ಭಾರತ-ಜರ್ಮನಿ ನಡುವೆ ಒಪ್ಪಂದ; ಬೆಂಗಳೂರಿಗೆ ವಿಮಾನ ಸೇವೆ ಪ್ರಾರಂಭಿಸಿದ ಲುಫ್ತಾನ್ಸಾ

ಭಾರತ ಮತ್ತು ಮತ್ತು ಜರ್ಮನಿ ನಡುವೆ ಒಪ್ಪಂದದ ಪರಿಣಾಮ ಲುಫ್ತಾನ್ಸಾ ಸುಮಾರು 40 ಕ್ಕೂ ಹೆಚ್ಚಿನ ವಿಮಾನ ಸೇವೆಯನ್ನು ಪ್ರಾರಂಭಿಸಿದೆ. 
ಭಾರತ-ಜರ್ಮನಿ ನಡುವೆ ಒಪ್ಪಂದ; ಬೆಂಗಳೂರಿಗೆ ವಿಮಾನ ಸೇವೆ ಪ್ರಾರಂಭಿಸಿದ ಲುಫ್ತಾನ್ಸಾ
ಭಾರತ-ಜರ್ಮನಿ ನಡುವೆ ಒಪ್ಪಂದ; ಬೆಂಗಳೂರಿಗೆ ವಿಮಾನ ಸೇವೆ ಪ್ರಾರಂಭಿಸಿದ ಲುಫ್ತಾನ್ಸಾ

ಬೆಂಗಳೂರು: ಭಾರತ ಮತ್ತು ಮತ್ತು ಜರ್ಮನಿ ನಡುವೆ ಒಪ್ಪಂದದ ಪರಿಣಾಮ ಲುಫ್ತಾನ್ಸಾ ಸುಮಾರು 40 ಕ್ಕೂ ಹೆಚ್ಚಿನ ವಿಮಾನ ಸೇವೆಯನ್ನು ಪ್ರಾರಂಭಿಸಿದೆ. 

ಈ ಸೇವೆಯು ಆಗಸ್ಟ್‌ ಕೊನೆಯವರೆಗೆ ಚಾಲ್ತಿಯಲ್ಲಿದ್ದು ಜರ್ಮಿನಿಯಿಂದ ಭಾರತಕ್ಕೆ ಬರುವವರು ಈ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ. ಪ್ರಸ್ತುತ ಫ್ರಾಕ್‌ಪರ್ಟ್‌ನಿಂದ ದೆಹಲಿ, ಬೆಂಗಳೂರು, ಮುಂಬೈ ಹಾಗು ಮನೀಚ್‌ನಿಂದ ದೆಹಲಿಗೆ ವಿಮಾನ ಸೇವೆಯನ್ನು ಪ್ರಾರಂಭಿಸಲಾಗಿದೆ.

ಲುಫ್ತಾನ್ಸಾ ಈಗಾಗಲೇ ಭಾರತದಿಂದ ಇತರ ದೇಶಗಳಿಗೆ ವಿಮಾನ ಸೇವೆಯನ್ನು ಪ್ರಾರಂಭಿಸಿದೆ. ಭಾರತ ಮತ್ತು ಜರ್ಮನಿ ನಡುವಿನ ಒಪ್ಪಂದದ ಪರಿಣಾಮ ಬೇರೆ ದೇಶದಿಂದ ಭಾರತಕ್ಕೆ ವಿಮಾನ ಸೇವೆಯನ್ನು ಲುಫ್ತಾನ್ಸಾ ಈಗ ಪ್ರಾರಂಭಿಸಿದೆ. ಭಾರತೀಯ ಅಧಿಕಾರಿಗಳ ಜೊತೆಯಲ್ಲಿ ಮಾತುಕತೆ ಜಾರಿಯಲ್ಲಿದ್ದು ಆಗಸ್ಟ್‌ ನಂತರವು ಜರ್ಮನಿಯಿಂದ ಭಾರತಕ್ಕೆ ವಿಮಾನ ಸೇವೆ ಒದಗಿಸಲು ಲುಫ್ತಾನ್ಸಾ ಅರ್ಜಿ ಸಲ್ಲಿಸುವುದಾಗಿ ಹೇಳಿದೆ.

ಪ್ರಯಾಣಿಕರ ಸುರಕ್ಷತೆಯು ಲುಫ್ತಾನ್ಸಾದ ಪ್ರಮುಖ ಆದ್ಯತೆಯಾಗಿರುತ್ತದೆ ಮತ್ತು ವಿಶೇಷವಾಗಿ ನೆಲದ ಮೇಲೆ ಮತ್ತು ಮಂಡಳಿಯಲ್ಲಿ ಗರಿಷ್ಠ ನೈರ್ಮಲ್ಯಕ್ಕೆ ಕಾಪಾಡಿಕೊಳ್ಳಬೇಕಾಗುತ್ತದೆ. ಈ ಕಾರಣಕ್ಕಾಗಿ ಇಡೀ ಪ್ರಯಾಣ ಸರಪಳಿಯಾದ್ಯಂತದ ಎಲ್ಲಾ ಪ್ರಕ್ರಿಯೆಗಳು ಎಲ್ಲರ ಸುರಕ್ಷತೆಯನ್ನು ಖಾತರಿಪಡಿಸುವ ಸಲುವಾಗಿ ಪರಿಶೀಲಿಸಲಾಗುವುದು. ತಜ್ಞರು ಪ್ರತಿಪಾದಿಸಿದ ಇತ್ತೀಚಿನ ಸಂಶೋಧನೆಗಳು ಮತ್ತು ನೈರ್ಮಲ್ಯ ಮಾನದಂಡಗಳನ್ನು ಆಧರಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com