ಚಿನ್ನ, ಬೆಳ್ಳಿ ಖರೀದಿದಾರರಿಗೆ ಶಾಂಕಿಂಗ್ ನ್ಯೂಸ್: ಬೆಲೆಯಲ್ಲಿ ತೀವ್ರ ಹೆಚ್ಚಳ!
ಚಿನ್ನಿವಾರ ಪೇಟೆಯಲ್ಲಿ ಚಿನ್ನ, ಬೆಳ್ಳಿ ಆಭರಣಗಳ ಬೆಲೆ ದುಬಾರಿಯಾಗಿದೆ. ಹೆಚ್ ಡಿಎಸ್ ಸಿ ಸೆಕ್ಯೂರಿಟಿಸ್ ಪ್ರಕಾರ ಇಂದು 675 ರೂ. ಹೆಚ್ಚಳದೊಂದಿಗೆ 10 ಗ್ರಾಂ ಚಿನ್ನದ ಬೆಲೆ 48 ಸಾವಿರದ 169 ಆಗಿದೆ.
Published: 02nd December 2020 08:05 PM | Last Updated: 02nd December 2020 08:05 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಚಿನ್ನಿವಾರ ಪೇಟೆಯಲ್ಲಿ ಚಿನ್ನ, ಬೆಳ್ಳಿ ಆಭರಣಗಳ ಬೆಲೆ ದುಬಾರಿಯಾಗಿದೆ. ಹೆಚ್ ಡಿಎಸ್ ಸಿ ಸೆಕ್ಯೂರಿಟಿಸ್ ಪ್ರಕಾರ ಇಂದು 675 ರೂ. ಹೆಚ್ಚಳದೊಂದಿಗೆ 10 ಗ್ರಾಂ ಚಿನ್ನದ ಬೆಲೆ 48 ಸಾವಿರದ 169 ಆಗಿದೆ. ಹಿಂದಿನ ವಹಿವಾಟಿನಲ್ಲಿ 10 ಗ್ರಾಮ್ ಚಿನ್ನದ ಬೆಲೆ 47, 494 ಆಗಿತ್ತು.
ಅದೇ ರೀತಿಯಲ್ಲಿ ಬೆಳ್ಳಿ ಬೆಲೆಯಲ್ಲೂ 1,280 ರೂ. ಏರಿಕೆ ಕಂಡಿದ್ದು, ಕೆಜಿ ಬೆಳ್ಳಿ ಬೆಲೆ 62, 496 ರೂ. ಆಗಿದೆ. ಈ ಹಿಂದೆ ಕೆಜಿ ಬೆಳ್ಳಿ ದರ 61, 216 ರೂಪಾಯಿಯಷ್ಟಿತ್ತು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನ 1,815 ಅಮೆರಿಕನ್ ಡಾಲರ್ ನಷ್ಟಿದ್ದರೆ , ಪ್ರತಿ ಔನ್ಸ್ ಬೆಳ್ಳಿ 23. 80 ಅಮೆರಿಕನ್ ಡಾಲರ್ ನಷ್ಟಿತ್ತು.
ಚಿನ್ನದ ಬೆಲೆಯಲ್ಲಿ ಬುಧವಾರ 1800 ಡಾಲರ್ ನಷ್ಟು ಏರಿಕೆಯಾಗಿರುವುದಾಗಿ ಹೆಚ್ ಡಿಎಫ್ ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ ತಪನ್ ಪಟೇಲ್ ತಿಳಿಸಿದ್ದಾರೆ.