ಕೇಂದ್ರ ಸರ್ಕಾರಕ್ಕೆ 57,128 ಕೋಟಿ ಲಾಭಾಂಶ ನೀಡಲು ಆರ್‌ಬಿಐ ಒಪ್ಪಿಗೆ!

ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ತನ್ನ ಲಾಭಾಂಶದ 57,128 ಕೋಟಿ ರುಪಾಯಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲು ನಿರ್ಧರಿಸಲಾಗಿದೆ.
ಶಕ್ತಿಕಾಂತ್ ದಾಸ್
ಶಕ್ತಿಕಾಂತ್ ದಾಸ್

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ತನ್ನ ಲಾಭಾಂಶದ 57,128 ಕೋಟಿ ರುಪಾಯಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲು ನಿರ್ಧರಿಸಲಾಗಿದೆ. 

ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್‌ಬಿಐನ ಕೇಂದ್ರ ಮಂಡಳಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. 

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಂದ 60 ಸಾವಿರ ಕೋಟಿ ರುಪಾಯಿ ಲಾಭಾಂಶ ಬರಬಹುದು ಎಂದು ಕೇಂದ್ರ ಸರ್ಕಾರ ಲೆಕ್ಕಾ ಹಾಕಿತ್ತು. ಆದರೆ ಕೊರೋನಾ ಮಹಾಘಾತದಿಂದಾಗಿ ನಿರೀಕ್ಷಿತ ಮಟ್ಟ ತಲುಪಿಲ್ಲ. 

"2019-20ರ ಅಕೌಂಟಿಂಗ್ ವರ್ಷಕ್ಕೆ 57,128 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡಲು ಮಂಡಳಿಯು ಅನುಮೋದನೆ ನೀಡಿದೆ, ಆದರೆ ಆಕಸ್ಮಿಕ ಅಪಾಯದ ಬಫರ್ ಅನ್ನು ಶೇಕಡಾ 5.5 ಕ್ಕೆ ನಿರ್ವಹಿಸಲು ನಿರ್ಧರಿಸಿದೆ" ಎಂದು ಆರ್ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಇದಲ್ಲದೆ, ಕೇಂದ್ರ ಮಂಡಳಿ ಇನ್ನೋವೇಶನ್ ಹಬ್ ಸ್ಥಾಪಿಸುವ ಪ್ರಸ್ತಾಪದ ಬಗ್ಗೆ ಚರ್ಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com