ಉತ್ತಮ ನಿದ್ರೆಯ ಪ್ರಾಮುಖ್ಯತೆ ಸಾರಲು ರೆಸ್‏ಮೆಡ್ ನಿಂದ #WakeUpToGoodSleep ಕ್ಯಾಂಪೇನ್

ಗ್ರಾಹಕರು ಮತ್ತು ವೈದ್ಯರಿಗೆ ನಿದ್ರಾ ರೋಗಗಳ ಬಗ್ಗೆ ಅರಿವು ಮೂಡಿಸಲು ಡಿಜಿಟಲ್ ಕ್ಯಾಂಪೇನ್

Published: 01st December 2020 03:46 PM  |   Last Updated: 01st December 2020 03:46 PM   |  A+A-


ResMed #WakeUpToGoodSleep Campaign

ರೆಸ್‏ಮೆಡ್ #WakeUpToGoodSleep ಕ್ಯಾಂಪೇನ್

Posted By : Prasad SN
Source : Online MI

ನವದೆಹಲಿ, 1 ಡಿಸೆಂಬರ್ 2020: ಡಿಜಿಟಲ್ ಆರೋಗ್ಯ ಮತ್ತು ಸಂಪರ್ಕಿತ ಸಾಧನಗಳು (ನಿದ್ರೆ ಮತ್ತು ಶ್ವಾಸಕೋಶ ಆರೈಕೆ) ವಿಭಾಗದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ರೆಸ್‏ಮೆಡ್, ನಿದ್ರೆ ಕುರಿತು ಶೈಕ್ಷಣಿಕ ಕ್ಯಾಂಪೇನ್ #WakeUpToGoodSleep ಆರಂಭಿಸಿರುವುದಾಗಿ ಘೋಷಿಸಿದೆ. ಒಟ್ಟಾರೆ ಆರೋಗ್ಯದ ಮೇಲೆ ನಿದ್ರೆಯ ಗುಣಮಟ್ಟದ ಪ್ರಾಮುಖ್ಯತೆಗೆ ಹೆಚ್ಚಿನ ಒತ್ತು ನೀಡಲಾಗಿರುವ ಈ ಕ್ಯಾಂಪೇನ್ನಲ್ಲಿ, ಭಾರತದಲ್ಲಿ ನಿದ್ರೆ ಕುರಿತು ಅನಾರೋಗ್ಯದ ಹೆಚ್ಚಳ ಹಾಗೂ ಅದಕ್ಕೆ ಲಭ್ಯವಿರುವ ಚಿಕಿತ್ಸೆಗಳತ್ತ ಗಮನ ಹರಿಸಿದೆ. 

ಇಂದು ಕೋಟ್ಯಂತರ ಭಾರತೀಯರು ನಿದ್ರೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಪೈಕಿ ಬಹುತೇಕರಲ್ಲಿ ಈ ಸಮಸ್ಯೆ ಪತ್ತೆಯಾಗಿಲ್ಲ. ಮಿಲಿಯನ್ಗೂ ಹೆಚ್ಚು ಭಾರತೀಯರು ಸ್ಲೀಪ್ ಆಪ್ನಿಯಾದಿಂದಲೇ ಬಳಲುತ್ತಿದ್ದಾರೆ ಎಂದು 2019 ರ ಲ್ಯಾನ್ಸೆಟ್ ರೆಸ್ಪಿರೇಟರಿ ಮೆಡಿಸಿನ್ ಅಧ್ಯಯನ ಹೇಳುತ್ತದೆ. ಚಿಕಿತ್ಸೆ ಪಡೆಯದೆ ನಿದ್ರಾ ರೋಗಗಳು ನಮ್ಮ ಮಾನಸಿಕ ಮತ್ತು ದೈಹಿಕ ಅನಾರೋಗ್ಯಗಳಾದ ಹೃದಯಾಘಾತ, ಡಯಾಬಿಟೀಸ್, ಖಿನ್ನತೆ ಇತ್ಯಾದಿಗೆ ಕಾರಣವಾಗುತ್ತದೆ. ಹೀಗಾಗಿ, ನಿದ್ರಾ ರೋಗಗಳ ಬಗ್ಗೆ ಅರಿವು ಮೂಡಿಸುವ ಅಗತ್ಯ ಹೆಚ್ಚಾಗಿದೆ.

ಗ್ರಾಹಕರು ಮತ್ತು ವೈದ್ಯರಲ್ಲಿ ಅರಿವು ಮೂಡಿಸುವ ಉದ್ದೇಶವನ್ನು ಕ್ಯಾಂಪೇನ್ ಹೊಂದಿದೆ. ಕ್ಯಾಂಪೇನ್ನ ಭಾಗವಾಗಿ, ಸ್ಲೀಪ್ ಆಪ್ನಿಯಾ, ಗೊತ್ತೇ ಇಲ್ಲದೆ ನಿದ್ರಾ ರೋಗಗಳು ಮತ್ತು ಅದರ ಪರಿಣಾಮಗಳಾದ ಬಳಲಿಕೆ, ಮಾನಸಿಕ ಒತ್ತಡ, ಕಿರಿಕಿರಿ ಮತ್ತು ವಾಹನ ಅಪಘಾತಗಳಂತಹವುಗಳನ್ನು ತೋರಿಸುವ ಮತ್ತು ಉತ್ತಮ ನಿದ್ರೆಯ ಪ್ರಾಮುಖ್ಯತೆಯನ್ನು ತಿಳಿಸುವಂತೆ ಶೈಕ್ಷಣಿಕ ಸಾಕ್ಷ್ಯಚಿತ್ರವನ್ನು ರೆಸ್‏ಮೆಡ್ ಬಿಡುಗಡೆ ಮಾಡಿದೆ.

ರೋಗಿಗಳು ರಾತ್ರಿ ಉತ್ತಮ ನಿದ್ರೆ ಮಾಡುವುದನ್ನು ಖಚಿತಪಡಿಸಲು, ಸ್ಲೀಪ್ ಕೋಚ್ ಅಸಿಸ್ಟೆನ್ಸ್ ಅನ್ನೂ ರೆಸ್‏ಮೆಡ್ ಪರಿಚಯಿಸಿದೆ. ಇದು ರೋಗಿಗಳಿಗೆ ಅವರ ಪ್ರತಿ ನಿದ್ರೆಯ ಹಂತದಲ್ಲೂ ಮಾರ್ಗದರ್ಶನ ನೀಡುತ್ತದೆ. ಮನೆಯ ನಿದ್ರಾ ಪರೀಕ್ಷೆಯ ಮೂಲಕ ಸ್ಲೀಪ್ ಆಪ್ನಿಯಾವನ್ನು ಇದು ಪತ್ತೆ ಮಾಡುತ್ತದೆ ಹಾಗೂ ಲಭ್ಯವಿರುವ ಚಿಕಿತ್ಸೆ ಆಯ್ಕೆಗಳಾದ ಸಿಪಿಎಪಿ (ಕಂಟಿನ್ಯೂಯಸ್ ಪಾಸಿಟಿವ್ ಏರ್ವೇ ಪ್ರೆಶರ್) ತಿಳಿಸುತ್ತದೆ. ಅಷ್ಟೇ ಅಲ್ಲ, ಕಿರಿಕಿರಿ ಇಲ್ಲದೆ ಸಾಧನವನ್ನು ಇನ್ಸ್ಟಾಲ್ ಮಾಡಲು ಮತ್ತು ಸಾಧನಗಳಿಗೆ ಉತ್ತಮ ಕೊಡುಗೆಗಳನ್ನು ಒದಗಿಸಲು ಹಾಗೂ ಸಾದನಗಳಿಗೆ ಇಎಂಐ ಸ್ಕೀಮ್ಗಳನ್ನು ಒದಗಿಸಲು ಅನುವು ಮಾಡುತ್ತದೆ.

ಭಾರತವು ದಿನದಿಂದ ದಿನಕ್ಕೆ ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸುತ್ತಿರುವುದರಿಂದ, ಆಹಾರ ಬದಲಾವಣೆ, ನಿತ್ಯದ ವ್ಯಾಯಾಮ ಮತ್ತು ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಆದರೆ, ಒಟ್ಟಾರೆ ಆರೋಗ್ಯಕ್ಕೆ ಪ್ರಮುಖ ಪಾತ್ರ ವಹಿಸುವ ನಿದ್ರೆ ಅಗತ್ಯ ಗಮನಹರಿಸಿಲ್ಲ” ಎಂದು ರೆಸ್‏ಮೆಡ್ನ ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕ ರಾಷ್ಟ್ರೀಯ ಮಾರ್ಕೆಟಿಂಗ್ ಮುಖ್ಯಸ್ಥ ಸೀಮಾ ಅರೋರಾ ಹೇಳಿದ್ದಾರೆ. ನಿದ್ರೆಗೆ ಬಗ್ಗೆ ಅರಿವಿನ ಪ್ರಮಾಣವು ಭಾರತದಂತಹ ದೊಡ್ಡ ದೇಶದಲ್ಲಿ ಇಂದಿಗೂ ಅತ್ಯಂತ ಕಡಿಮೆ ಇದೆ. 1.3 ಬಿಲಿಯನ್ ಜನರಿಗೆ ಕೇವಲ ಬೆರಳೆಣಿಕೆಯಷ್ಟೇ ಸ್ಲೀಪ್ ಲ್ಯಾಬ್ಗಳಿವೆ. ಈ ಜಾಗೃತಿ ಕ್ಯಾಂಪೇನ್ ಮೂಲಕ, ಸ್ಲೀಪ್ ಥೆರಪಿಯಲ್ಲಿ ಮುಂಚೂಣಿಯಲ್ಲಿರುವ ರೆಸ್‏ಮೆಡ್ ಭಾರತೀಯರಲ್ಲಿ ಅರಿವು ಮೂಡಿಸುವ ಗುರಿ ಹೊಂದಿದೆ. ನಿದ್ರೆ ಚೆನ್ನಾಗಿ ಆದರೆ ದಿನವೂ ಚೆನ್ನಾಗಿರುತ್ತದೆ ಎಂಬ ಘೋಷವಾಕ್ಯದ ಮೂಲಕ ವೈದ್ಯಕೀಯ ಸಮುದಾಯವನ್ನೂ ಇದು ಗಮನದಲ್ಲಿರಿಸಿಕೊಂಡಿದೆ.”

ವೈದ್ಯಕೀಯ ಸಮುದಾಯದಲ್ಲಿ ನಿದ್ರೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನದಲ್ಲಿ, ಡಾ. ಮನ್ವೀರ್ ಭಾಟಿಯಾ ಹಾಗೂ ಅವರ ಸ್ಲೀಪ್ ಸೊಸೈಟಿ ಎಸ್ಎಸ್ಎಸ್ಎಂ ಏಸ್ ಸ್ಕೂಲ್ ಆಫ್ ಸ್ಲೀಪ್ ಸೈನ್ಸ್ ಮತ್ತು ಡಾ. ಸುಜಿತ್ ರಾಜನ್ ಹಾಗೂ ಇತರ ನಿದ್ರಾ ಆರೋಗ್ಯ ಪರಿಣಿತರ ಸಹಭಾಗಿತ್ವದಲ್ಲಿ ವೆಬ್ ಎಜುಕೇಶನ್ ಸಿರೀಸ್ ಅನ್ನು ನಡೆಸುತ್ತಿದೆ, 2020 ಮೇ ಇಂದಲೂ, ಶೈಕ್ಷಣಿಕ ಜಾಗೃತಿ ಅಭಿಯಾನದ ಭಾಗವಾಗಿ ಭಾರತದಾದ್ಯಂತ 700 ಕ್ಕೂ ಹೆಚ್ಚು ವೈದ್ಯರನ್ನು ಪ್ರಮಾಣೀಕರಿಸಿದೆ.

ಇದರಿಂದ ಹತ್ತು ಶೇಕಡಾ ಭಾರತೀಯರು ನಿದ್ರಾ ರೋಗದಿಂದ ಬಳಲುತ್ತಾರೆ. ಆದರೆ ಅವರಿಗೆ ಅದರ ಬಗ್ಗೆ ಮತ್ತು ಅವರ ಆರೋಗ್ಯದ ಮೇಲೆ ಅದರ ಪರಿಣಾಮದ ಬಗ್ಗೆ ಅರಿವು ಇರುವುದಿಲ್ಲ ಎಂದು ಭಾರತದ ನಿದ್ರಾ ಆರೋಗ್ಯದ ಪರಿಣಿತ ಡಾ. ಮನ್ವೀರ್ ಭಾಟಿಯಾ ಹೇಳುತ್ತಾರೆ. ನಾವು ನಮ್ಮ ಜೀವನದ ಮೂರನೇ ಒಂದು ಭಾಗದಷ್ಟು ನಿದ್ರೆಯಲ್ಲಿ ಕಳೆಯುತ್ತೇವೆ. ಸಾಮಾನ್ಯ ವಿಶ್ರಾಂತಿಗಿಂತ ನಿದ್ರೆಯ ಉದ್ದೇಶ ಮಹತ್ವದ್ದಾಗಿರುತ್ತದೆ. ದೇಹವು ಗುಣವಾಗಲು ಇದು ಅನುವು ಮಾಡುತ್ತದೆ. ವಿಶೇಷವಾಗಿ, ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ನಿದ್ರೆಯ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅಗತ್ಯ. ಇದರಿಂದ ಪ್ರತಿಯೊಬ್ಬರೂ ಆರೋಗ್ಯವನ್ನು ಪ್ರಮುಖ ಆರೋಗ್ಯದ ಅಂಶವನ್ನಾಗಿ ಪರಿಗಣಿಸುತ್ತಾರೆ ಮತ್ತು ಇತರ ರೋಗಗಳಿಗೆ ಇದು ಸಂಬಂಧ ಹೊಂದಿದೆ ಎಂಬುದನ್ನು ಗುರುತಿಸುತ್ತಾರೆ. ವೈದ್ಯರು, ಸಾರ್ವಜನಿಕ ಅರಿವು ಕ್ಯಾಂಪೇನ್ಗಳು ಮತ್ತು ನಿದ್ರೆ ಕೋಚ್ ನೆರವಿನ ಮೂಲಕ ಇದನ್ನು ಸಾಧಿಸಬಹುದು. ಈ ಕ್ರಮಗಳು ಉತ್ತಮ ಗುಣಮಟ್ಟದ ನಿದ್ರೆಯ ಪ್ರಾಮುಖ್ಯತೆಯನ್ನು ಅರಿಯುವಲ್ಲಿ ಮಹತ್ವ ಕ್ರಮವಾಗುತ್ತವೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮುಂದುವರಿದ ಹಾಗೆಯೇ, ಆಸ್ಪತ್ರೆಯಿಂದ ಹೊರಗೆ ವೈದ್ಯರು ಮತ್ತು ರೋಗಿಗಳಿಗೆ ಉತ್ತಮವಾದ ಆರೈಕೆ ಮತ್ತು ನಿದ್ರೆಯ ಸಮಸ್ಯೆ ಪರಿಹಾರಕ್ಕೆ ರೆಸ್‏ಮೆಡ್ ನವೀನ ಮತ್ತು ಸಂಪರ್ಕಿತ ಪರಿಹಾರವನ್ನು ಒದಗಿಸುತ್ತಿದೆ. ತನ್ನ ನೆಟ್ವರ್ಕ್ನಲ್ಲಿ 10 ಮಿಲಿಯನ್ಗೂ ಹೆಚ್ಚು ಕ್ಲೌಡ್ ಸಂಪರ್ಕಿತ ಸಾಧನಗಳು ತಮ್ಮ ರೋಗಿಗಳನ್ನು ಮಾನಿಟರ್ ಮಾಡಲು ವೈದ್ಯರಿಗೆ ಅನುವು ಮಾಡುತ್ತಿದೆ. ಈ ಮೂಲಕ ಅವರು ಆರೋಗ್ಯ ಸಂಬಂಧಿ ಡೇಟಾವನ್ನು ಹಂಚಿಕೊಳ್ಳಬಹುದು ಮತ್ತು ನಿದ್ರಾ ರೋಗಗಳನ್ನು ತಡೆಯುವುದಕ್ಕಾಗಿ ಚಿಕಿತ್ಸೆ ಒದಗಿಸಬಹುದು.

ನಿಮ್ಮ ಸ್ಲೀಪ್ ಕೋಚ್ ಅಸಿಸ್ಟೆನ್ಸ್ ಬುಕ್ ಮಾಡಲು ಅಥವಾ ಸ್ಲೀಪ್ ಟೆಸ್ಟ್ ಮಾಡಿಸಿಕೊಳ್ಳಲು ಈ ಟೋಲ್ ಫ್ರೀ ನಂಬರ್ಗೆ ಈಗಲೇ ಕರೆ ಮಾಡಿ - 1800-103-3969.

ಡಿಸ್ಕ್ಲೇಮರ್: ಈ ಲೇಖನಕ್ಕೆ ವಿಷಯವನ್ನು ರೆಸ್‏ಮೆಡ್ ಕೊಟ್ಟಿರುತ್ತದೆ. ಟಿಎನ್‌ಐಇ ಗ್ರೂಪ್ ನ ಯಾವುದೇ ಪತ್ರಕರ್ತ ಈ ಲೇಖನದ ವಿಷಯದ ಬರಹದಲ್ಲಿ/ರಚನೆಯಲ್ಲಿ ಭಾಗಿಯಾಗಿಲ್ಲ.


Stay up to date on all the latest ವಾಣಿಜ್ಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp