ರಚನಾತ್ಮಕ ಸುಧಾರಣೆಗಳು ಸರ್ಕಾರದ ಪ್ರಮುಖ ಆದ್ಯತೆ: ನಿರ್ಮಲಾ ಸೀತಾರಾಮನ್‌

ಕೋವಿಡ್ ನಂತರ ಸರ್ಕಾರ ತೆಗೆದುಕೊಂಡಿರುವ ಸಾಲುಸಾಲು ಕ್ರಮಗಳು ಮತ್ತು  ನೀತಿಗಳ ಘೋಷಣೆಗಳು, ಸಂಪೂರ್ಣ ರಚನಾತ್ಮಕ ಬದಲಾವಣೆ ಸರ್ಕಾರದ ಪ್ರಮುಖ ಆದ್ಯತೆ ಎಂಬ ಅಂಶದ ಪ್ರತಿಬಿಂಬವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಹೇಳಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ಕೋವಿಡ್ ನಂತರ ಸರ್ಕಾರ ತೆಗೆದುಕೊಂಡಿರುವ ಸಾಲುಸಾಲು ಕ್ರಮಗಳು ಮತ್ತು  ನೀತಿಗಳ ಘೋಷಣೆಗಳು, ಸಂಪೂರ್ಣ ರಚನಾತ್ಮಕ ಬದಲಾವಣೆ ಸರ್ಕಾರದ ಪ್ರಮುಖ ಆದ್ಯತೆ ಎಂಬ ಅಂಶದ ಪ್ರತಿಬಿಂಬವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಹೇಳಿದ್ದಾರೆ.

ಉದ್ಯಮದ ಹಲವು ನಾಯಕರನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಘೋಷಿಸಿರುವ ಪ್ರತಿ ನೀತಿ ಕೂಡ ಸ್ವರೂಪದ ಅಂಶಗಳನ್ನು ಹೊಂದಿದ್ದವು. ಪರಿಣಾಮವಾಗಿ, ಈ ಸುಧಾರಣೆಗಳು ಚೇತರಿಕೆಯ ಪ್ರಕ್ರಿಯೆಯ ಮೇಲೆ ಗಣನೀಯ ಪ್ರಭಾವ ಬೀರಿವೆ. ಇದಕ್ಕೆ ಎಲ್ಲರೂ  ಸಾಕ್ಷಿಯಾಗಿದ್ದಾರೆ ಎಂದರು. 

ಚೇತರಿಕೆಯ ಪ್ರಕ್ರಿಯೆಗೆ ಹೆಚ್ಚು ವೇಗ ನೀಡಲು, ಅಂತರರಾಜ್ಯ ಸರಕು ಸಾಗಣೆಗೆ ಯಾವುದೇ ಅಡ್ಡಿಯುಂಟು ಮಾಡದಂತೆ ರಾಜ್ಯ  ಸರ್ಕಾರಗಳಿಗೆ ಗೃಹ ಸಚಿವಾಲಯ ಸೂಚನೆ ನೀಡಿದೆ ಎಂದು ಹೇಳಿದರು. 

ದೇಶ ಪ್ರಸ್ತುತ ಸಂಕಷ್ಟದಿಂದ ಹೊರಬರಲು ಸರ್ಕಾರ, ನಿಯಂತ್ರಕರು ಮತ್ತು ಉದ್ಯಮಿಗಳ ಪರಸ್ಪರ ಸಹಕಾರದಿಂದ ಕೆಲಸ ಮಾಡಲು ಇದಕ್ಕಿಂತ ಉತ್ತಮ ಸಮಯ ಇರಲಾರದು ಎಂದರು.

ದೇಶದಲ್ಲಿ  ಕೋವಿಡ್ ನಂತರದ ಪರಿಸ್ಥಿತಿ ನಿರ್ಮಾಣವಾಗುತ್ತಿರುವಾಗ ಅಂಕಿಅಂಶ ಆಧಾರಿತ ಉತ್ಪಾದನಾ  ಮಾದರಿಗಳನ್ನು ಅಳವಡಿಸಿಕೊಂಡು, ಹೆಚ್ಚಿನ ಬಂಡವಾಳ ಆಕರ್ಷಿಸುವ ಕೆಲಸವಾಗಬೇಕಿದೆ ಎಂದರು.

ಸರ್ಕಾರಿ ಏಜೆನ್ಸಿಗಳಿಂದ ಪಾವತಿ ವಿಳಂಬವಾಗುತ್ತಿರುವುದನ್ನು ಸರಿಪಡಿಸಲು ಹಣಕಾಸು ಸಚಿವಾಲಯ ಕಾಲಕಾಲಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com