ರಿಲಯನ್ಸ್ ಡಿಜಿಟಲ್ ನಲ್ಲಿ ಮತ್ತೆ ಡಿಜಿಟಲ್ ಇಂಡಿಯಾ ಮಾರಾಟ; ಹಲವು ರಿಯಾಯಿತಿ
ರಿಲಯನ್ಸ್ ಡಿಜಿಟಲ್ ಸ್ಟೋರ್ ಗಳಲ್ಲಿ ಹಾಗೂ www.reliancedigital.inನಲ್ಲಿ ಬಹು ನಿರೀಕ್ಷಿತ 'ಡಿಜಿಟಲ್ ಇಂಡಿಯಾ ಮಾರಾಟ' ಮತ್ತೆ ಬಂದಿದೆ. ಆಗಸ್ಟ್ 11, 2020ರ ತನಕ ಈ ಮಾರಾಟ ನಡೆಯುತ್ತದೆ.
Published: 07th August 2020 09:06 PM | Last Updated: 08th August 2020 12:17 PM | A+A A-

ರಿಲಯನ್ಸ್ ಡಿಜಿಟಲ್ ನಲ್ಲಿ ಮತ್ತೆ ಡಿಜಿಟಲ್ ಇಂಡಿಯಾ ಮಾರಾಟ; ಹಲವು ರಿಯಾಯಿತಿ
ನವದೆಹಲಿ: ರಿಲಯನ್ಸ್ ಡಿಜಿಟಲ್ ಸ್ಟೋರ್ ಗಳಲ್ಲಿ ಹಾಗೂ www.reliancedigital.in ನಲ್ಲಿ ಬಹು ನಿರೀಕ್ಷಿತ 'ಡಿಜಿಟಲ್ ಇಂಡಿಯಾ ಮಾರಾಟ' ಮತ್ತೆ ಬಂದಿದೆ. ಆಗಸ್ಟ್ 11, 2020ರ ತನಕ ಈ ಮಾರಾಟ ನಡೆಯುತ್ತದೆ.
ಅಗಾಧ ಪ್ರಮಾಣದ ಎಲೆಕ್ಟ್ರಾನಿಕ್ಸ್ ನಲ್ಲಿ ಗ್ರಾಹಕರು ತಮಗೆ ಬೇಕಾದದ್ದನ್ನು ನಂಬಲಸಾಧ್ಯವಾದ ಬೆಲೆಗೆ ಪಡೆಯಬಹುದು.
ಜತೆಗೆ ಎಚ್ ಡಿಎಫ್ ಸಿ ಬ್ಯಾಂಕ್ ಕಾರ್ಡ್ ಗೆ ದೇಶಾದ್ಯಂತ ಇರುವ ರಿಲಯನ್ಸ್ ಡಿಜಿಟಲ್ ಸ್ಟೋರ್ ಗಳಲ್ಲಿ ಮತ್ತು ಮೈ ಜಿಯೋ ಸ್ಟೋರ್ ಗಳಲ್ಲಿ ಹಾಗೂ www.reliancedigital.in ನಲ್ಲಿ ತಕ್ಷಣ ಶೇ.10ರ ರಿಯಾಯಿತಿ ಕೂಡ ಸಿಗುತ್ತದೆ. ಈ ವರ್ಷದ 'ಡಿಜಿಟಲ್ ಇಂಡಿಯಾ ಮಾರಾಟ'ದಲ್ಲಿ "ಪ್ರತಿ ದಿನ ಅದ್ಭುತ ಖರೀದಿ" ಎಂಬ ಥೀಮ್ ಹೊಂದಿದೆ. ವಿಶೇಷ ಆಫರ್ ಗಳನ್ನು ನೀಡಲಾಗುತ್ತಿದೆ.
ಪ್ರತಿ ದಿನವೂ ಆಫರ್ ಗಳು ಇರಲಿದ್ದು, ಇಂದಿನಿಂದ ಮಾರಾಟ ಆರಂಭವಾಗಲಿದೆ. ಟೀವಿ, ಗೃಹೋಪಯೋಗಿ ವಸ್ತುಗಳು, ಮೊಬೈಲ್ ಫೋನ್ ಗಳು, ಲ್ಯಾಪ್ ಟಾಪ್ ಗಳು ಮತ್ತು ಇತರ ಸಲಕರಣೆ, ಉಪಕರಣಗಳ ಮೇಲೆ ಆಫರ್ ಗಳು ದೊರೆಯಲಿವೆ.