ಕೇವಲ ಒಂದು ಕ್ಲಿಕ್ ನಲ್ಲಿ ಬಿಸಿಯೂಟ ಸಿದ್ಧ: ಮಿಲ್ಟನ್ ನಿಂದ 'ಸ್ಮಾರ್ಟ್ ಟಿಫಿನ್' ಬಿಡುಗಡೆ

ಈಗ ಬಿಸಿಯೂಟಗಳು ಕೇವಲ ಒಂದು ಕ್ಲಿಕ್ ಅಂತರದಲ್ಲಿ ಸಿಗುತ್ತವೆ! ಪ್ರಪ್ರಥಮ ಮಿಲ್ಟನ್ ಸ್ಮಾರ್ಟ್ ಟಿಫಿನ್, ಸ್ಮಾರ್ಟ್ ಫೋನ್ ಮುಖೇನ ಊಟವನ್ನು ಬಿಸಿಯಾಗಿಸಿ, ಸದ್ಯದ ಕಾಲದಲ್ಲಿ ಜನರು ಆಹಾರ ಸೇವಿಸುವ ರೀತಿಯನ್ನು ಪರಿವರ್ತಿಸಲಿದೆ. 
ಕೇವಲ ಒಂದು ಕ್ಲಿಕ್ ನಲ್ಲಿ ಬಿಸಿಯೂಟ ಸಿದ್ಧ: 'ಸ್ಮಾರ್ಟ್ ಟಿಫಿನ್' ನಿಂದ ಮಿಲ್ಟನ್ ಬಿಡುಗಡೆ
ಕೇವಲ ಒಂದು ಕ್ಲಿಕ್ ನಲ್ಲಿ ಬಿಸಿಯೂಟ ಸಿದ್ಧ: 'ಸ್ಮಾರ್ಟ್ ಟಿಫಿನ್' ನಿಂದ ಮಿಲ್ಟನ್ ಬಿಡುಗಡೆ

ಬೆಂಗಳೂರು: ಈಗ ಬಿಸಿಯೂಟಗಳು ಕೇವಲ ಒಂದು ಕ್ಲಿಕ್ ಅಂತರದಲ್ಲಿ ಸಿಗುತ್ತವೆ! ಪ್ರಪ್ರಥಮ ಮಿಲ್ಟನ್ ಸ್ಮಾರ್ಟ್ ಟಿಫಿನ್, ಸ್ಮಾರ್ಟ್ ಫೋನ್ ಮುಖೇನ ಊಟವನ್ನು ಬಿಸಿಯಾಗಿಸಿ, ಸದ್ಯದ ಕಾಲದಲ್ಲಿ ಜನರು ಆಹಾರ ಸೇವಿಸುವ ರೀತಿಯನ್ನು ಪರಿವರ್ತಿಸಲಿದೆ. 

"ಕುಚ್ ನಯಾ ಸೋಚತೆ ಹೈ" (ಏನಾದರೂ ಹೊಸದನ್ನು ಆಲೋಚಿಸೋಣ’) ಎನ್ನುವ ಬ್ರ್ಯಾಂಡ್‌ನ ತತ್ವ, ಚತುರ ಪ್ರಗತಿಪರ ಉತ್ಪನ್ನಗಳತ್ತ ಚಲಿಸುವಂತೆ ಮಾಡುವುದರ ಜೊತೆಗೆ, ಇಂದಿನ ಜೀವನಶೈಲಿಯಲ್ಲಿ ಎದುರಾಗುತ್ತಿರುವ ಕೆಲವು ಮುಖ್ಯ ಸಮಸ್ಯೆಗಳಿಗೆ ಪರಿಹಾರವಾಗಿಯೂ ಹೊರಹೊಮ್ಮಿದೆ. ಗೃಹೋಪಯೋಗಿ ಉತ್ಪನ್ನಗಳಲ್ಲಿ ಭಾರತದ ವಿಶ್ವಸನೀಯ ಹೆಸರಾದ ಮಿಲ್ಟನ್, ಮತ್ತೊಮ್ಮೆ ವಿನೂತನ ಪ್ರಯೋಗ ಹಾಗೂ ಉಪಯುಕ್ತತೆಯ ಮಿತಿಗಳನ್ನು ಮೀರಿ, ಈ ಉತ್ಪನ್ನದ ಬಿಡುಗಡೆಯೊಂದಿಗೆ ಮತ್ತೊಂದು ಮೆಟ್ಟಿಲು ಮೇಲೇರಿದೆ. 

ಕಚೇರಿ/ಕಾರ್ಖಾನೆಗಳು ಮತ್ತೆ ಪುನರಾರಂಭಗೊಳ್ಳುತ್ತಿದ್ದಂತೆ ಹಾಗೂ ಜನರು ತಮ್ಮ ತಮ್ಮ ಕೆಲಸಗಳಿಗೆ ಮರಳುತ್ತಿರುವಾಗ, ಹೊರಗಡೆಯ ಆಹಾರ ಸೇವನೆ ಮಾಡುವುದು ಅಥವಾ ಆಹಾರವನ್ನು ಬಿಸಿ ಮಾಡಲು ಇತರರು ಉಪಯೋಗಿಸಿದ ಮೈಕ್ರೋ ಓವನನ್ನೇ ಬಳಸುವುದು ಅಷ್ಟು ಸೂಕ್ತವಲ್ಲ. ಆದ್ದರಿಂದ, ಪ್ರಪ್ರಥಮವಾಗಿ ಹೊರಬಂದಿರುವ ‘ಸ್ಮಾರ್ಟ್ ಟಿಫಿನ್’, ಮನೆಯಲ್ಲಿ ಬೇಯಿಸಿದ ಆಹಾರವನ್ನು, ಯಾವುದೇ ರುಚಿ ಬದಲಾವಣೆ ಇಲ್ಲದೆ ಅಥವಾ ಎಂದಿನ ಆಹಾರ ಸೇವನೆಯ ಅನುಭವಕ್ಕೆ ಧಕ್ಕೆಯಾಗದ ರೀತಿಯಲ್ಲಿ ಸುರಕ್ಷಿತವಾಗಿ ತಿನ್ನಲು ಸಾಧ್ಯವಾಗಿಸುತ್ತದೆ. ಸುಮ್ಮನೆ ಪ್ಲಗ್ ಇನ್ ಮಾಡಿ, ವೈ-ಫೈ ಗೆ ಕನೆಕ್ಟ್ ಮಾಡಿ. ಉಳಿದ ಕೆಲಸವನ್ನು ಮಿಲ್ಟನ್ ಆ್ಯಪ್ ಮಾಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com