ಚಿನ್ನದ ದರದಲ್ಲಿ ಭಾರಿ ಏರಿಕೆ, 10 ಗ್ರಾಮ್ ಬೆಳ್ಳಿಯ ರೇಟ್ ಎಷ್ಟು ಗೊತ್ತೇ?

ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಭಾರಿ ಏರಿಕೆಯಾಗಿದೆ. ಚಿನ್ನದ ದರ 816 ರೂಪಾಯಿ ಏರಿಕೆಯಾಗಿದ್ದು ಪ್ರತಿ 10 ಗ್ರಾಮ್ ಗೆ 49,430 ರೂಪಾಯಿ ಆಗಿದ್ದರೆ, ಬೆಳ್ಳಿಯ ದರ 3,063 ರೂಪಾಯಿ ಏರಿಕೆ ಕಂಡಿದ್ದು ಕೆ.ಜಿ ಬೆಳ್ಳಿ 61,298 ರೂಪಾಯಿಗಳಿಂದ 64,361 ಕ್ಕೆ ಏರಿಕೆಯಾಗಿದೆ. 
ಚಿನ್ನಾಭರಣ
ಚಿನ್ನಾಭರಣ

ನವದೆಹಲಿ: ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಭಾರಿ ಏರಿಕೆಯಾಗಿದೆ. ಚಿನ್ನದ ದರ 816 ರೂಪಾಯಿ ಏರಿಕೆಯಾಗಿದ್ದು ಪ್ರತಿ 10 ಗ್ರಾಮ್ ಗೆ 49,430 ರೂಪಾಯಿ ಆಗಿದ್ದರೆ, ಬೆಳ್ಳಿಯ ದರ 3,063 ರೂಪಾಯಿ ಏರಿಕೆ ಕಂಡಿದ್ದು ಕೆ.ಜಿ ಬೆಳ್ಳಿ 61,298 ರೂಪಾಯಿಗಳಿಂದ 64,361 ಕ್ಕೆ ಏರಿಕೆಯಾಗಿದೆ. 

ಚಿನ್ನದ ಈ ಹಿಂದಿನ ದರ 10 ಗ್ರಾಮ್ ಗೆ 48,614 ರೂಪಾಯಿಗಳಷ್ಟಿತ್ತು. ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ದರ 816 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆ ಕಂಡಿದೆ ಎಂದು ಹೆಚ್ ಡಿಎಫ್ ಸಿ ಸೆಕ್ಯುರಿಟೀಸ್ ನ ವಿಶ್ಲೇಷಕ ತಪನ್ ಪಟೇಲ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಹಸಿರು ಬಣ್ಣದಲ್ಲಿದ್ದು, ಔನ್ಸ್ ಗೆ 1,864 ಯುಎಸ್ ಡಾಲರ್ಸ್ ನಷ್ಟಿದ್ದರೆ, ಬೆಳ್ಳಿಯ ದರ ಪ್ರತಿ ಔನ್ಸ್ ಗೆ 24.52 ಯುಎಸ್ ಡಾಲರ್ಸ್ ನಷ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com