ಫ್ಲಿಪ್‌ಕಾರ್ಟ್, ಅಮೆಜಾನ್ ವಿರುದ್ಧ ಸಿಸಿಐ ಅರ್ಜಿ: ಹೈಕೋರ್ಟ್ ವಿಚಾರಣೆಗೆ ದಿನಾಂಕ ನಿಗದಿ

ಕರ್ನಾಟಕ ಹೈಕೋರ್ಟ್ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ವಿರುದ್ಧ ಭಾರತ ಸ್ಪರ್ಧಾ ಆಯೋಗ(Competition Commission of India-CCI)  ಸಲ್ಲಿಸಿದ್ದ ಅರ್ಜಿಯನ್ನು ಜನವರಿ 18 ರಂದು ವಿಚಾರಣೆ ನಡೆಸಲಿದೆ.
ಫ್ಲಿಪ್‌ಕಾರ್ಟ್, ಅಮೆಜಾನ್ ವಿರುದ್ಧ ಸಿಸಿಐ ಅರ್ಜಿ: ಹೈಕೋರ್ಟ್ ವಿಚಾರಣೆಗೆ ದಿನಾಂಕ ನಿಗದಿ

ನವದೆಹಲಿ: ಕರ್ನಾಟಕ ಹೈಕೋರ್ಟ್ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ವಿರುದ್ಧ ಭಾರತ ಸ್ಪರ್ಧಾ ಆಯೋಗ(Competition Commission of India-CCI)  ಸಲ್ಲಿಸಿದ್ದ ಅರ್ಜಿಯನ್ನು ಜನವರಿ 18 ರಂದು ವಿಚಾರಣೆ ನಡೆಸಲಿದೆ.

2020 ರ ಫೆಬ್ರವರಿಯಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ ತಡೆ ಆದೇಶದ ರದ್ದತಿಗಾಗಿ ಸಿಸಿಐಸಲ್ಲಿಸಿದ್ದ ಅರ್ಜಿಯ ವಿಷಯದಲ್ಲಿ ಅಕ್ಟೋಬರ್ 26 ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದ ಅನುಸಾರ ಹೈಕೋರ್ಟ್ ಈ ವಿಚಾರಣೆ ನಡೆಸುತ್ತದೆ. ಇದು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ವಿರುದ್ಧ ತನಿಖೆಗೆ ಸಂಬಂಧಿಸಿದೆ. 

ಕರ್ನಾಟಕ ಹೈಕೋರ್ಟ್‌ನ ತಡೆ ಆದೇಶ ರದ್ದುಗೊಳಿಸುವಂತೆ ಸಿಸಿಐಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದ  ವಿಚಾರ ಸಂಬಂಧ ಕರ್ನಾಟಕ ಹೈಕೋರ್ಟ್‌ನ ಏಕ ಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿದೆ. ವಾದ ಆಲಿಸಿದ ನ್ಯಾಯಾಧೀಶರು ಜನವರಿ 18 ರಂದು ಸಿಸಿಐ ಸಲ್ಲಿಸಿದ್ದ ಅರ್ಜಿಯನ್ನು ಒಳಗೊಂಡಂತೆ ಅಂತಿಮ ವಿಚಾರಣೆ ಆಲಿಸಲಾಗುವುದೆಂದು ತೀರ್ಮಾನಿಸಿದರು.

ಅಂತಿಮ ವಿಚಾರಣೆಗಾಗಿ , ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟವು (ಸಿಎಐಟಿ) ಸಲ್ಲಿಸಬೇಕಾದ ಸಲ್ಲಿಕೆಯನ್ನು ಕೇಳುವ ಅಗತ್ಯವಿಲ್ಲ ಎಂದು ಫ್ಲಿಪ್‌ಕಾರ್ಟ್ ವಕೀಲರು ಹೇಳಿದ್ದಾರೆ, ಇದನ್ನು ಸಿಎಐಟಿಯ ವಕೀಲರು ತೀವ್ರವಾಗಿ ಆಕ್ಷೇಪಿಸಿದರು. ಈ ವಾರಾಂತ್ಯದಲ್ಲಿ ಅಮೆಜಾನ್ ಸಲ್ಲಿಸಿದ ರಿಟ್ ಅರ್ಜಿಗೆ ಸಿಎಐಟಿ ತನ್ನ ಉತ್ತರವನ್ನು ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿದೆ. ದೆಹಲಿ ವ್ಯಪರ್ ಮಹಾಸಂಘ್ (ಡಿವಿಎಂ) ಮತ್ತು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಸಲ್ಲಿಸಿದ ಸಲ್ಲಿಕೆಯ ಅನುಸಾರವಾಗಿ ಸಿಸಿಐ ತನಿಖೆಯ ಆದೇಶವನ್ನು ಪ್ರಶ್ನಿಸಿ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಸಂಸ್ಥೆಗಳೆರಡೂ ಫೆಬ್ರವರಿ 2020 ರಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಲು ತೀರ್ಮಾನಿಸಿದ್ದವು.

ಆದರೆ ಏಕ ಸದಸ್ಯರ ನ್ಯಾಯಪೀಠ ತನಿಖೆಯನ್ನು ತಡೆಹಿಡಿಯಲು ಆದೇಶಿಸಿದರು, ಈ ಸಂಬಂಧ ಸಿಸಿಐ ಅಕ್ಟೋಬರ್ ನಲ್ಲಿ ಸುಪ್ರೀಂ ಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com