ಭಾರತದ ಜಿಡಿಪಿ ಮೊದಲ ತ್ರೈಮಾಸಿಕದಲ್ಲಿ 16.5% ರಷ್ಟು ಕುಸಿತ! 

ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.16.5 ರಷ್ಟು ಕುಸಿತ ಕಾಣಲಿದೆ ಎಂದು ಸ್ಟೇಟ್ ಬ್ಯಾಂಕ್ ನ ಸಂಶೋಧನಾ ವರದಿ ಇಕೋವ್ರಾಪ್ ಅಂದಾಜಿಸಿದೆ. 

ಮೇ ತಿಂಗಳಲ್ಲಿ ಇಕೋವ್ರಾಪ್, 2020-21 ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯನ್ನು ಶೇ.20 ರಷ್ಟು ಕುಸಿಯಲಿದೆ ಎಂದು ಅಂದಾಜಿಸಿತ್ತು. ಈಗ ಪರಿಷ್ಕೃತ ಅಂದಾಜಿನಲ್ಲಿ ಈಗಿನ ಅಸ್ಥಿರತೆಯ ನಡುವೆಯೂ ಶೇ.16.5 ರಷ್ಟು ಕುಸಿತ ಕಾಣಲಿದೆ ಎಂದು ವಿಶ್ಲೇಷಿಸಿದೆ. 

ಹಣಕಾಸು- ಹಣಕಾಸೇತರ ಕಂಪನಿಗಳ ಫಲಿತಾಂಶಗಳು ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಾಗಿದ್ದು, 2021 ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಾರ್ಪೊರೇಟ್ ಜಿವಿಎ ನಲ್ಲಿನ ಡಿಗ್ರೋಥ್ ರೆವಿನ್ಯೂ ಡಿಗ್ರೋತ್ ಗಿಂತ ಉತ್ತಮವಾಗಿದೆ.

ಈ ವರೆಗೂ 1,000 ಸಂಸ್ಥೆಗಳು ಮೊದಲ ತ್ರೈಮಾಸಿದ ತಮ್ಮ ಫಲಿತಾಂಶವನ್ನು ಪ್ರಕಟಿಸಿವೆ. ಟಾಪ್ ಲೈನ್ ನಲ್ಲಿ ಶೇ.25 ರಷ್ಟು ಕುಸಿತ ಬಾಟಮ್ ಲೈನ್ ನಲ್ಲಿ ಶೇ.55 ರಷ್ಟು ಕುಸಿತ ದಾಖಲಾಗಿದ್ದು, ಒಟ್ಟಾರೆ ಕಾರ್ಪೊರೇಟ್ ಜಿವಿಎ ಯಲ್ಲಿ ಎದುರಾಗಿರುವ ಕುಸಿತ ಶೇ.14.1 ರಷ್ಟಾಗಿದೆ ಎಂದು ವರದಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com