ್ರೀಮಂತ ಮುಖೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಆಪಲ್ ನಂತರ ಎರಡನೇ ಅತಿದೊಡ್ಡ ಬ್ರಾಂಡ್ ಆಗಿ ಸ್ಥಾನ ಗಿಟ್ಟಿಸಿದೆ.

ಈ ವರ್ಷಇಂಡೆಕ್ಸ್ ನ  ಎರಡನೆಯ ಸ್ಥಾನದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಸ್ಥಾನ ಪಡೆದಿದೆ ಎಂದು ಫ್ಯೂಚರ್ಬ್ರಾಂಡ್ ತನ್ನ 2020 ಸೂಚ್ಯಂಕ ಬಿಡುಗಡೆ ಮಾಡುತ್ತಾ ಹೇಳಿದೆ. 

ಭಾರತದ ಅತ್ಯಂತ ಲಾಭದಾಯಕ ಕಂಪನಿಗಳಲ್ಲಿ ಒಂದಾದ ರಿಲಯನ್ಸ್, "ಬಹಳ ಗೌರವಾನ್ವಿತ" ಮತ್ತು "ನೈತಿಕ" ಹಾಗೂ ಗೆ "ಬೆಳವಣಿಗೆ", "ನವೀನ ಉತ್ಪನ್ನಗಳು" ಮತ್ತು "ಉತ್ತಮ ಗ್ರಾಹಕ ಸೇವೆ"  ಎಲ್ಲದರಲ್ಲಿ ಸಹ ಮುಂಚೂಣಿಯಲ್ಲಿದೆ. "ನಿರ್ದಿಷ್ಟವಾಗಿ, ಜನರು  ಈ ಸಂಸ್ಥೆಯೊಂದಿಗೆ  ಬಲವಾದ ಭಾವನಾತ್ಮಕ ಸಂಪರ್ಕವನ್ನು ಹೊಂದಿದ್ದಾರೆ. ಜಾಗತಿಕ ಬ್ರಾಂಡ್ ರೂಪಾಂತರ ಕಂಪನಿಯಾದ ಫ್ಯೂಚರ್‌ಬ್ರಾಂಡ್, ರಿಲಯನ್ಸ್‌ನ ಯಶಸ್ಸಿನ ಒಂದು ಭಾಗವೆಂದರೆ ಮುಖೇಶ್ ಅಂಬಾನಿ ಸಂಸ್ಥೆಯನ್ನು ಭಾರತೀಯರ ಪಾಲಿಗೆ ಒನ್ ಸ್ಟಾಪ್ ಶಾಪ್ ಆಗಿ ಬದಲಿಸಿರುವುದು ಆಗಿದೆ. "

ಈ ಕಂಪನಿಯು ಶಕ್ತಿ, ಪೆಟ್ರೋಕೆಮಿಕಲ್ಸ್, ಜವಳಿ, ನೈಸರ್ಗಿಕ ಸಂಪನ್ಮೂಲಗಳು, ಚಿಲ್ಲರೆ ವ್ಯಾಪಾರ ಮತ್ತು ದೂರಸಂಪರ್ಕ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದೆ. ಈಗ ಗೂಗಲ್ ಮತ್ತು ಫೇಸ್‌ಬುಕ್ ಸಂಸ್ಥೆಯಲ್ಲಿ ಈಕ್ವಿಟಿ ಪಾಲನ್ನು ತೆಗೆದುಕೊಳ್ಳುತ್ತಿದೆ, ಮುಂದಿನ ಬಾರಿಯ ಸೂಚ್ಯಂಕದಲ್ಲಿ ರಿಲಯನ್ಸ್ ಅಗ್ರ ಸ್ಥಾನಕ್ಕೆ ಹೋಗುವುದನ್ನು ನಾವು ನೋಡಲಿದ್ದೇವೆ ಎಂದು ಸೂಚ್ಯಾಂಕ ತಯಾರಕ ಸಂಸ್ಥೆ ಫ್ಯೂಚರ್‌ಬ್ರಾಂಡ್ ಹೇಳಿದೆ.

ಫ್ಯೂಚರ್‌ಬ್ರಾಂಡ್ ಮೊದಲ ಫ್ಯೂಚರ್‌ಬ್ರಾಂಡ್ ಸೂಚ್ಯಂಕ ತಯಾರಿಸಿದ ಆರು ವರ್ಷಗಳಲ್ಲಿ  ಪ್ರಪಂಚವು ನಾಟಕೀಯವಾಗಿ ಬದಲಾಗಿದೆ, ಆದ್ಯತೆಗಳು ಬದಲಾಗಿವೆ ಮತ್ತು ಜಗತ್ತಿನ ಅಗ್ರ 100 ಕಂಪನಿಗಳುಕಳೆದ ವರ್ಷ ಕಲ್ಪನೆಗೂ ನಿಲುಕದ ಸಮಸ್ಯೆಗಳನ್ನು ಎದುರಿಸುತ್ತಿದೆ. "ಫ್ಯೂಚರ್‌ಬ್ರಾಂಡ್ ಸೂಚ್ಯಂಕವು ಜಾಗತಿಕ ಗ್ರಹಿಕೆ ಅಧ್ಯಯನವಾಗಿದ್ದು, ಇದು ಪಿಡಬ್ಲ್ಯುಸಿಯ ಗ್ಲೋಬಲ್ ಟಾಪ್ 100 ಕಂಪನಿಗಳನ್ನು ಮಾರ್ಕೆಟ್ ಕ್ಯಾಪ್‌ನಿಂದ ಆರ್ಥಿಕ ಬಲಕ್ಕಿಂತ ಹೆಚ್ಚಾಗಿ ಗ್ರಹಿಕೆ ಸಾಮರ್ಥ್ಯದ ಮೇಲೆ ಮರುಕ್ರಮಗೊಳಿಸುತ್ತದೆ" ಎಂದು ಅದು ಹೇಳಿದೆ.

"2020 ರ ಪಟ್ಟಿಯಲ್ಲಿ ಆಪಲ್ ಮೊದಲ ಸ್ಥಾನದಲ್ಲಿದ್ದರೆ, ಸ್ಯಾಮ್ಸಂಗ್ ಮೂರನೇ ಸ್ಥಾನದಲ್ಲಿದ್ದರೆ, ಎನ್ವಿಡಿಯಾ, ಮೌಟೈ, ನೈಕ್, ಮೈಕ್ರೋಸಾಫ್ಟ್, ಎಎಸ್ಎಂಎಲ್, ಪೇಪಾಲ್ ಮತ್ತು ನೆಟ್ಫ್ಲಿಕ್ಸ್ ನಂತರದ ಸ್ಥಾನದಲ್ಲಿವೆ. ಪಿಡಬ್ಲ್ಯೂಸಿ 2020 ಪಟ್ಟಿಯಲ್ಲಿ ರಿಲಯನ್ಸ್ 91 ನೇ ಸ್ಥಾನದಲ್ಲಿದೆ ಎಂದು ಅದು ಹೇಳಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com