ಆನ್ ಲೈನ್ ಫಾರ್ಮಸಿ ಕಂಪೆನಿಯಲ್ಲಿ ಹೂಡಿಕೆ ಮಾಡಿರುವ ರಿಲಯನ್ಸ್ ಇಂಡಸ್ಟ್ರೀಸ್: ನೆಟ್ ಮಡ್ಸ್ ನಿಂದ ಷೇರುಗಳ ಖರೀದಿ 

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ(ಆರ್ ಐಎಲ್) ಅಂಗಸಂಸ್ಥೆ ರಿಲಯನ್ಸ್ ರಿಟೈಲ್ ವೆಂಚುರ್ಸ್ ಲಿಮಿಟೆಡ್(ಆರ್ ಆರ್ ವಿಎಲ್) ಆನ್ ಲೈನ್ ಫಾರ್ಮಸಿ ವಿಟಾಲಿಕ್ ಹೆಲ್ತ್ ಪ್ರೈವೆಟ್ ಲಿಮಿಟೆಡ್ ನ ನೆಟ್ ಮಡ್ಸ್ ಕಂಪೆನಿಯ ಷೇರುಗಳನ್ನು ಖರೀದಿಸಿ ಕಂಪೆನಿಯಲ್ಲಿ ಬಂಡವಾಳ ಹೂಡಿಕೆ ಮಾಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ:ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ(ಆರ್ ಐಎಲ್) ಅಂಗಸಂಸ್ಥೆ ರಿಲಯನ್ಸ್ ರಿಟೈಲ್ ವೆಂಚುರ್ಸ್ ಲಿಮಿಟೆಡ್(ಆರ್ ಆರ್ ವಿಎಲ್) ಆನ್ ಲೈನ್ ಫಾರ್ಮಸಿ ವಿಟಾಲಿಕ್ ಹೆಲ್ತ್ ಪ್ರೈವೆಟ್ ಲಿಮಿಟೆಡ್ ನ ನೆಟ್ ಮಡ್ಸ್ ಕಂಪೆನಿಯ ಷೇರುಗಳನ್ನು ಖರೀದಿಸಿ ಕಂಪೆನಿಯಲ್ಲಿ ಬಂಡವಾಳ ಹೂಡಿಕೆ ಮಾಡಿದೆ. 

ರಿಲಯನ್ಸ್ ರಿಟೇಲ್ ವೆಂಚುರ್ಸ್ ನೆಟ್ ಮಡ್ಸ್ ನಲ್ಲಿ ಸುಮಾರು 620 ಕೋಟಿ ರೂಪಾಯಿ ಹೂಡಿಕೆ ಮಾಡಿದೆ.

ವಿಟಾಲಿಕ್ ನ ಷೇರು ವಹಿವಾಟಿನಲ್ಲಿ ಸುಮಾರು ಶೇಕಡಾ 60ರಷ್ಟು ರಿಲಯನ್ಸ್ ಲಿಮಿಟೆಡ್ ಹೂಡಿಕೆ ಮಾಡಿದಂತಾಗಿದೆ ಮತ್ತು ಅದರ ಅಂಗಸಂಸ್ಥೆಗಳಾದ ಟ್ರೆಸರಾ ಹೆಲ್ತ್ ಪ್ರೈವೆಟ್ ಲಿಮಿಟೆಡ್, ನೆಟ್ ಮಡ್ಸ್ ಮಾರ್ಕೆ್ಟ್ ಪ್ಲೇಸ್ ಲಿಮಿಟೆಡ್ ಮತ್ತು ದಾದಾ ಫಾರ್ಮ ಡಿಸ್ಟ್ರಿಬ್ಯೂಷನ್ ಪ್ರೈವೆಟ್ ಲಿಮಿಟೆಡ್ ನಲ್ಲಿ ಶೇಕಡಾ 100ರಷ್ಟು ನೇರ ಈಕ್ವೆಟಿ ಮಾಲಿಕತ್ವ ಹೊಂದಲಿದೆ ಎಂದು ರಿಲಯನ್ಸ್ ತಿಳಿಸಿದೆ.

ಆರ್ ಆರ್ ವಿಎಲ್ ನ ನಿರ್ದೇಶಕಿ ಇಶಾ ಅಂಬಾನಿ, ಭಾರತದಲ್ಲಿ ಪ್ರತಿಯೊಬ್ಬರಿಗೂ, ಹಳ್ಳಿ ಹಳ್ಳಿಗೂ ಡಿಜಿಟಲ್ ಸೌಲಭ್ಯ ದೊರೆಯುವಂತೆ ಮಾಡಲು ಈ ಹೂಡಿಕೆಯಾಗಿದೆ. ಉತ್ತಮ ಆರೋಗ್ಯ ಸೇವೆ ಮತ್ತು ಉತ್ಪನ್ನಗಳನ್ನು ಕಂಪೆನಿ ಕಡೆಯಿಂದ ಜನತೆಗೆ ಒದಗಿಸಲು ನೆಟ್ ಮಡ್ಸ್ ನೊಂದಿಗೆ ಕೈಜೋಡಿಸಿರುವುದರಿಂದ ಸಹಾಯವಾಗಲಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com