ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯಲ್ಲಿ ಶೇ.74ರಷ್ಟು ಷೇರು ಪಡೆದ ಅದಾನಿ ಗ್ರೂಪ್ 

ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಷೇರುಗಳಲ್ಲಿ ಶೇಕಡಾ 74ನ್ನು ಅದಾನಿ ಗ್ರೂಪ್ ಅಧಿಕೃತವಾಗಿ ಸೋಮವಾರ ಪಡೆದಿದೆ.
ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ
ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ

ನವದೆಹಲಿ: ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಷೇರುಗಳಲ್ಲಿ ಶೇಕಡಾ 74ನ್ನು ಅದಾನಿ ಗ್ರೂಪ್ ಅಧಿಕೃತವಾಗಿ ಸೋಮವಾರ ಪಡೆದಿದೆ.

ಜಿವಿಕೆ ಪವರ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಇಂದು ಅಧಿಕೃತವಾಗಿ ತನ್ನ ಅಂಗ ಸಂಸ್ಥೆಗಳಾದ ಜಿವಿಕೆ ಏರ್ ಪೋರ್ಟ್ ಡೆವೆಲಪರ್ಸ್ ಲಿಮಿಟೆಡ್ ಮತ್ತು ಜಿವಿಕೆ ಏರ್ ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ಜತೆಗೆ ಅದಾನಿ ಏರ್ ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ಜತೆಗೆ ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ ಹೂಡಿಕೆ ಮಾಡಿವೆ.

ಈ ಒಪ್ಪಂದದ ಪ್ರಕಾರ ಅದಾನಿ ಗ್ರೂಪ್ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆಗೆ ಹಣಸಹಾಯದ ಬೆಂಬಲ ನೀಡಲಿದೆ. ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯಲ್ಲಿ ಜಿವಿಕೆ  ಗ್ರೂಪ್ ಶೇಕಡಾ 50.50ರಷ್ಟು ಷೇರುಗಳನ್ನು ಹೊಂದಿದೆ. ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯಲ್ಲಿ ಶೇಕಡಾ 74ರಷ್ಟು ಷೇರನ್ನು ಹೊಂದಿದೆ. 

ಅದಾನಿ ಗ್ರೂಪ್ ದಕ್ಷಿಣ ಆಫ್ರಿಕಾದ ಎಸಿಎಸ್ ಎ ಮತ್ತು ಬಿಡ್ ವೆಸ್ಟ್ ನಿಂದ ಶೇಕಡಾ 23.5ರಷ್ಟು ಷೇರನ್ನು ಪಡೆಯುವ ಪ್ರಕ್ರಿಯೆಯನ್ನು ಸದ್ಯದಲ್ಲಿಯೇ ಪೂರ್ಣಗೊಳಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com