ದೇಸಿ ಆ್ಯಪ್‌ ಚಿಂಗಾರಿ'ಗೆ 10 ಕೋಟಿ ಸೀಡ್ ಫಂಡಿಂಗ್! 

ಚೀನಾದ ಟಿಕ್ ಟಾಕ್ ಗೆ ಪರ್ಯಾಯವಾಗಿರುವ ದೇಸಿ ಆ್ಯಪ್‌ ಚಿಂಗಾರಿಗೆ 10 ಕೋಟಿ ರೂಪಾಯಿ ಸೀಡ್ ಫಂಡಿಂಗ್ ಸಂಗ್ರಹವಾಗಿದೆ. 
ಚಿಂಗಾರಿ ಆ್ಯಪ್
ಚಿಂಗಾರಿ ಆ್ಯಪ್

ನವದೆಹಲಿ: ಚೀನಾದ ಟಿಕ್ ಟಾಕ್ ಗೆ ಪರ್ಯಾಯವಾಗಿರುವ ದೇಸಿ ಆ್ಯಪ್‌ ಚಿಂಗಾರಿಗೆ 10 ಕೋಟಿ ರೂಪಾಯಿ ಸೀಡ್ ಫಂಡಿಂಗ್ ಸಂಗ್ರಹವಾಗಿದೆ. 

ದೇಶಾದ್ಯಂತ ಚೀನಾ ಆ್ಯಪ್‌ ವಿರೋಧಿ ಅಭಿಪ್ರಾಯ ಮೂಡುತ್ತಿದ್ದು ಚಿಂಗಾರಿ ಮಾದರಿಯ ದೇಶೀಯ ಆ್ಯಪ್‌ ಗಳೆಡೆಗೆ ಜನರು ಆಕರ್ಷಿಸುತ್ತಿದ್ದಾರೆ. ಪರಿಣಾಮ ದೇಶೀಯ ಆ್ಯಪ್‌ ಗಳ ಬಳಕೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದ್ದು, ಏಂಜೆಲಿಸ್ಟ್ ಇಂಡಿಯಾ, ಉತ್ಸವ್ ಸೊಮಾನಿಯಾಸ್ ಐಸೀಡ್, ವಿಲೇಜ್ ಗ್ಲೋಬಲ್, ಲಾಗ್ ಎಕ್ಸ್ ವೆಂಚರ್ಸ್, ಜಸ್ಮೀಂದರ್ ಸಿಂಗ್ ಗುಲಾಟಿ ಆಫ್ ನೌಪ್ಲೋಟ್ಸ್ ಚಿಂಗಾರಿಯಲ್ಲಿ ಹೂಡಿಕೆ ಮಾಡಿವೆ.

ಈ ಫಂಡಿಂಗ್ ಮೊತ್ತವನ್ನು ಹೆಚ್ಚುವರಿಯಾಗಿ ಹೊಸ ಪ್ರತಿಭೆಗಳನ್ನು ನೇಮಕ ಮಾಡಿಕೊಳ್ಳುವುದಕ್ಕೆ ಬಳಕೆ ಮಾಡಲಾಗುತ್ತದೆ, ಈ ಮೂಲಕ ಚಿಂಗಾರಿ ಆಪ್ ನ್ನು ಹೆಚ್ಚು ಜನರನ್ನು ತಲುಪುವಂತೆ ಮಾಡುವ ಉದ್ದೇಶವಿದೆ ಎಂದು ಸಂಸ್ಥೆ ತಿಳಿಸಿದೆ. 

25 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಪ್ರತಿ ದಿನ 3 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಈ ನಡುವೆ ಇತ್ತೀಚಿನ ವರದಿಯ ಪ್ರಕಾರ ಮೈಕ್ರೋ ಸಾಫ್ಟ್ ದೇಶೀಯ ಪ್ರಾದೇಶಿಕ ಭಾಷೆಗಳ ಸಾಮಾಜಿಕ ಜಾಲತಾಣವಾದ ಶೇರ್ ಚಾಟ್ ನಲ್ಲಿ 100$ ನಷ್ಟು ಹೂಡಿಕೆ ಮಾಡುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com