ಟಿಕ್ ಟಾಕ್ ನೊಂದಿಗೆ ಕೈ ಜೋಡಿಸುವ ಬಗ್ಗೆ ಮಾತುಕತೆ ನಡೆಸಿದ್ದ ಟ್ವಿಟರ್ 

ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ನಿಷೇಧದ ಭೀತಿ ಎದುರಿಸುತ್ತಿರುವ ಟಿಕ್ ಟಾಕ್ ನೊಂದಿಗೆ ಸಾಮಾಜಿಕ ಜಾಲತಾಣ ದೈತ್ಯ ಟ್ವಿಟರ್ ಕೈ ಜೋಡಿಸುವ ಮಾತನ್ನಾಡಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ. 
ಟ್ವಿಟರ್
ಟ್ವಿಟರ್

ಸ್ಯಾನ್ ಫ್ರಾನ್ಸಿಸ್ಕೋ: ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ನಿಷೇಧದ ಭೀತಿ ಎದುರಿಸುತ್ತಿರುವ ಟಿಕ್ ಟಾಕ್ ನೊಂದಿಗೆ ಸಾಮಾಜಿಕ ಜಾಲತಾಣ ದೈತ್ಯ ಟ್ವಿಟರ್ ಕೈ ಜೋಡಿಸುವ ಮಾತನ್ನಾಡಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ. 

ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದ್ದು, ಟಿಕ್ ಟಾಕ್ ನೊಂದಿಗೆ ಕೈ ಜೋಡಿಸುವುದರ ಬಗ್ಗೆ ಟ್ವಿಟರ್ ಐಎನ್ ಸಿ ಪ್ರಾಥಮಿಕ ಹಂತದ ಮಾತುಕತೆಗಳನ್ನು ಮುಗಿಸಿತ್ತು ಎಂದು ಹೇಳಿದೆ. ಟ್ವಿಟರ್ ಈ ಮಾತುಕತೆಯನ್ನು ಮುಂದುವರೆಸುತ್ತದೆಯೋ ಇಲ್ಲವೋ ಎಂಬುದು ಅಸ್ಪಷ್ಟವಾಗಿದೆ.

ಟಿಕ್ ಟಾಕ್ ಬಗ್ಗೆ ಜಾಗತಿಕವಾಗಿ ಮೂಡಿರುವ ಅಭಿಪ್ರಾಯಗಳು ಹಾಗೂ ನಿಷೇಧದ ಭೀತಿ  ಮಾತುಕತೆ ನಡೆಸುವುದಕ್ಕೆ ಅಡ್ಡಿಯಾಗಿ ಪರಿಣಮಿಸಬಹುದೆಂದು ವಿಶ್ಲೇಷಿಸಲಾಗುತ್ತಿದೆ. ಮಾತುಕತೆ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ಟ್ವಿಟರ್ ನಿರಾಕರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com