ಟಿಕ್ ಟಾಕ್ ಮಾರಾಟದ ಪಾಲನ್ನು ಸರ್ಕಾರಕ್ಕೆ ನೀಡಬೇಕು: ಟ್ರಂಪ್

ಅಮೆರಿಕ ಕಂಪನಿಯು ಚೀನಾದ ಆ್ಯಪ್ ಟಿಕ್ ಟಾಕ್ ಅನ್ನು ಖರೀದಿಸಿದರೆ, ಅದರ ಒಂದು ಭಾಗವನ್ನು ಸರ್ಕಾರಕ್ಕೆ ಅಥವಾ ಖಜಾನೆಗೆ ನೀಡಬೇಕು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕ ಕಂಪನಿಯು ಚೀನಾದ ಆ್ಯಪ್ ಟಿಕ್ ಟಾಕ್ ಅನ್ನು ಖರೀದಿಸಿದರೆ, ಅದರ ಒಂದು ಭಾಗವನ್ನು ಸರ್ಕಾರಕ್ಕೆ ಅಥವಾ ಖಜಾನೆಗೆ ನೀಡಬೇಕು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.

ಮೈಕ್ರೋಸಾಫ್ಟ್ ಕಂಪನಿಯ ಭಾರತೀಯ ಮೂಲದ ಸಿಇಒ ಸತ್ಯ ನಾಡೆಲ್ಲಾ ಅವರೊಂದಿಗೆ ಫೋನ್ ಸಂಭಾಷಣೆಯ ನಡೆಸಿದ ಟ್ರಂಪ್ 'ನ್ಯಾಯಯುತ ಪಾಲು' ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ಬಿಬಿಸಿ ವರದಿಯಲ್ಲಿ ತಿಳಿಸಲಾಗಿದೆ.

ತಂತ್ರಜ್ಞಾನದ ಪ್ರಮುಖ ಮೈಕ್ರೋಸಾಫ್ಟ್ ಗೆ ಟಿಕ್ ಟಾಕ್ ಕೊಂಡುಕೊಳ್ಳುವ ವ್ಯವಹಾರವನ್ನು 45 ದಿನಗಳ ಮುಗಿಸುವಂತೆ ತಿಳಿಸಲಾಗಿದ್ದು, ಈ ವೇಳೆ ಖರೀದಿಸಲು ಸಾಧ್ಯವಾಗದೇ ಇದ್ದರೆ ಚೀನಾದಲ್ಲಿ ಆ್ಯಪ್ ಅನ್ನು ಅಮೆರಿಕದಲ್ಲಿ ನಿಷೇಧಿಸಲಾಗುವುದು ಎಂದು ಟ್ರಂಪ್ ತಿಳಿಸಿದ್ದಾರೆ.

ಸೆಪ್ಟೆಂಬರ್ 15 ರೊಳಗೆ ಮೈಕ್ರೋಸಾಫ್ಟ್ ಟಿಕ್ ಟಾಕ್ ಜೊತೆ ಮಾತುಕತೆ ನಡೆಯದೇ ಇದ್ದರೆ, ಈ ಅಪ್ಲಿಕೇಶನ್ ಅಮೆರಿಕ ದಿಂದ ಟಿಕ್ ಟಾಕ್ ತನ್ನ ವ್ಯವಹಾರವನ್ನು ಮುಕ್ತಾಯಗೊಳಿಸಬೇಕಾಗುತ್ತದೆ ಟ್ರಂಪ್ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com